ಲೇಖಕಿ ಶಾಂತಿ ಕೆ. ಅಪ್ಪಣ್ಣ ಅವರ ಕಥಾ ಸಂಕಲನ ’ಮನಸು ಅಭಿಸಾರಿಕೆ’.
ಇವರ ಅನೇಕ ಕತೆಗಳು ಆಧುನಿಕತೆಯ ಬಗ್ಗೆ ಮುಖಮಾಡಿವೆ. ಇಂದಿನ ಯುವಕ – ಯುವತಿಯರಿಗೆ ಮತ್ತು ಬರಲಿರುವ ಮುಂದಿನ ಪೀಳಿಗೆಯನ್ನು ಬದಲಾಗುತ್ತಿರುವ ಆಧುನಿಕತೆಯ ಬಗ್ಗೆ ಎಚ್ಚರಿಸುವ ಕರೆಗಂಟೆಯೂ ಈ ಕೃತಿಯಲ್ಲಿರುವಂತದ್ದು. ಬದುಕಿನ ಬಾಹ್ಯವನ್ನು ಆವರಿಸುವ ಕೊಳ್ಳುವಾಕ ಸಂಸ್ಕೃತಿಯ ಬಗ್ಗೆ ಕೆಲವು ಪ್ರಸ್ತಾಪಗಳನ್ನು ಈ ಕೃತಿಯಲ್ಲಿ ಚರ್ಚಿಸಲಾಗಿದೆ. ಆಧುನಿಕ ಮನಸ್ಸುಗಳಿಗೆ ಹೊಸತನವನ್ನೂ, ಹೊಸ ಹಂಬಲವನ್ನೂ ಹುಟ್ಟು ಹಾಕುವ ಪ್ರಯತ್ನವೂ ಇವರ ಕತೆಗಳಲ್ಲಿ ನಡೆದಿದೆ ಎನ್ನಬಹುದು.
ಕತೆಯು ಸಾಗುವ ನಿಟ್ಟಿನಲ್ಲಿ, ಧಾವಂತದ ಹಾದಿಯಲ್ಲಿ ಅಥವಾ ಸಾಮಾಜಿಕ ನ್ಯಾಯದ ಅರಸುವಿಕೆಯಲ್ಲಿ ತಾತ್ವಿಕ ಹುಡುಕಾಟವನ್ನು ಮರೆಯುತ್ತಿರುವ ಹಲವು ಸಂಗತಿಗಳನ್ನು ಮರು ಅವಲೋಕಿಸುವ ಪ್ರಯತ್ನವನ್ನು ’ಮನಸು ಅಭಿಸಾರಿಕೆ’ ಕೃತಿ ಮಾಡಿದೆ.