ಮುತ್ತಿನ ಸಂಕೋಲೆ

Author : ಮಲ್ಲಿನಾಥ ಶಿ. ತಳವಾರ

Pages 154

₹ 110.00
Year of Publication: 2018
Published by: ಕಿಕ್ಕೇರಿ ಪಬ್ಲಿಕೇಶನ್ಸ್
Address: ನಂ..703,14 ನೇ ಕ್ರಾಸ್, ಚಂದ್ರಕಲಾ ಲೇಔಟ್, ಬೆಂಗಳೂರು-560072
Phone: 9449800858

Synopsys

ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಸ್ತ್ರೀ ಶೋಷಣೆಯ ವಿವಿಧ ಮುಖಗಳನ್ನು ಈ 'ಮುತ್ತಿನ ಸಂಕೊಲೆ’ ಕತಾಸಂಕಲನದಲ್ಲಿ ಕಾಣಬಹುದಾಗಿದೆ. ಬಿಡುವಿಲ್ಲದೆ ಯಾಂತ್ರಿಕವಾಗಿ ಸಾಗುತ್ತಿರುವ ಆಧುನಿಕ ಬದುಕಿನ ದುಸ್ಥಿತಿಯನ್ನು ವಾಸ್ತವದ ನೆಲೆಗಟ್ಟಿನಲ್ಲಿ ಹಿಡಿದಿಟ್ಟಿದ್ದಾರೆ ಲೇಖಕ ಡಾ. ಮಲ್ಲಿನಾಥ ತಳವಾರ. ಈ ಕೃತಿಯು ಎಂಟು ಕತೆಗಳನ್ನು ಒಳಗೊಂಡಿದೆ.

About the Author

ಮಲ್ಲಿನಾಥ ಶಿ. ತಳವಾರ

ಲೇಖಕ ಮಲ್ಲಿನಾಥ ಶಿ. ತಳವಾರ ಅವರು ಮೂಲತಃ ಕಲಬುರಗಿಯವರು. ಹುಟ್ಟೂರಿನಲ್ಲೇ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. ಕತೆ, ಕವನ, ಗಜಲ್‌ಗಳು ಪತ್ರಿಕೆಯಲ್ಲಿ ಪ್ರಕಟಿತವಾಗಿವೆ. ದರ್ಶನ (ಸಂಪಾದನೆ), ಪ್ರತಿಬಿಂಬ (ಕವನಸಂಕಲನ), ಕಾರಂತರ ಸ್ತ್ರೀ ಪ್ರಪಂಚ (ಸಂಶೋಧನಾ ಪ್ರಬಂಧ), ಮುತ್ತಿನ ಸಂಕೋಲೆ (ಕಥಾಸಂಕಲನ), ಕಾರಂತಲೋಕ, ಪ್ರೇಮಾಂತರಂಗ, ಭಾವಾಂತರಂಗ, ಧರ್ಮಾಂತರಂಗ , ವಚನ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ, ಮಕ್ಕಳ ಸಾಹಿತ್ಯಕ್ಕೆ ಕಾರಂತರ ಕೊಡುಗೆ, ಪ್ರೀತಿಯಿಲ್ಲದೆ ಬದಕಿದವರ್ಯಾರು (ಕವನಸಂಕಲನ) ಪ್ರಕಟಿತ ಕೃತಿಗಳು. ಆಕಾಶವಾಣಿಯಲ್ಲಿ ಹಲವು ಕಾರ್ಯಕ್ರಮಗಳು ಪ್ರಸಾರವಾಗಿವೆ. ಚಿತ್ತಾಪುರ ತಾಲ್ಲೂಕಿನ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ...

READ MORE

Related Books