ಪ್ರತಿಮೆ ಇಲ್ಲದ ಊರು

Author : ಸಂತೆಕಸಲಗೆರೆ ಪ್ರಕಾಶ್‌

Pages 144

₹ 150.00




Year of Publication: 2023
Published by: ಅಂಕಿತ ಪುಸ್ತಕ
Address: #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

ಸಂತೆಕಸಲಗೆರೆ ಪ್ರಕಾಶ್ ಅವರ `ಪ್ರತಿಮೆ ಇಲ್ಲದ ಊರು’ ಕಥಾಸಂಕಲನವಾಗಿದೆ. ಈ ಸಂಕಲನದಲ್ಲಿರುವ ಕಥೆಗಳ ಕಲಾತ್ಮಕ ಯಶಸ್ಸು ಮತ್ತು ಮಿತಿಗಳನ್ನು ಕುರಿತು ಬರೆಯುವುದಕ್ಕಿಂತಲೂ ಹೆಚ್ಚು ಸಂತೆಕಸಲಗೆರೆ ಪ್ರಕಾಶ್ ಅವರು ಇಲ್ಲಿ ತೋರಿರುವ ಆಸಕ್ತಿ, ಒತ್ತಾಸೆಗಳ ಬಗ್ಗೆ ನಮಗೆ ಮೆಚ್ಚುಗೆ ಮೂಡುತ್ತದೆ. ಅವರು 'ನಿಶ್ಯಬ್ದವನ್ನು ಪ್ರಶ್ನಿಸಿದ ಜೋಕಾಲಿಯ ಜೀಕು' ಎಂಬ ತಮ್ಮ ಮುಮ್ಮಾತುಗಳಲ್ಲಿ ಗಾಂಧೀ ಚಿಂತನೆಯ ಸಮಕಾಲೀನ ಅಗತ್ಯದ ಬಗ್ಗೆ ಆಶಾವಾದಿಯಾಗಿದ್ದಾರೆ. ತಮ್ಮ ಕಥಾಪಾತ್ರಗಳು ಗಾಂಧಿ ವ್ಯಕ್ತಿತ್ವವನ್ನು ಅಳವಡಿಸಿಕೊಳ್ಳಲು ಹಾಗೂ ಅಂಥ ಮಾರ್ಗಕ್ಕಾಗಿ ತುಡಿಯುವ ಜೀವಗಳು ಎನ್ನುತ್ತಾರೆ. ಅವರ ಪ್ರಕಾರ ಅವರ ಕಥೆಗಳಲ್ಲಿ ಗಾಂಧಿ ಒಂದು ಸಂಚಾರಿ ಹಾಗೂ ಸ್ಥಾಯಿಭಾವ. ಪ್ರಕಾಶ್ ಅವರು ಗಾಂಧೀ ಮೌಲ್ಯಗಳಾದ ಅಹಿಂಸೆ ಮತ್ತು ಮನುಷ್ಯನ ಮನಃಪರಿವರ್ತನೆಯ ಬಗ್ಗೆ ಅಪಾರ ವಿಶ್ವಾಸವನ್ನು ಪ್ರಕಟಿಸುತ್ತಾರೆ. ಇಲ್ಲಿನ ಯಾವ ಕಥೆಯಲ್ಲೂ ಗಾಂಧೀಜಿಯ ನೇರ ಪ್ರವೇಶವಿಲ್ಲ. ಅವರ ವ್ಯಕ್ತಿತ್ವ ಪ್ರೇರಣೆಗಳನ್ನು ಸಾಂಕೇತಿಕವಾಗಿ ಪ್ರತಿಮೆ ರೂಪಕಗಳ ನೆಲೆಯಲ್ಲಿ ಚಿತ್ರಿಸಲಾಗಿದೆ. ಲೇಖಕರು ಸಮಕಾಲೀನ ಭಾರತದ ಅನೇಕ ವೈದೃಶ್ಯಗಳನ್ನು, ಭ್ರಷ್ಟ ವ್ಯವಸ್ಥೆಯನ್ನು ಮತ್ತು ಸಮಾಜದಲ್ಲಿನ ನೈತಿಕ ಅಧಃಪತನವನ್ನು ಚಿತ್ರಿಸುತ್ತಾ ಅವುಗಳನ್ನು ಗಾಂಧೀ ಮೌಲ್ಯಗಳಿಗೆ ಮುಖಾಮುಖಿಯಾಗಿಸುತ್ತಾರೆ.

About the Author

ಸಂತೆಕಸಲಗೆರೆ ಪ್ರಕಾಶ್‌

ಮಂಡ್ಯ ಜಿಲ್ಲೆಯ ಸಂತೆಕಸಲಗೆರೆ ಗ್ರಾಮದವರು. ತಂದೆ ತಿಮ್ಮಪ್ಪಯ್ಯ ,ತಾಯಿ ಲಕ್ಷ್ಮಮ ,ಪ್ರಸ್ತುತ ಹೊಸದಿಗಂತ ದಿನಪತ್ರಿಕೆ , ಹಿರಿಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ಸಮ್ಮಿಲನ(ಕವನ ಸಂಕಲನ-1993), ವಳ್ಳೂರ ನೆನೆದೇನು (1996). ಮುತ್ತಕೇರೋಕೆ ಮೊರವಾದ (1998), (ಗ್ರಾಮಗಳ ಸ್ಥಳ ಪುರಾಣ ಕುರಿತ ಜಾನಪದ ಕೃತಿಗಳು), ಭಾಗಾಯ(1999) (ತೋಟದ ಬೆಳೆಗಳು  ಕುರಿತು ಜಾನಪದ ಅಧ್ಯಯನ ಕೃತಿ) ಒಂದು ಸ್ವರ್ಗಕ್ಕಾಗಿ ,ಕರಗಿ ಹೋದವಳು, ನೀರು ನಿಂತ ನೆಲ, ಕತೆಗೂ ಊರಿಗೂ ಅಪಾರ ನಂಟು ( ಸಮಗ್ರ ಕತೆಗಳು)  ಮೆಲ್ಲಗೆ ಹಬ್ಬಿತ್ತು ಮಲ್ಲಿಗೆ ಗಮಲು ( ಜಾನಪದ ಗ್ರಾಮಗಳ ಆಧ್ಯಯನ). ಗ್ರಾಮಗಳ ಕುರಿತ ಸ್ಥಳಪುರಾಣ, ಜಾನಪದ ಅಧ್ಯಯನ ...

READ MORE

Related Books