ಭೂಮಿಯಷ್ಟು ಬದುಕು

Author : ಪಾರ್ವತಿ ಜಿ. ಐತಾಳ್

Pages 104

₹ 65.00
Year of Publication: 2012
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080 - 22161900 / 22161901 / 22161902

Synopsys

‘ಭೂಮಿಯಷ್ಟು ಬದುಕು’ ಅರ್ಪಾದ್ ಬತ್ತೇರಿ ಅವರ ಮಲಯಾಳಂ ಸಣ್ಣ ಕಥಾಸಂಕಲನ ಕೃತಿಯಾಗಿದೆ. ಪಾರ್ವತಿ ಜಿ. ಐತಾಳ್ ಅವರು ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದೆ. ವಿಶಿಷ್ಟವಾದ ಇಲ್ಲಿನ ಕತೆಗಳು ಮನುಷ್ಯನ ಆಳ ಮನಸ್ಸಿನೊಳಗಿನ ನಿಜದ ದನಿಗಳನ್ನು ಹಿಡಿದಿಟ್ಟುಕೊಂಡ ರೂಪಕಾತ್ಮಕ ಬಯಕೆಗಳು. ಬದುಕಿನಲ್ಲಿ ಕೈಮೀರಿದ ಘಟನೆಗಳು ನಡೆದು ತಲ್ಲಣಗೊಂಡಾಗ ಮನಸ್ಸು ದುಸ್ಸಾಧ್ಯವಾದ ಪರಿಹಾರವೊಂದನ್ನು ಬಯಸುತ್ತದೆ. ನಿಜದಲ್ಲಿ ಸಂಭವನೀಯವಲ್ಲದ ಅಸಾಧ್ಯವಾದುದೊಂದು ಕಲ್ಪನೆಯ ಸಾಮ್ರಾಜ್ಯದಲ್ಲಿ ಗರಿಗೆದರಿ ಹಾರಲಾರಂಭಿಸುತ್ತದೆ. ಅದು ದ್ವೇಷದ ಕಿಡಿಯಾಗಿ ಹಿಂಸಾಪ್ರವೃತ್ತಿಯ ಕಡೆಗೋ ಪ್ರೀತಿಯ ಸೆಲೆಮೂಡಿ ಒಳಿತಿನ ಕಡೆಗೋ ಚಲಿಸಬಹುದು. ಇಂದು ಸಮಾಜದಲ್ಲಿ ಬಲವಾಗಿ ಬೇರೂರಿದ ಹಿಂಸೆ ಕ್ರೌರ್ಯಗಳು, ಅಸಹಜ ವರ್ತನೆಗಳು, ಸುಲಿಗೆ, ಅಸಹಾಯಕತೆಗಳು ಎಲ್ಲವನ್ನೂ ಹೊಟ್ಟೆಪಾಡಿಗಾಗಿ ಎಂದು ಕ್ಷಮಿಸಿ ತಳ್ಳಿಹಾಕುವಂತಿಲ್ಲ.

ಇವೆಲ್ಲಾ ಯಾಕೆಂದು ಕೂಗಿ ಕೇಳಬೇಕು. ಹೃದಯಹೀನ ನಡವಳಿಕೆಯನ್ನು ಪ್ರಶ್ನಿಸಿ ಪ್ರೀತಿಯ ಸೆಲೆ ಉಕ್ಕುತ್ತಿಲ್ಲವೇ ಎಂದು ವಿಚಾರಿಸಬೇಕು. ಕೋಮು ಸಂಘರ್ಷಗಳಾದಾಗ ಮನುಷ್ಯನಿಗೆ ಮನುಷ್ಯನ ಪರಿಚಯ ಆಗುವುದಿಲ್ಲವೇ ಎಂದು ಮರುಗಬೇಕು. ಭಯದ ಕಲನೆಯಲ್ಲಿ ತೇಲಿ ತೇಲಿ ಹೋಗಬೇಕಾದ ಅವಶ್ಯಕತೆ ಇದೆಯೇ ಎಂದೂ ವಿಮರ್ಶಿಸಬೇಕು. ಹೌದು, ಇಲ್ಲಿನ ಕತೆಗಳು ಇವನ್ನೆಲ್ಲ ಮಾಡಿವೆ. ಸಹಜತೆ- ಅಸಹಜತೆ ಮಧ್ಯೆ ಜೋಕಾಲಿ ಜೀಕುತ್ತ ಸ್ವಭಾವಗಳನ್ನು ಪರಿಚಯಿಸಿವೆ. ಕಣ್ಮುಂದೆ ಕಾಣುವ ದೃಶ್ಯಕ್ಕಿಂತ ಪರದೆಯ ಹಿಂದಿನ ತಾಳಮೇಳಗಳು ಮುಖ್ಯವಾಗುತ್ತವೆ.

ಒಟ್ಟಿನಲ್ಲಿ ನಾವು ಒಳಿತಿಗೆ ವಿದಾಯ ಹೇಳುವುದನ್ನು ಬಿಡಬೇಕೆಂದು ಸಾರಿ ಹೇಳುವ ಕತೆಗಳು

About the Author

ಪಾರ್ವತಿ ಜಿ. ಐತಾಳ್
(23 July 1957)

ಪಾರ್ವತಿ ಜಿ.ಐತಾಳ ಅವರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕ ಎಂಬ ಹಳ್ಳಿಯಲ್ಲಿ ಜುಲೈ 23, 1957ರಂದು ಜನಿಸಿದರು. 1981ರಲ್ಲಿ ಮೈಸೂರಿನ ಮಾನಸಗಂಗೋತ್ರಿಯಿಂದ  ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದರು. 2012ರಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದರು. ಮಂಗಳೂರು ಜಿಲ್ಲೆಯ ಮುಲ್ಕಿಯ ವಿಜಯಾ ಕಾಲೇಜಿನಲ್ಲಿ ಏಳು ವರ್ಷಗಳವರೆಗೆ ಪ್ರಾಧ್ಯಾಪಕಿಯಾಗಿ ದುಡಿದ ಪಾರ್ವತಿಯವರು, ಶ್ರೀ ಗಂಗಾಧರ ಐತಾಳರೊಡನೆ ಮದುವೆಯಾದ ಬಳಿಕ 1988ರಲ್ಲಿ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿಗೆ ಬಂದು ಇಂಗ್ಲಿಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಾರ್ವತಿ ಅವರು ಅನೇಕ ಸಣ್ಣ ಕಥೆ, ಕವನ, ನಾಟಕ ಬರೆದಿರುವರಾದರೂ, ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ...

READ MORE

Related Books