ನಾನು ಬಡವ ನಾನೇ ಸುಖಿ

Author : ಜೋಗಿ (ಗಿರೀಶ್ ರಾವ್ ಹತ್ವಾರ್)

Pages 252

₹ 180.00




Year of Publication: 2020
Published by: ಸಾವಣ್ಣ ಎಂಟರ್ ಪ್ರೈಸಸ್
Address: ಬೆಂಗಳೂರು

Synopsys

‘ನಾನು ಬಡವ ನಾನೇ ಸುಖಿ’ ಲೇಖಕ ಜೋಗಿ ಅವರ ಕಥಾ ಸಂಕಲನ. ಈ ಕೃತಿಗೆ ನನ್ನಮ್ಮ ಹೇಳಿದ ಬಡತನದ ಕತೆಗಳು ಎಂಬ ಉಪ ಶೀರ್ಷಿಕೆ ನೀಡಿದ್ದಾರೆ. ಪುಸ್ತಕದ ಕುರಿತು ಬರೆಯುತ್ತಾ ‘ನನ್ನ ಅಮ್ಮ ನನ್ನಲ್ಲಿ ಹೇಗೆ ನೆಲೆಸಿದ್ದಾರೆ ಅಂತ ನೋಡುವ ಪ್ರಯತ್ನವಾಗಿ ಈ ಪುಸ್ತಕ ಹೊರಬರುತ್ತಿದೆ. ಪ್ರತಿಯೊಬ್ಬರಲ್ಲೂ ಅಮ್ಮ ಅವ್ಯಕ್ತ ಪೋಷಕಾಂಶವಾಗಿ ಜೀವಂತವಾಗಿರುತ್ತಾಳೆ. ಅಮ್ಮನ ನೆನಪಿನಿಂದ ಪಾರಾಗುವುದಕ್ಕೆ ನಮಗೆ ಸಾಧ್ಯವೇ ಆಗುವುದಿಲ್ಲ. ಪಾರಾಗುವ ಉದ್ದೇಶವೂ ನಮಗಿರುವುದಿಲ್ಲ. ಅಮ್ಮ ಕಲಿಸಿದ ಎಷ್ಟೋ ಸಂಗತಿಗಳು ನಮ್ಮನ್ನು ಕೊನೆ ತನಕವೂ ಕೈ ಹಿಡಿಯುತ್ತವೆ ಅನ್ನುವುದನ್ನು ನಾನು ಕಂಡಿದ್ದೇನೆ. ಬಾಲ್ಯದಲ್ಲಿ ಅಮ್ಮ ಹೇಳಿದಾಗ ರೋಧಿಸಿದಂಥ ಎಷ್ಟೋ ಸಂಗತಿಗಳನ್ನು ನಾನೇ ಈಗ ಹೇಳುತ್ತಿರುವುದು ಕೂಡ ನನ್ನನ್ನು ಅಚ್ಚರಿಗೊಳಿಸಿದೆ’ ಎನ್ನುತ್ತಾರೆ ಜೋಗಿ. ಅವರ ಅಮ್ಮ ಹೇಳಿದ ಕತೆಗಳಿಗೆ ಮರುರೂಪ ನೀಡುವ ಕೆಲಸವನ್ನು ಈ ಕೃತಿಯ ಮೂಲಕ ಮಾಡಿದ್ದಾರೆ.

About the Author

ಜೋಗಿ (ಗಿರೀಶ್ ರಾವ್ ಹತ್ವಾರ್)
(16 November 1965)

ಜೋಗಿ, ಜಾನಕಿ, ಎಚ್‌. ಗಿರೀಶ್‌ ರಾವ್, ಸತ್ಯವ್ರತ...... ಹೀಗೆ ವಿವಿಧ ಅಂಕಿತನಾಮಗಳ ಮೂಲಕವೇ ಓದುಗರನ್ನು ತಲುಪಿದವರು ಗಿರೀಶ್‌ ರಾವ್‌ ಹತ್ವಾರ್‌ (ಜೋಗಿ). ವೃತ್ತಿಯಲ್ಲಿ ಪತ್ರಕರ್ತರಾಗಿರುವ ಜೋಗಿ ಅವರು ಹುಟ್ಟಿದ್ದು 1965 ನವೆಂಬರ್‌ 16ರಂದು. ಮೂಲತಃ ಸೂರತ್ಕಲ್‌ ಸಮೀಪದ ಹೊಸಬೆಟ್ಟು ಊರಿನವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.  ಹಾಯ್‌ ಬೆಂಗಳೂರು ವಾರಪತ್ರಿಕೆಯಲ್ಲಿ ‘ರವಿ ಕಾಣದ್ದು’, ‘ಜಾನಕಿ ಕಾಲಂ’ ಅಂಕಣ ಬರಹಗಳ ಮೂಲಕ ಓದುಗರಿಗೆ ಪರಿಚಯವಾದ ಜೋಗಿ ಅವರು ಪ್ರಸ್ತುತ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ವೃತ್ತಿ ಜೊತೆ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಹಲವಾರು ಕೃತಿಗಳನ್ನು ...

READ MORE

Related Books