ಪುಟ್ಟನ ಹೆಜ್ಜೆ ಕಾಣೋದಿಲ್ಲಾ

Author : ಯಶವಂತ ಚಿತ್ತಾಲ

Pages 140

₹ 125.00




Year of Publication: 2007
Published by: ಪ್ರಿಸಂ ಬುಕ್ಸ್

Synopsys

ಯಶವಂತ ಚಿತ್ತಾಲರ ಒಂಬತ್ತನೆಯ ಕಥಾಸಂಕಲನ ‘ಪುಟ್ಟನ ಹೆಜ್ಜೆ ಕಾಣೋದಿಲ್ಲಾ’. ಈ ಸಂಕಲನದಲ್ಲಿ ಏಳು ಕಥೆಗಳಿವೆ. ’ಯಾರ ಕಥೆ ಯಾರು ಹೇಳಿದ್ದು?', 'ನಮ್ಮೆಲ್ಲರ ಸುಂದರಿ', 'ಈಗ ನನ್ನನ್ನೇ ತೆಗೆದುಕೊ’, ’ಕಾಮಾಕ್ಷಿ ಮಾಡಲೆಳಸಿದ ಅತಿ ದಿಟ್ಟ ಕೆಲಸ', 'ಕುಂಟನ್ಮನೆ ಬೀರ', 'ಪುಟ್ಟನ ಹೆಜ್ಜೆ ಕಾಣೋದಿಲ್ಲ!', 'ತುಸು ತಡೆದು ಪ್ರಯತ್ನಿಸಿರಿ'-ಎಂಬ ಕಥೆಗಳಿವೆ. ಚಿತ್ತಾಲರ ಕತೆಗಳ ಕತೆಗಳಿಗೇ ವಿಶಿಷ್ಟ ಎನ್ನಿಸುವ ಶೀರ್ಷಿಕೆಗಳಲ್ಲಿನ ಕಥೆಗಳ ಹರವು ಮತ್ತು ಬಂಧಗಳು ಕಥಾಪ್ರಪಂಚದಲ್ಲಿ ಈಗಲೂ ನಡೆಸಲು ಸಾಧ್ಯವಾಗದ ಪ್ರಯೋಗಕ್ಕೆ ನಿದರ್ಶನವಾಗಿವೆ.

ಜಟಿಲ ಸನ್ನಿವೇಶಗಳು ಹಾಗೂ ಇಡಿಕಿರಿದ ಕಥಾನಕವು ನಿಧಾನವಾಗಿ ಹರಿಯುವ ನದಿಯೊಂದರ ಗಂಭೀರ ನಡೆಯನ್ನು ನೆನಪಿಸುವ ಹಾಗಿದೆ. ಸಂಯಮದ ನಿರೂಪಣೆ ಇಲ್ಲಿನ ಕತೆಗಳ ವಿಶೇಷ. ಸಂಕೀರ್ಣ ವಾಕ್ಯ ಸರಣಿಯು ಪ್ರತಿ ಕಥೆಯಲ್ಲಿಯೂ ಕಾಣಿಸುವ ಮೂಲಕ 'ಚಿತ್ತಾಲ ಮುದ್ರೆ’ಯಾಗಿದೆ. ಉತ್ತರ ಕನ್ನಡದ ಪ್ರಾದೇಶಿಕ ಲಕ್ಷಣ ಬಿಂಬಿಸುವ ಅವರ 'ಹನೇಹಳ್ಳಿ'ಯಲ್ಲಿ ಇಲ್ಲಿನ ಕೆಲವು ಕಥೆಗಳಲ್ಲಿ ಘಟನೆಗಳು ನಡೆಯುತ್ತವೆ. ಕೆಲವು ಕತೆಗಳಲ್ಲಿ ಹನೇಹಳ್ಳಿ ಇಲ್ಲವಾದರೂ ಆದರೆ ಅದರ ಛಾಯೆ ಅನುಭವಕ್ಕೆ ಬರದೇ ಇರದು.

About the Author

ಯಶವಂತ ಚಿತ್ತಾಲ
(03 August 1928 - 22 March 2014)

ತಮ್ಮ ಸಣ್ಣಕತೆಗಳ ಮೂಲಕ ಆಧುನಿಕ ಕನ್ನಡ ಕಥಾಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು ಯಶವಂತ ಚಿತ್ತಾಲ.  ಅವರೊಬ್ಬ ಮಹತ್ವದ ಲೇಖಕ. ನವ್ಯ ಸಾಹಿತ್ಯದ ಪ್ರಮುಖ ಕತೆಗಾರ ಚಿತ್ತಾಲರು ಕತೆ ಹೇಳುವುದರಲ್ಲಿ ಸಿದ್ಧಹಸ್ತರು. ಕತೆಗಳ ಮೂಲಕ ಬರವಣಿಗೆ ಆರಂಭಿಸಿದ ಯಶವಂತರ ಮೊದಲ ಕತೆ 'ಬೊಮ್ಮಿಯ ಹುಲ್ಲು ಹೊರೆ'. ಅವರ ಮೊದಲ ಕತೆಯನ್ನು ಕನ್ನಡದ ಮಹತ್ವದ ಕತೆಗಳಲ್ಲಿ ಒಂದು ಗುರುತಿಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹನೇಹಳ್ಳಿಯವರಾದ ಯಶವಂತ ಅವರು 1928ರ ಆಗಸ್ಟ್ 3ರಂದು ಜನಿಸಿದರು. ತಂದೆ ವಿಠೋಬ, ತಾಯಿ ರುಕ್ಕಿಣಿ. ಖ್ಯಾತ ಕವಿ ಗಂಗಾಧರ ಚಿತ್ತಾಲರು ಅವರ ಹಿರಿಯ ಸಹೋದರ. ಹನೇಹಳ್ಳಿ, ಕುಮಟೆ, ಧಾರವಾಡ, ಮುಂಬಯಿಗಳಲ್ಲಿ ...

READ MORE

Related Books