ಅಮೃತ ಘಳಿಗೆ

Author : ಗೀತಾ ಡಿ. ಎನ್.

₹ 120.00




Year of Publication: 2019
Published by: ಶ್ರೀ ವಿಜಯನಾಗ ಪಬ್ಲಿಕೇಷನ್ಸ್
Address: ಶ್ರೀಗಂಧ ಕಾವಲ್‌, ಕೊಟ್ಟಿಗೆಪಾಳ್ಯ, ಬೆಂಗಳೂರು
Phone: 9900382072

Synopsys

ನಮ್ಮ ಭರತ ಭೂಮಿಯಲ್ಲಿ ಹೆಣ್ಣಿಗೆ ವಿಶಿಷ್ಟವಾದ ಸ್ಥಾನವಿದೆ. ಆಕೆ ಆದಿಶಕ್ತಿ, ಜನ್ಮದಾತೆ, ಇದರ ಪರಿಕಲ್ಪನೆಯಲ್ಲಿ ಜನ್ಮ ತಾಳಿದವುಗಳು ಮಾತೃ ಭಾಷೆ, ಮಾತೃ ಭೂಮಿ ಮುಂತಾದ ಪವಿತ್ರ ಪದ ಪುಂಜಗಳಿವೆ. ಆದರಿಂದು ಪರಿಸ್ಥಿತಿ ತಲೆಕೆಳಗಾಗುತ್ತಿದೆ. ಹೆಣ್ಣಿನ ಆರಾ ಏನಿದ್ದರೂ ಅದು ದೇಗುಲಗಳಲ್ಲಿ ಎಂಬಂತಾಗಿದೆ. ಪ್ರಧಾನ ಸಮಾಜದ ಕಾರಣದಿಂದ ಹೆಣ್ಣನ್ನು ಎರಡನೆ ದರ್ಜೆಯವಳಾಗಿಯೇ ಪರಿಗಣಿಸಲಾಗುತ್ತಿದೆ. ಆದಿಶಕ್ತಿ, ಆಕೆಯಿಲ್ಲದಿದ್ದರೆ ಜೀವವೂ ಇಲ್ಲ, ಜೀವ ಜಗ ಇಲ್ಲ ಎಂಬ ಸತ್ಯವನ್ನು ಅರಿಯದೇ ತನ್ನ ವಿನಾಶವನ್ನು ತಾನೇ ತಂದುಕೊಳ್ಳುತ್ತಿರುವ ಬುದ್ಧಿಗೇಡಿ ಮನುಷ್ಯನ ನಡೆ ಖಂಡನಾರ್ಹ, ಈ ಪರಿಕಲ್ಪನೆಯಲ್ಲಿ ಹುಟ್ಟಿದ ಒಂದು ಕಥೆ “ಅಮೃತ ಫಳಿಗೆ", ಅದು ಈ ಕಥಾ ಸಂಕಲನದ ಶೀರ್ಷಿಕೆಯೂ ಹೌದು, ಹೆಣ್ಣು ತನಗೆ ವ್ಯತಿರಿಕ್ತ ವಾತಾವರಣದಲ್ಲೂ ಹೇಗೆ ತನಗೆ ತಾನೇ ಬೆಳಕಾಗಲು ಸಾಧ್ಯ ಎಂಬುದನ್ನು ಈ ಕಥೆಯು - ವಿವರಿಸುತ್ತದೆ. ಇಲ್ಲಿ ಕಥೆಗಳೆಲ್ಲಾ ಬದುಕಿನ ಸಂಕೀರ್ಣತೆಯ ಮೇಲೆ ಚೆಲ್ಲುತ್ತವೆ. ಈ ಕಥೆಗಳು ಸಮಾಜವನ್ನೇ ಬದಲಿಸಬಹುದು ಎಂಬ ಮಹದಾಸೆ ಇಲ್ಲದಿದ್ದರೂ ಚಿಂತನೆಗೆ ಹಚ್ಚಲಿದೆ ಎಂಬ ವಿಶ್ವಾಸವಿದೆ. ಬೆನ್ನುಡಿಯಲ್ಲಿ ಲೇಖಕರ ಮಾತು.

About the Author

ಗೀತಾ ಡಿ. ಎನ್.
(07 January 1971)

ಕವಯತ್ರಿಯಾದ ಗೀತಾ ಡಿ.ಎನ್. ಅವರು ಓದಿದ್ದು ವಿಜ್ಞಾನವಾದರು ಸಾಹಿತ್ಯಾಸಕ್ತರು. 1971 ಜನವರಿ 07 ರಂದು ಬಿದರಗೋಡಿನ ಶೃಂಗೇರಿಯಲ್ಲಿ ಜನಿಸಿದ ಇವರ ಆಸಕ್ತಿಯನ್ನು ಕುಡಿಯೊಡೆದಿದ್ದು ಸಾಹಿತ್ಯದಲ್ಲಿ. 1995 ರಲ್ಲಿ ‘ನನ್ನೊಳಗಿನ ಕವಿತೆಗಳು’ ಕವನ ಸಂಕಲನವನ್ನು ಹೊರತಂದರು. ...

READ MORE

Related Books