ಹೊಡಿ ಚಕ್ಕಡಿ

Author : ಬಸು ಬೇವಿನಗಿಡದ

₹ 60.00




Year of Publication: 2013
Published by: ಮನೋಹರ ಗ್ರಂಥ ಮಾಲಾ
Address: ಲಕ್ಷ್ಮಿಭವನ, ಸುಭಾಷ್ ರಸ್ತೆ, ಧಾರವಾಡ - 580001.
Phone: 9845447002

Synopsys

ಲೇಖಕ ಡಾ. ಬಸು ಬೇವಿನಗಿಡದ ಅವರ ಕತೆಗಳ ಸಂಕಲನ ಕೃತಿ ‘ಹೊಡಿ ಚಕ್ಕಡಿ’. ಹೊಡಿ ಚಕ್ಕಡಿ ಎಂದರೆ ಉತ್ತರ ಕರ್ನಾಟಕದಲ್ಲಿ ಬಳಸುವ ಗಾದೆಮಾತಾಗಿದೆ. ‘ಮುನ್ನುಗ್ಗು’ ‘ಮುನ್ನಡೆ’, ‘ಮುಂದುವರಿ’, ‘ನಿನಗೆ ತಿಳಿದಂತೆ ಮಾಡು’ ಮುಂತಾದ ಅರ್ಥಗಳನ್ನು ಇದು ಧ್ವನಿಸುತ್ತದೆ. ಬಸು ಅವರ ಕತೆಗಳೆಲ್ಲ ಜೀವನದ ವಿವಿಧ ಮಗ್ಗಲುಗಳನ್ನು ಪ್ರತಿನಿಧಿಸುತ್ತವೆ. ಇತ್ತೀಚಿನ ದಿನಮಾನಗಳಲ್ಲಿ ಅತೀ ಮಾಮೂಲಾಗಿರುವ ‘ಬಾಡಿಗೆ ಲೇಖಕ’ರ ಕುರಿತು ಬಂದಿರುವ ಕತೆ ಅತ್ಯಂತ ಸಮಯೋಚಿತವಾಗಿದೆ. ಸಾರ್ವಜನಿಕ ಜೀವನದಲ್ಲಿ ‘ಡಮ್ಮಿ’ ಲೇಖನದಿಂದಲೆ ಮುಂದೆ ಬಂದ ವ್ಯಕ್ತಿ ನಿಜವಾಗಿಯೂ ಓದಿ ತಿಳಿದುಕೊಂಡು ಬುದ್ಧಿವಂತನಾಗಿ ‘ಡಮ್ಮಿ’ ಲೇಖಕನನ್ನೇ ಪರೀಕ್ಷೆಯಲ್ಲಿ ಸೋಲಿಸಿ, ಗೆಲುವನ್ನು ಸಂಪಾದಿಸುವದು ವಿರಳವಾದರೂ ಆಸಾಧ್ಯವೇನಲ್ಲ ಎಂದು ಹೇಳುತ್ತದೆ ಆ ಕಥೆ. 

About the Author

ಬಸು ಬೇವಿನಗಿಡದ
(12 July 1964)

ಕಥೆಗಾರ  ಹಾಗೂ ಅನುವಾದಕ ಬಸು ಬೇವಿನಗಿಡದ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವೀಧರರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಬೇಂದ್ರೆ ಕಾವ್ಯ ಪ್ರಬಂಧ ಮಂಡನೆ ಮಾಡಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಪ್ರಸ್ತುತ ಧಾರವಾಡ ಆಕಾಶವಾಣಿಯಲ್ಲಿ ಕಾರ್ಯಕ್ರಮ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ತಾಯವ್ವ, ಬಾಳೆಯ ಕಂಬ, ಹೊಡಿ ಚಕ್ಕಡಿ, ಉಗುಳುಬುಟ್ಟಿ , ನೆರಳಿಲ್ಲದ ಮರ, ಬೀಳದ ಗಡಿಯಾರ  (ಕಥಾ ಸಂಕಲನಗಳು), ಕನಸು, ಇಳೆಯ ಅರ್ಥ (ಕವನ ಸಂಕಲನಗಳು), ದಕ್ಕದ ಕಾಡು (ಅನುವಾದಿತ ಕಥೆಗಳ ಸಂಕಲನ) ಬಿ.ಎ. ಸನದಿ (ಜೀವನಚಿತ್ರ) , ನಾಳೆಯ ಸೈರ್ಯ, ಓಡಿ ಹೋದ ಹುಡುಗ ...

READ MORE

Related Books