ರೆಕ್ಕೆಹಾವು

Author : ಟಿ.ಕೆ. ದಯಾನಂದ್

Pages 112

₹ 100.00
Year of Publication: 2012
Published by: ಅಹರ್ನಿಶಿ ಪ್ರಕಾಶನ
Address: ಜ್ಞಾನವಿಹಾರ ಬಡಾವಣೆ, ಕಂಟ್ರಿ ಕ್ಲಬ್ ಎದುರು, ವಿದ್ಯಾನಗರ, ಶಿವಮೊಗ್ಗ- 577203
Phone: 9449174662

Synopsys

‘ರೆಕ್ಕೆಹಾವು’ ಕನ್ನಡ ಕಥೆಗಾರರಲ್ಲಿ ಬಹುಮುಖ್ಯರಾದ ಟಿ.ಕೆ ದಯಾನಂದ್ ಅವರ ಕಥಾಸಂಕಲನ. ಟಿ.ಕೆ.ದಯಾನಂದ್ ಅವರ ಕಥಾಲೋಕ ನಮ್ಮನ್ನು ಬೆಚ್ಚಿಸುತ್ತದೆ, ಅಣಕಿಸುತ್ತದೆ, ನಾವು ದಿನನಿತ್ಯ ಕಂಡರೂ ಕಾಣದಂತಿರುವ ಹತ್ತು ಹಲವು ಪಾತ್ರಗಳನ್ನು ನಮ್ಮೆದುರು ನಿಲ್ಲಿಸಿ ನಾವು ನಮ್ಮೊಳಗನ್ನು ಇಣುಕಿ ನೋಡಿಕೊಳ್ಳುವಂತೆ ಮಾಡಿ, ಅಲ್ಲಿರುವ ಕಲ್ಮಶ ಈ ಪಾತ್ರಗಳು ಬದುಕುತ್ತಿರುವ ಕೊಳಚೆ ಪ್ರದೇಶಕ್ಕಿಂತ ಅಸಹ್ಯಕರವಾದದ್ದು ಎಂಬುದರ ದಿಗ್ಧರ್ಶನ ಮಾಡಿಸಿಕೊಡುತ್ತದೆ. ಆ ಮೂಲಕ ನಮ್ಮನ್ನು ನಾವೇ ಮುಟ್ಟಿ ನೋಡಿಕೊಳ್ಳುವಂತೆ ಮಾಡುವ ಮತ್ತು ನಮ್ಮಲ್ಲಿ ಮಾನವೀಯ ಒರತೆಯೊಂದನ್ನು ಹುಟ್ಟುಹಾಕುವಲ್ಲಿಯೂ 'ರೆಕ್ಕೆ ಹಾವು' ಕೃತಿ ಹಿಂದೆ ಬೀಳುವುದಿಲ್ಲ. 'ರೆಕ್ಕೆ ಹಾವು' ಸಣ್ಣಕಥೆಗಳನ್ನು ಓದುವ ಹಾಗೂ ಬರೆಯುವ ಆಸಕ್ತಿ ಹೊಂದಿರುವ ಎಲ್ಲರೂ ಓದಲೇಬೇಕಾದ ಕಥಾಸಂಕಲನ.

About the Author

ಟಿ.ಕೆ. ದಯಾನಂದ್

ಕತೆಗಾರ, ಲೇಖಕ ಟಿ.ಕೆ. ದಯಾನಂದ್ ಅವರು ಹುಟ್ಟಿದ್ದು ತುಮಕೂರಿನ ದೊಡ್ಡಹಟ್ಟಿಯಲ್ಲಿ, ಬಿ.ಎ.ವರೆಗೆ ತುಮಕೂರಿನಲ್ಲಿ ವ್ಯಾಸಂಗ ಮಾಡಿದ ಅವರು ಬೆಂಗಳೂರಿನಲ್ಲಿ ಸಮೂಹ ಸಂವಹನ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ. ವಾರ್ತಾಭಾರತಿ ದಿನಪತ್ರಿಕೆಯಲ್ಲಿ ವರದಿಗಾರರಾಗಿದ್ದರು. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ ಸಂಶೋಧಕರಾಗಿ ನಗರದ ಬಡಜನರ ಕುರಿತಂತೆ ಅಧ್ಯಯನ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ, ಚಿತ್ರಕಥೆಗಾರ, ಸಂಭಾಷಣಕಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ ಅಂಕಣವಾಗಿ ಪ್ರಕಟಗೊಂಡ 'ರಸ್ತೆ ನಕ್ಷತ್ರ' ಇವರ ಮೊದಲ ಕೃತಿ, ಕರ್ನಾಟಕ ರಾಜ್ಯದ ಮಲ ಹೊರುವವರ ಕುರಿತ ಅಧ್ಯಯನ ಮತ್ತು ಮೀಡಿಯಾ ಆಕ್ಟಿವಿಸಂ ಮೂಲಕ ಅದನ್ನು ಜಗತ್ತಿನೆದುರು ಬಯಲಿಗೆಳೆದುದಕ್ಕಾಗಿ ...

READ MORE

Related Books