ವ್ಯಾಲಂಟೈನ್ಸ್‌ ಡೆ

Author : ಸಿದ್ದಾರೂಢ ಕಟ್ಟಿಮನಿ

Pages 104

₹ 100.00
Published by: ಸಂಜಯ್ ಪ್ರಕಾಶನ
Address: #656, 2ನೇ ಮಹಡಿ, ಕೂಗುಬಂಡೆ ರಸ್ತೆ, 'ಇ' ಮತ್ತು 'ಎಫ್' ಬ್ಲಾಕ್, ಕುವೆಂಪುನಗರ, ಮೈಸೂರು - 23
Phone: 9448350932

Synopsys

ಸಂಕ್ರಮಣ ಪ್ರಶಸ್ತಿ ಪುರಸ್ಕೃತ ಕತಾಸಂಕಲನ ಇದು-ವ್ಯಾಲೆಂಟ್ನ್ಸ್ ಡೆ. ಕೃತಿಗೆ ಬೆನ್ನುಡಿ ಬರೆದಿರುವ ಮನು ಬಳಿಗಾರ್‌ ಅವರು “ಯಾವುದೇ ಕಥೆ ಅಥವಾ ಕಾದಂಬರಿಯ ವಸ್ತು ಆ ಕಾಲಘಟ್ಟದ ಸಮಾಜದಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು, ಅದಕ್ಕೆ ಕಾರಣಗಳನ್ನು ಹುಡುಕುತ್ತಿರುತ್ತದೆ. ಇಲ್ಲವೇ ಆ ಸಮಸ್ಯೆಗಳಿಗೆ ಕಥೆಯ ಮೂಲಕ ಪರಿಹಾರದ ಹಾದಿಗಳನ್ನು ತೋರಿಸುವ ಕೆಲಸ ಮಾಡುತ್ತಿರುತ್ತದೆ. ಹಾಗೆಯೇ ಸಿದ್ಧಾರೂಢ ಗು. ಕಟ್ಟಿಮನಿ ಅವರ ಕಥೆಗಳು ಇವತ್ತಿನ ಬದುಕಿನ ತಲ್ಲಣಗಳನ್ನು ಪಲ್ಲಟಗಳನ್ನು ನಿರೂಪಿಸುವ ಮೂಲಕ ಮನುಷ್ಯ ಸಂಬಂಧಗಳಲ್ಲಿ ಉಂಟಾಗುತ್ತಿರುವ ಅಂತರದ ಬಗ್ಗೆ ಅನುಕಂಪವನ್ನು ಬಯಸುತ್ತವೆ. ಪ್ರೀತಿ -ಪ್ರೇಮ, ಹಳ್ಳಿಯ ಬದುಕು, ನಗರ ಜೀವನದ ಗೊಂದಲ, ಹುಟ್ಟು-ಸಾವಿನ ಸಂಬಂಧ. ದೆವ್ವ-ದೇವರು ಈ ನೆಲೆಯಲ್ಲಿ ಇಲ್ಲಿಯ ಕಥೆಗಳು ಹೆಚ್ಚು ಚರ್ಚೆಗೆ ಒಳಗಾಗುತ್ತಿವೆ” ಎಂದಿದ್ದಾರೆ.

About the Author

ಸಿದ್ದಾರೂಢ ಕಟ್ಟಿಮನಿ
(13 August 1984)

ಸಿದ್ಧಾರೂಢ ಕಟ್ಟಿಮನಿ ಅವರು ವಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ಜನಿಸಿದರು. ತಂದೆ- ಶ್ರೀ ಗುರುನಾಥ ಸಿ ಕಟ್ಟಿಮನಿ ಅವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ- ಶ್ರೀಮತಿ ಶಕುಂತಲಾ ಗು ಕಟ್ಟಿಮನಿ. ಸಿದ್ಧಾರೂಢ ಕಟ್ಟಿಮನಿ ಅವರು ಇಂಡಿಯಲ್ಲಿ ಪ್ರಾಥಮಿಕ ಶಿಕ್ಷಣ, ಫ್ರೌಢ ಶಿಕ್ಷಣ ಮುಗಿಸಿದರು. ಮ್ಯಾಟ್ರಿಕ್ ನಂತರ ಸಾಹಿತ್ಯ ಕೃಷಿ ಆರಂಭವಾಗಿತು. ಪದವಿ ಪೂರ್ವ ಶಿಕ್ಷಣ(ವಿಜ್ಞಾನ), ಸಿಂದಗಿಯಲ್ಲಿ ಪದವಿ(ವಿಜ್ಞಾನ)ಪೂರ್ಣಗೊಳಿಸಿದರು. ಆನಂತರ ಪ್ರೌಢ ಶಿಕ್ಷಕ ತರಬೇತಿ ಪಡೆದು ಪ್ರೌಢ ಶಿಕ್ಷಕ ಸೇವೆ ಆರಂಭಿಸಿದರು. ಪ್ರಥಮ ದರ್ಜೆ ಸಹಾಯಕರಾಗಿ ಹುದ್ದೆಗೆ ನೇಮಕವಾದರು. ಬಾಗಲಕೋಟೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಬೋಧಕೇತರ ವೃತ್ತಿ ಪ್ರಾರಂಭಿಸಿದರು.  ...

READ MORE

Related Books