ಸಾವು

Author : ಎಸ್. ಪ್ರಸಾದಸ್ವಾಮಿ

Pages 164

₹ 166.00




Year of Publication: 2023
Published by: ಕಣ್ವ ಪ್ರಕಾಶನ
Address: ನಂ.11/26, 10 ನೇ \'ಡಿ\' ಕ್ರಾಸ್ 2 ನೇ ಹಂತ, ಮಹಾಲಕ್ಷ್ಮಿಪುರಂ, ಬೆಂಗಳೂರು -560086
Phone: 8023426778

Synopsys

‘ಸಾವು’ ಡಾ. ಪ್ರಸಾದಸ್ವಾಮಿ ಎಸ್. ಅವರ ಕಥಾ ಸಂಕಲನ. ಈ ಕೃತಿಗೆ ಕಂನಾಡಿಗಾ ನಾರಾಯಣ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ತಿಳಿಸುತ್ತಾ ‘ಸುಮಾರು ಮೂರು ದಶಕಗಳ ಅಂತರದಲ್ಲಿ ಬರೆದ ಕಥೆಗಳು ಈ ಸಂಕಲನದಲ್ಲಿವೆ. ಇವುಗಳಲ್ಲಿ ಕೆಲವು ಲಂಕೇಶ್ ಪತ್ರಿಕೆ, ಕನ್ನಡಪ್ರಭ, ಮುಂಗಾರು, ಹೊಸತು, ಅಗ್ನಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇನ್ನೊಂದಿಷ್ಟು ಅಪ್ರಕಟಿತ ಕಥೆಗಳೂ ಇಲ್ಲಿವೆ. ಬಹುಪಾಲು ಕಥೆಗಳ ಕಥಾವಸ್ತು ಶೈಕ್ಷಣಿಕ ಆವರಣದ ಸುತ್ತಲೇ ಹೆಣೆದಿದ್ದರೂ, ಒಂದೆರಡು ಕಥೆಗಳು ವೃತ್ತಿಯ ಬಗ್ಗೆಯೂ ಇವೆ. ಇವೆಲ್ಲದರೊಂದಿಗೆ ತಳುಕು ಹಾಕಿಕೊಂಡಿರುವ ಜೀವನ, ಮದುವೆ ಇತ್ಯಾದಿಗಳ ಕುರಿತೂ ಒಂದು ರೀತಿಯ ನಾಸ್ಟಾಲಜಿ ಎಲ್ಲ ಕಥೆಗಳಲ್ಲೂ ಬಹುಪಾಲು ಇಣುಕು ಹಾಕುತ್ತದೆ ಎಂದಿದ್ದಾರೆ.

ಎಲ್ಲ ಕಥೆಗಳನ್ನು ಒಂದೇ ದಾರದಲ್ಲಿ ಪೋಣಿಸಿದರೆ ಒಂದು ರೀತಿಯಲ್ಲಿ ಕಾದಂಬರಿಯ ಅಧ್ಯಾಯಗಳಂತೆ ಭಾಸವಾಗುವ ಇಲ್ಲಿನ ಕಥೆಗಳಲ್ಲಿ ಅಲ್ಲಲ್ಲಿ ಮುನ್ನೆಲೆಗೆ ಬರುವ ಜೀವನೋತ್ಸಾಹ ಓದಿನ ಉತ್ಸಾಹವನ್ನು ಪುಟಿದೇಳುವಂತೆ ಮಾಡುತ್ತದೆ. ಸರಾಗವಾಗಿ ಓದಿಸಿಕೊಂಡು ಹೋಗುವ ಗುಣಗಳನ್ನು ಸಾಧಿಸಿರುವ ಇಲ್ಲಿನ ಕಥೆಗಳು ಸಂಕೇತ, ಪ್ರತಿಮೆ, ಕಾವ್ಯಾತ್ಮಕತೆಗಳ ಆಚೆ ನೇರಾನೇರ ಸಂದರ್ಭವನ್ನು ಪ್ರತಿಪಾದಿಸುತ್ತ ಸಾಗುತ್ತವೆ. ನಾಗಶ್ರೀ, ಸಾವು, ಸಂತಸ, ತಂಗಾಳಿ ಮುಂತಾದ ಕಥೆಗಳು ಓದಿನ ಮುದ ನೀಡುವಲ್ಲಿ ಯಶಸ್ವಿಯಾಗಿವೆ ಎಂದಿದ್ದಾರೆ ಕಂನಾಡಿಗಾ ನಾರಾಯಣ.

About the Author

ಎಸ್. ಪ್ರಸಾದಸ್ವಾಮಿ
(21 July 1965)

ಲೇಖಕ, ವಿಮರ್ಶಕ, ಸಂಪಾದಕ, ಅನುವಾದಕ ಎಸ್. ಪ್ರಸಾದಸ್ವಾಮಿ ಅವರು ಜನಿಸಿದ್ದು 1965 ಜುಲೈ 21ರಲ್ಲಿ. ಹುಟ್ಟೂರು ಚಿತ್ರದುರ್ಗ. ಪ್ರಸ್ತುತ ಬೆಂಗಳೂರಿನ ಟಿ ದಾಸರಹಳ್ಳಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ  ಪ್ರೊಫೆಸರ್- ಪ್ರಿನ್ಸಿಪಾಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ತಮ್ಮನ್ನು ಕಾಲೇಜು ದಿವಸಗಳಿಂದಲೂ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.   ಪ್ರಸಾದಸ್ವಾಮಿಯವರ ಪ್ರಮುಖ ಕೃತಿಗಳೆಂದರೆ ನೀರು ತಂದವರು, ರಂಗರಾವಣ, ಶೀಲವೆಂಬುದು ಸೂತಕ, ಲೋಕದ ಪರಿಯೆ ಅಲ್ಲ ಇವರ ಪ್ರಮುಖ ಕೃತಿಗಳು. ಇವರಿಗೆ ಕೆ.ವಿ. ಸುಬ್ಬಣ್ಣ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.     ...

READ MORE

Related Books