ಗೆಂಡೆದೇವ್ರು

Author : ಹನುಮಂತ ಹಾಲಿಗೇರಿ

Pages 120

₹ 100.00




Published by: ಕಾವ್ಯಮನೆ ಪ್ರಕಾಶನ
Address: ಬಳ್ಳಾರಿ

Synopsys

ಹನುಮಂತ ಹಾಲಿಗೇರಿ ಅವರ ಎರಡನೆಯ ಸಂಕಲನ. ಈ ಸಂಕಲನದಲ್ಲಿ ಹಾಲಿಗೇರಿಯ ಅವರ ಮಹತ್ವದ ಕತೆಗಳಿವೆ.

ಈ ಸಂಕಲನಕ್ಕೆ ಬೆನ್ನುಡಿ ಬರೆದಿರುವ ರಹಮತ್ ತರೀಕೆರೆ ಅವರು ಕತೆಗಳನ್ನು ಹೀಗೆ ವಿವರಿಸಿದ್ದಾರೆ: 

ಅಂತಃಕರಣ ಕಲಕುವ ಕತೆಗಳನ್ನು ಬರೆಯುತ್ತಿರುವ ಕತೆಗಾರರಲ್ಲಿ ಒಬ್ಬರಾಗಿರುವ ಹಾಲಿಗೇರಿ, ಯಾಕೋ ಏನೋ, ಸಮಾಜದ ಅಧೋಲೋಕದ ವಸ್ತುಗಳನ್ನೇ ಹೆಚ್ಚಾಗಿ ತುಡುಕುತ್ತಾರೆ. ಅವರ ಕತೆಗಳು ವಸ್ತುವಿನ ದೃಷ್ಟಿಯಿಂದ ತಮಿಳಿನ ಜಯಕಾಂತನ್ ಅವರ `ನಂದನವನತ್ತಿಲ್ ಒರು ಅಬಿಡಿ’,  ಪ್ರೇಮಚಂದರ ’ಕಫನ್‌' ಕುಂ.ವೀ.ಯವರ 'ದೇವರ ಹೆಣ'ಗಳನ್ನು ನೆನಪಿಸುತ್ತವೆ. ಇಲ್ಲಿನ ಕತೆಗಳಲ್ಲಿ ದಾರುಣತೆ ಉಸಿರುಗಟ್ಟಿಸುವಂತೆ ಆವರಿಸಿಕೊಳ್ಳುತ್ತದೆ. ಕತೆಗಳು ಒಂದೇ ಭಾವದ ಹುದುಲಲ್ಲಿ ಸಿಲುಕದೆ ಲೋಕದ ಹಲವು ಮೊಗಗಳನ್ನು ಕಾಣಿಸುವತ್ತ ಹೊರಳಿಕೊಳ್ಳಬೇಕಿದೆ; ಪಾತ್ರಗಳಾಡುವ ಜೀವಂತ ಭಾಷೆಯನ್ನು ನಿರೂಪಣೆಗೂ ಬಳಸುವ ಪ್ರಯೋಗ ದಿಟ್ಟವಾಗಿದೆ. ಆದರೆ ಅದು ಮತ್ತಷ್ಟು ಧ್ವನಿಪೂರ್ಣತೆಗೆ ಬೇಕಾದ ತಾಳ್ಮೆಯನ್ನು ಗಳಿಸಬೇಕಿದೆ. ಮತ ಧರ್ಮ ಜಾತಿ ಭಾಷೆಗಳಾಚೆ ಎಲ್ಲ ಜೀವಿಗಳಲ್ಲೂ ತುಡಿಯುವ ಮನುಷ್ಯತ್ವವನ್ನು ಕತೆಗಳು ಹುಡುಕುತ್ತಿವೆಯಾಗಿ, ಅವುಗಳ ನರಗಳಲ್ಲಿ ಆಕ್ರೋಶ ಮತ್ತು ವಿಷಾದಗಳು ಹೊರಚಿಮ್ಮಲು ತವಕಿಸುತ್ತಿವೆ.

About the Author

ಹನುಮಂತ ಹಾಲಿಗೇರಿ
(20 October 1980)

ಬಾಗಲಕೋಟೆ ಸಮೀಪದ ತುಳಸಿಗೇರಿಯವರಾದ ಹನಮಂತ ಹಾಲಿಗೇರಿಯವರು ಬಸವೇಶ್ವರ ಕಾಲೇಜಿನಲ್ಲಿ ಬಿ.ಎ. ವಿದ್ಯಾರ್ಥಿಯಾಗಿದ್ದರೂ ಅದನ್ನು ಅರ್ಧಕ್ಕೆ ಕೈ ಬಿಟ್ಟು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಗ್ರಾಮೀಣ ಅಭಿವೃದ್ಧಿ ವಿಭಾಗದಲ್ಲಿ ಪದವಿ ಪಡೆದರು. ಸರ್ವ ಶಿಕ್ಷಣ ಅಭಿಯಾನದ ಟೀಚರ್ ಆಗಿ ಮೂರು ವರ್ಷಗಳ ಕಾಲ ಗ್ರಾಮೀಣ ಗುರುಕುಲ ನಡೆಸಿರುವ ಅವರು, ನಂತರ ‘ಭೈಪ್’ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸೇರಿ ಅಲ್ಲಿಯೂ ಮೂರು ವರ್ಷ ಕೆಲಸ ಮಾಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಮಾಡುವ ಉದ್ದೇಶದಿಂದ ನಿಸರ್ಗ ಮಿಲ್ಕ್ ಡೈರಿ ಸಂಸ್ಥೆ ಕಟ್ಟಿದ್ದರು. ಕೆಂಗುಲಾಬಿ ಕಾದಂಬರಿ ಪ್ರಕಟಿಸುವ ಮುನ್ನ ಅವರು ಎಂಟನೇ ತರಗತಿಯಲ್ಲಿದ್ದಾಗ ‘ರೊಚ್ಚಿಗೆದ್ದ ...

READ MORE

Related Books