ಪ್ರಸಿದ್ಧ ನಾಮಾ

Author : ಕೆ. ಸತ್ಯನಾರಾಯಣ

Pages 143

₹ 120.00




Year of Publication: 2011
Published by: ಸುಭಾಷ್ ಸ್ಟೋರ್
Address: ಬುಕ್ ಪ್ಯಾರಡೆಸ್, ಕೃಷ್ಣ ಬಿಲ್ಡಿಂಗ್, # 22-23 ಅವೆನ್ಯೂ ರೋಡ್, ಬೆಂಗಳೂರು- 560002

Synopsys

"ಕನ್ನಡದ ಕಥಾಶಿಲ್ಪ ಮಾಸ್ತಿ ಅವರ ಕಥನಶೈಲ ಇನ್ನು ಮುಗಿದ ಅಧ್ಯಾಯ ಎನಿಸಿದಾಗ, ಹೊಸಪೀಳಿಗೆಯ ಕತೆಗಾರ ಕೆ. ಸತ್ಯನಾರಾಯಣ ಮಾಸ್ತಿ ಶೈಲಿಯನ್ನು ಪುನರುಜೀವಗೊಳಿಸಿದವರಲ್ಲಿ ಮುಖ್ಯರು. ಇಲ್ಲಿಯ ಕತೆಗಳಲ್ಲಿ ಪ್ರಧಾನವಾಗಿ ಸತ್ಯನಾರಾಯಣರ ಚಿಂತನೆ, ಬರವಣಿಗೆ, ನಿರೂಪಣೆ, ಇಂದಿನ ಬದುಕಿನ ಹೊಸದಿಕ್ಕಿನಲ್ಲಿ ತನ್ನದೇ ತಾಜಾತನದ ಗತ್ತುಗಾರಿಕೆ, ಒತ್ತುಗಾರಿಕೆ ಅಲ್ಲದೇ ಸಾರ್ಥಕತೆಯಿಂದ ಹೊಮ್ಮಿವೆ. ಇವು ಓದುಗನನ್ನು ತನ್ನ ಕಕ್ಷೆಗೆಳೆದು ಚಿರಂತನ ಭಾಯಮಾಡುವ ಪ್ರಜ್ಞೆಯದು. ಅಂದರೆ ಕತೆ ಮತ್ತು ಓದುಗನ ನಡುವೆ ವಿಶ್ಲೇಷಣೆಯ ಯಾವ ಅಗತ್ಯವೂ ಕಾಣದಂತೆ ಪ್ರಕಾಶಿಸುವ ರೀತಿಯದು, ಸರಳ ಸುಂದರವೂ ಹೌದು.

ಈ ಸಂಗ್ರಹ 'ಪ್ರಸಿದ್ದ ನಾಮಾ' ಒಂಬತ್ತು ಕತೆಗಳ ಸಂಕಲನ. ರಾಷ್ಟ್ರದ, ರಾಜ್ಯದ ರಾಜಕಾರಣಿಗಳಲ್ಲದೇ ಸಾಂಸ್ಕೃತಿಕ, ಸಾಹಿತ್ಯಚಿಂತನೆ ಮುಂತಾದ ರಂಗದಲ್ಲಿ ಸಾರ್ವಜನಿಕರ, ಮುಖ್ಯವಾಗಿ ದುರ್ಬಲರ ಹಿತದ ಎಳೆಯೊಂದಿಗೆ ಹೊಮ್ಮಿದ, ಆ ಜನರ ಬಾಳಿಗೆ ಬೆಳಕಾಗುವಂತೆ ದೀವಟಿಗೆ ಹಿಡಿದ ಪ್ರಸಿದ್ಧರದು. ಅವರ ಯೋಚನೆ, ಯೋಜನೆ, ನಡೆನುಡಿ, ತೀರ್ಮಾನಗಳು ಇಲ್ಲಿಯ ಕತೆಗಳಿಗೆ ಪ್ರೇರಕ. ಚರಿತ್ರೆಯನ್ನು ಸಹಜ ಸ್ಥಿತಿಗೆಳೆದು ನೆನ್ನೆಯೊ, ಇಂದೋ ನಾಳೆಯೋ ನಡೆವಂತೆ ನಿರೂಪಿಸುವ ಕುಶಲತೆ ಮೆಚ್ಚುಗೆಯೊಂದಿಗೆ ತನ್ಮಯಗೊಳಿಸತ್ತದೆ. ಇಂತಹ ನಿತ್ಯನೂತನ ಕತೆಗಳನ್ನು ಮಾಸ್ತಿಯವರೂ ಬರೆದಿದ್ದರು ಎಂದು ಸತ್ಯನಾರಾಯಣರ ಕೊಡುಗೆಯ ಮೂಲಕ ಸ್ಮರಿಸಬಹುದಲ್ಲದೆ, ಕನ್ನಡದಲ್ಲಿ ಮಾಸ್ತಿ ಕಥನಶೈಲಿ ಮುನ್ನಡೆ ಸಾಧಿಸಿದೆ ಎಂದೂ ಸಂತೋಷಿಸಬಹುದು". ಎನ್ನುತ್ತಾರೆ ಲೇಖಕ ಮಾವಿನಕೆರೆ ರಂಗನಾಥ್. 

About the Author

ಕೆ. ಸತ್ಯನಾರಾಯಣ
(21 April 1954)

ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ.  1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ.  ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...

READ MORE

Related Books