ಕಪ್ಪು ಹುಡುಗಿ

Author : ದ.ಬಾ. ಕುಲಕರ್ಣಿ

Pages 92

₹ 14.00
Year of Publication: 1956
Published by: ಲಲಿತ ಸಾಹಿತ್ಯ ಮಾಲೆ
Address: ಧಾರವಾಡ.

Synopsys

ʼಕಪ್ಪು ಹುಡುಗಿʼ ಕಥಾ ಸಂಕಲನವು ಲೇಖಕ ದ. ಬಾ. ಕುಲಕರ್ಣಿ ಅವರಿಂದ ರಚಿತವಾಗಿದೆ. ಈಗಿನ ಎಚ್ಚೆತ್ತ ಹೆಣ್ಣು ನಮ್ಮ ಸಮಾಜವನ್ನು ಕಾಣುವ ರೀತಿ, ಆಕೆಯ ಆದರ್ಶ, ಅಸಹಾಯಕತೆ,ಎದೆಗಾರಿಕೆ ಇವೆಲ್ಲವನ್ನೂ ಲೇಖಕರು ಇಲ್ಲಿ ವಿವಿಧ ಬಗೆಯ ಕಥೆಗಳ ಮೂಲಕ ಚಿತ್ರಿಸಿದ್ದಾರೆ.

ದಾಂಪತ್ಯದಲ್ಲಿ ಪ್ರೀತಿ ವಿಲಕ್ಷಣ ರೂಪಗಳನ್ನೂ ವಿಚಿತ್ರ ಅವಸ್ಥೆಗಳನ್ನೂ ತಾಳುತ್ತದೆ ಎಂಬುದನ್ನೂ ಈ ಕೃತಿಯಲ್ಲಿ ಒಳನೋಟವಾಗಿ ಬಳಸಲಾಗಿದೆ. ಹಾಗಾಗಿ ಓದುಗರಿಗೆ ಒಂದು ಕಥೆಗಿಂತ ಇನ್ನೊಂದು ಕಥೆ ಬಿನ್ನವಾಗಿ ತೋರುತ್ತದೆ.ಇದರ ಜೊತೆಗೆ ಸಾಮಾಜಿಕ ಸಮಸ್ಯೆಗಳು ಸಾಹಿತ್ಯ ರಂಗದಲ್ಲೂ ಕಾಲು ಚಾಚಿವೆ ಎಂಬುದಾಗಿ ಲೇಖಕರು ಕೃತಿಯಲ್ಲಿ ವ್ಯಕ್ತಪಡಿಸುತ್ತಾರೆ.

About the Author

ದ.ಬಾ. ಕುಲಕರ್ಣಿ
(23 March 1916 - 11 August 1963)

ದ.ಬಾ. ಕುಲಕರ್ಣಿ ಎಂದು ಚಿರಪರಿಚಿತರಾಗಿರುವ ದತ್ತಾತ್ರೇಯ ಬಾಲಕೃಷ್ಣ ಕುಲಕರ್ಣಿ ಅವರು ನವೋದಯ ಕಾಲದ ಪ್ರಮುಖ ಲೇಖಕರಲ್ಲಿ ಒಬ್ಬರು. 1916ರಲ್ಲಿ ಜನಿಸಿದ ಅವರು ಧಾರವಾಡದಲ್ಲಿ ಲಲಿತ ಸಾಹಿತ್ಯ ಮಾಲೆ ಹಾಗೂ ಮನೋಹರ ಗ್ರಂಥ ಭಂಡಾರ ಆರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಕ್ಕಿ ನೋಟ (ವ್ಯಕ್ತಿ ಚಿತ್ರ), ನಾ ಕಂಡ ಗೌರಮ್ಮ (ವ್ಯಕ್ತಿ ಚಿತ್ರ), ಸಾವಧಾನ (ಪ್ರಬಂಧ ಸಂಕಲನ), ಕಪ್ಪು ಹುಡುಗಿ ( ಕಥಾ ಸಂಕಲನ), ನಾಳಿನ ಮನಸು ( ಕಥಾ ಸಂಕಲನ), ಹಾಸು ಹೊಕ್ಕು ( ಕಥಾ ಸಂಕಲನ) ಅವರ ಪ್ರಕಟಿತ ಕೃತಿಗಳು. ದ.ಬಾ. ಅವರು 1963ರಲ್ಲಿ ಅಸು ...

READ MORE

Related Books