ಕಾಗದದ ದೋಣಿಗಳು

Author : ಪ್ರೇಮಶೇಖರ

Pages 128

₹ 120.00




Year of Publication: 2019
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪೀಕರ್ ಬೀದಿ, ಹುಬ್ಬಳ್ಳಿ, 580020
Phone: 08362367676

Synopsys

ಲೇಖಕ ಪ್ರೇಮಶೇಖರ ಅವರ ಕಥಾ ಸಂಕಲನ ‘ಕಾಗದದ ದೋಣಿ’. ಅನುಭವದ ಗಾಢತೆ ಪ್ರೇಮಶೇಖರ ಅವರ ಬರಹಗಳಲ್ಲಿ ಎದ್ದು ಕಾಣುತ್ತದೆ. ಅವರು ಕಂಡು ಕೇಳಿದ ಕಲ್ಪಿತ ಕತೆಗಳಲ್ಲೂ ವಾಸ್ತವಕ್ಕೆ ಕನ್ನಡಿ ಹಿಡಿಯುವ ಬರಹ ರೂಢಿಸಿಕೊಂಡವರು. ಅವರ ‘ಕಾಗದದ ದೋಣಿಗಳು’ ಬದುಕಿನ ವಿವಿಧ ಏರಿಳಿತಗಳನ್ನು ಪರಿಚಯಿಸುತ್ತದೆ. ನೋವು, ನಿಟ್ಟುಸಿರು, ಪ್ರೇಮ, ವೈರಾಗ್ಯ, ದುರಾಸೆಗಳ ನವಿರು ಚಿತ್ರಣದ ಹಾದಿ ಓದುಗರನ್ನು ಕಾಡುತ್ತದೆ.

About the Author

ಪ್ರೇಮಶೇಖರ
(22 June 1960)

ಹೊರನಾಡ ಕನ್ನಡಿಗ ಪ್ರೇಮಶೇಖರ ಪಠ್ಯವಿಷಯಗಳ ಬಗ್ಗೆ ಇಂಗ್ಲೀಷಿನಲ್ಲಿ ಸಂಶೋಧನಾ ಲೇಖನಗಳನ್ನು ಹಾಗೂ ಕನ್ನಡದಲ್ಲಿ ಕಥೆಕಾದಂಬರಿಗಳನ್ನು ಬರೆಯುವುದರ ಮೂಲಕ ಬರವಣಿಗೆಯನ್ನಾರಂಭಿಸಿದವರು.. ಹುಟ್ಟಿದ್ದು 1960 ಜೂನ್ 22 ಕೊಳ್ಳೇಗಾಲದಲ್ಲಿ. ದೆಹಲಿಯಲ್ಲಿ ವಿದ್ಯಾಭ್ಯಾಸ ಮಾಡಿ, ಇಪ್ಪತ್ತೆರಡು ವರ್ಷಗಳ ಸುಧೀರ್ಘ ಕಾಲ ಪಾಂಡಿಚೆರಿ ವಿಶ್ವವಿದ್ಯಾಲಯದಲ್ಲಿ ಭಾರತದ ವಿದೇಶಾಂಗ ನೀತಿಯನ್ನು ಬೋಧಿಸಿ 2012ರಲ್ಲಿ ಸ್ವಯಂನಿವತಿ ಪಡೆದುಕೊಂಡಿದ್ದಾರೆ. ಪತ್ರಿಕಾರಂಗದಲ್ಲಿರುವ ಹಿತೈಷಿಗಳ ಬಯಕೆಯಂತೆ ಅಂತರರಾಷ್ಟ್ರೀಯ ಸಂಬಂಧಗಳ ಬಗ್ಗೆ ಕನ್ನಡದಲ್ಲಿ ಐನೂರರಷ್ಟು ಲೇಖನಗಳನ್ನು ಬರೆದಿದ್ದಾರೆ. ಇದುವರೆಗೆ ಎರಡು ಕಾದಂಬರಿಗಳನ್ನೂ, ಹತ್ತು ಕಥಾ ಸಂಕಲನಗಳನ್ನೂ, ಹನ್ನೊಂದು ಲೇಖನ ಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಹಿತ್ಯಾಸಕ್ತರಿಗೆ ಕಥಾರಚನೆಯಲ್ಲಿ ತರಬೇತಿ ನೀಡುವ ಕಾರ್ಯಾಗಾರಗಳನ್ನು ...

READ MORE

Related Books