ಮೈಥಿಲೀ

Author : ಎಸ್. ಅನಂತನಾರಾಯಣ

Pages 120

₹ 8.00
Year of Publication: 1950
Published by: ಕನ್ನಡ ಕವಿ ಕಾವ್ಯಮಾಲೆ

Synopsys

ಮೈಥಿಲೀ ಎಂಬ ಪುಸ್ತಕವು ಎಸ್‌. ಅನಂತನಾರಾಯಣ ಅವರ ಕೃತಿಯಾಗಿದೆ. ಈ ಕೃತಿಯಲ್ಲಿ ಪಶ್ಚಾತ್ಯ ಪುಸ್ತಕ ಪ್ರಕಾಶಕರು ಅಂದಾಗ ಹೊರಡಿಸುವ ಕಧಾ ಸಂಗ್ರಹಗಳಲ್ಲಿ ಕಂಡುಬರುವ ವಿಷಯ ವೈಧ್ಯನನ್ನು ನೋಡಿದರೆ ಕರುಬು ವಂತಾಗುತ್ತದೆ. ಈ ಗುಣ ಈಚೆಗೆ ಕನ್ನಡ ಕಥೆಗಳಲ್ಲೂ ಸಚ್ಚುತ್ತಿರು ಇದು ಸಂತೋಷದ ವಿಷಯ ಕೆಲವು ವರ್ಷಗಳ ಕೆಳಗೆ ಕಥೆಗಳಲ್ಲಿ ಸಾಧಾರಣವಾಗಿ ಕಂಡುಬರುತ್ತಿದ್ದ ಯುವಕ-ಯುವತಿಯರ ಸರಸಾರಾಸ ಈಚೆಗೆ ಅಷ್ಟೇ ಸಾಧಾರಣವಾಗಿ ಕಂಡುಬರುತ್ತಿದ್ದ ಸ್ವಾತಂತ್ರ್ಯಾಕಾಂಕ್ಷೆ, ಒಡವರ ಸಂಕಟ-ಮುಂತಾದ್ದನ್ನು ಬದಿಗಿಟ್ಟು ಶ್ರೀ ಅನಂತನಾರಾಯಣ ರವರು ಹೊಸ ವಿಷಯಗಳನ್ನಾರಿಸಿಕೊಂಡಿದ್ದಾರೆ .

About the Author

ಎಸ್. ಅನಂತನಾರಾಯಣ
(30 November 1925 - 25 August 1992)

ಎಸ್. ಅನಂತನಾರಾಯಣ  ಕನ್ನಡದ ಪ್ರಗತಿಶೀಲ ಬರಹಗಾರರಲ್ಲಿ ಪ್ರಮುಖರೆನಿಸಿದ್ದಾರೆ. ಪ್ರೊ. ಅನಂತ ನಾರಾಯಣ ಅವರು ನವೆಂಬರ್ 30, 1925 ರಲ್ಲಿ ಮೈಸೂರಿನಲ್ಲಿ ಜನಿಸಿದರು. ತಂದೆ ಆರ್. ಸದಾಶಿವಯ್ಯನವರು ಮತ್ತು ತಾಯಿ ರಂಗಮ್ಮನವರು.  ಇಂಗ್ಲಿಷ್ ಸಾಹಿತ್ಯದಲ್ಲಿ ಬಿ.ಎ. (ಆನರ್ಸ್) ಮತ್ತು ಎಂ.ಎ. ಪದವಿಗಳನ್ನು ಪ್ರಪ್ರಥಮ ಶ್ರೇಣಿಯಲ್ಲಿ ಚಿನ್ನದ ಪದಕಗಳೊಂದಿಗೆ ಗಳಿಸಿದರು. ಅವರು ಮೈಸೂರು ವಿಶ್ವವಿದ್ಯಾನಿಲಯದ ಹಲವಾರು ಕಾಲೇಜುಗಳಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಸಂಗೀತ, ನಾಟಕ ಕಾಲೇಜಿನಲ್ಲಿ ಮೂರು ವರ್ಷ ನಾಟಕ ಶಾಸ್ತ್ರದ ಬೋಧಕರಾಗಿ, ನಾಟಕ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ಧಾರೆ.  ನವೋದಯ ಕಾಲದ ಬರಹಗಾರರು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದು ಸಹಜ ಕ್ರಿಯೆ. ...

READ MORE

Related Books