ಹರಿದ ಪತ್ರ

Author : ಅನಸೂಯ ಕಾಂಬಳೆ

Pages 110

₹ 90.00




Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

 

ಬಾಬಾಸಾಹೇಬ್ ಅಂಬೇಡ್ಕರ್ ಅವರ ಬದುಕು ಹಾಗೂ ಹೋರಾಟದಿಂದ ಪ್ರೇರಣೆಗೊಂಡ ಅನಸೂಯಾ ಅವರು ಶೋಷಿತರ ಪರವಾದ ಆಶಯಗಳನ್ನು ತಮ್ಮ ಕವಿತೆಯಲ್ಲಿ ಸಮರ್ಥವಾಗಿ ಬಿಂಬಿಸಿದ್ದಾರೆ. ಇದು ಅವರ ತಮ್ಮ ಚೊಚ್ಚಲ ಕಥಾ ಸಂಕಲನ 'ಹರಿದ ಪತ್ರ’. ಅನಸೂಯ ಕಾಂಬಳೆ ಅವರು ಕನ್ನಡದ  ಪ್ರಮುಖ ಕವಯತ್ರಿಯರಲ್ಲಿ ಒಬ್ಬರು. 'ಹರಿದ ಪತ್ರದ ಮೂಲಕ ಕತೆಗಾರ್ತಿಯು ತಳಸಮುದಾಯದ ತಳಮಳಗಳಿಗೆ ಕತೆಗಳ ರೂಪು ನೀಡಿದ್ದಾರೆ. ಶೋಷಿತ, ದಮನಕ್ಕೊಳಗಾದ, ರಕ್ಕಸ ಮನಸುಗಳಿಗೆ ಬಲಿಯಾದ ಹೆಣ್ಣಿನ ಒಳತೋಟಿ ಚೊಕ್ಕವಾಗಿ ಹೆಣೆದಿಟ್ಟಿದ್ದಾರೆ.

ಹಿರಿಯ ಕವಿ ಡಾ. ಸಿದ್ಧಲಿಂಗಯ್ಯ ಅವರು ಈ ಸಂಕಲನದ ಬಗ್ಗೆ ’ಇಲ್ಲಿಯ ಕಥೆಗಳು ಕೂಡ ಅವರ ಕವಿತೆಗಳಂತೆ ವಸ್ತು ವೈವಿಧ್ಯತೆಯಿಂದ ನಮ್ಮ ಗಮನ ಸೆಳೆಯುತ್ತವೆ. ಬಡವರ, ಶೋಷಿತ ಮಹಿಳೆಯರ ಪರವಾಗಿ ದನಿಯೆತ್ತುವ ಕಾಂಬಳೆ ಆ ಪಾತ್ರಗಳಿಗೆ ಜೀವ ತುಂಬಿದ್ದಾರೆ, ನಿತ್ಯವೂ ಅಪಮಾನ, ಅಸಹಾಯಕತೆ, ಸಂಘರ್ಷದಲ್ಲಿ ಬದುಕಬೇಕಾದ ದಲಿತ ಜೀವನವನ್ನು ಮನಕರಗುವಂತೆ ಚಿತ್ರಿಸಿದ್ದಾರೆ. ದಲಿತರ ನೋವು ಮತ್ತು ಪ್ರತಿಭಟನೆಯನ್ನು ಸಶಕ್ತವಾಗಿ ದಾಖಲಿಸಿದ್ದಾರೆ. ಜಾತಿಮತವನ್ನು ಮೀರಿದ ಸಂಕಟವೇ ಮೈವೆತ್ತಂತಿರುವ 'ಸಾರಿ'ಯಂಥ ಪಾತ್ರವನ್ನು ಸೃಷ್ಟಿಸಿ ತಮ್ಮ ಕಥನ ಕಲೆಯನ್ನು ಮಾನವೀಯ ಕಳಕಳಿಯನ್ನು ತೋರಿಸಿದ್ದಾರೆ.

'ಹರಿದ ಪತ್ರ' ವಸ್ತು ಅತ್ಯಂತ ದಿಟ್ಟತನದಿಂದ ಕೂಡಿದ್ದು ಅದರ ನಿರ್ವಹಣೆಯಲ್ಲಿ ಅಪಾರವಾದ ಸಂಯಮ, ಸೈರ್ಯವನ್ನು ಪ್ರದರ್ಶಿಸಿದ್ದಾರೆ. 'ಮೆರವಣಿಗೆ' ಶೋಷಿತ ವರ್ಗದ ಸಮಕಾಲೀನ ರಾಜಕೀಯ ಚಿತ್ರಣವನ್ನು ಕೊಟ್ಟರೆ, 'ಕರುಳನರಸಿ' ಮತ್ತು 'ದಹನ" ದಂತಹ ಕಥೆಗಳು ಮಾನವೀಯತೆಗೆ ಒಡ್ಡಿದ ಸವಾಲಿನಂತಿವೆ. 'ಸನಾನ' ಕಥೆಯ ವ್ಯಂಗ್ಯ ಬಹುಕಾಲ ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿ ನಿಲ್ಲುತ್ತದೆ. 'ಅಳಲು' ಕಥೆ ಅಸಹಾಯಕತೆಯನ್ನು ಮುಂದಿಡುತ್ತದೆ. ಇಲ್ಲಿಯ ಕಥೆಗಳ ಸಾಮಾನ್ಯ ಗುಣವೆಂದರೆ ಬಹುತೇಕ ಪಾತ್ರಗಳ ಪೋಷಣೆಯಲ್ಲಿ ಎದ್ದುಕಾಣುವ ತಾಯಿಗುಣ. ಈ ಅಪರೂಪದ ಅಂಶ ಉದ್ದಕ್ಕೂ ಓದುಗರ ಗಮನ ಸೆಳೆಯುತ್ತದೆ’ ಎಂದು ಮೆಚ್ಚುಗೆಯ ಮಾತುಗಳನ್ನು ಬರೆದಿದ್ದಾರೆ.

About the Author

ಅನಸೂಯ ಕಾಂಬಳೆ
(28 December 1970)

ಅನಸೂಯ ಕಾಂಬಳೆ ಅವರು ದಲಿತ ಮಹಿಳಾ ಸಂವೇದನೆಯ ಕನ್ನಡದ ಮುಖ್ಯ ಬರಹಗಾರ್ತಿಯರಲ್ಲಿ ಒಬ್ಬರು. 1970ರ ಡಿಸೆಂಬರ್ 28 ರಂದು ಜನಿಸಿದ ಅನಸೂಯ ಅವರು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೆಮಲಾಪೂರ ಗ್ರಾಮದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದ ಮೇಲೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.’ಬರಗೂರರ ಕಾದಂಬರಿಗಳು : ಒಂದು ಅಧ್ಯಯ’ ಎಂಬ ಪ್ರಬಂಧ ಸಲ್ಲಿಸಿ ಎಂ.ಫಿಲ್ ಪದವಿ ಮತ್ತು ’ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅಂಬೇಡ್ಕರ್ ಪ್ರಭಾವ' ಎಂಬ ಕಾವ್ಯವನ್ನು ಅನುಲಕ್ಷಿಸಿ ಸಲ್ಲಿಸಿದ ಪ್ರಬಂಧಕ್ಕೆ ಪಿಎಚ್. ಡಿ. ಪದವಿ ಪಡೆದಿದ್ದಾರೆ ಮುಳ್ಳು ಕಂಟಿಯ ನಡುವೆ (ಕವನ ಸಂಕಲನ), ...

READ MORE

Related Books