ಅಮ್ಮ ಹಚ್ಚಿದ ದೀಪ

Author : ರಾಜೇಂದ್ರ. ಬಿ.ಶೆಟ್ಟಿ

Pages 120

₹ 130.00




Year of Publication: 2023
Published by: ಶ್ರೀನಿವಾಸ ಪುಸ್ತಕ ಪ್ರಕಾಶನ
Address: # 164/A, ಮೊದಲನೇ ಮಹಡಿ, ಎಂ.ಆರ್.ಎನ್. ಕಟ್ಟಡ, ಕನಕಪುರ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560004
Phone: 9844098406

Synopsys

‘ಅಮ್ಮ ಹಚ್ಚಿದ ದೀಪ’ ರಾಜೇಂದ್ರ ಬಿ. ಶೆಟ್ಟಿ ಅವರ ರಚನೆಯ ಕಥಾಸಂಕಲನವಾಗಿದೆ. ಎಲ್ಲರ ಜೀವನದಲ್ಲೂ ಅಸಂಖ್ಯಾತ ಘಟನೆಗಳು, ಸಂಗತಿಗಳು ನಡೆಯುತ್ತವೆ. ಎಲ್ಲವೂ ಕಥೆಯಾಗಬಲ್ಲಂತಹವೆ. ಅದೃಷ್ಟವಶಾತ್, ಅವುಗಳನ್ನು ಓದಬಲ್ಲ ಕಥೆಯನ್ನಾಗಿಸುವ ಕಲೆ, ಸಾಮರ್ಥ್ಯ ಮತ್ತು ಕ್ಷಮತೆ ಎಲ್ಲರಲ್ಲೂ ಇಲ್ಲ. ಹಾಗಾಗಿ ಓದುಗರು ಸುರಕ್ಷಿತ. ಕಥೆಯಲ್ಲಿ ಓದುಗನಿಗೆ ಕನೆಕ್ಟ್ ಆಗುವಂತಹದ್ದಿರಬೇಕು. ಓದಲು ಪ್ರಾರಂಭಿಸಿದರೆ, ಮಧ್ಯೆ ನಿಲ್ಲಿಸಿ ನಂತರ ಓದೋಣ ಎನಿಸಬಾರದು. ಕೆಲವು ತಿಳಿದುಕೊಳ್ಳಬೇಕಾದ ವಿಷಯಗಳು ಕಥೆಗೆ ಪೂರಕವಾಗಿ ಇದ್ದರೆ, ಇನ್ನೂ ಒಳ್ಳೆಯದು. ಓದಿದ ಮೇಲೆ ಸ್ವಲ್ಪ ಹೊತ್ತಾದರೂ ಅದರ ಬಗ್ಗೆ ಮಂಥನ ಮಾಡುವಂತಿರಬೇಕು. ಈ ಕಥಾಸಂಕಲನದ ಬಹುತೇಕ ಕಥೆಗಳು ಮೇಲಿನ ಎರಡೂ ನಿಯಮಗಳಿಗೆ ಬದ್ಧವಾಗಿರುವುದು, ಇವುಗಳನ್ನು ಓದಿದಾಗ ನಿಮಗೇ ಅರಿವಾಗುತ್ತದೆ. ಆ ದೃಷ್ಟಿಯಿಂದ ಕಥೆಗಾರ ರಾಜೇಂದ್ರ ಬಿ. ಶೆಟ್ಟರು ತಮ್ಮ ಕಥೆಗಾರನ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಕಥೆ ಹೇಳುವ ಪರಿಯಲ್ಲ, ಹಲವಾರು ಬಾರಿ, ತಾವೇ ಪಾತ್ರವಾಗಿ, ನೆಗೆಟಿವ್ ಇಮೇಜಿಗೆ ಅಂಟಿಕೊಳ್ಳಲೂ ಹಿಂಜರಿಯುವುದಿಲ್ಲ. ಅಷ್ಟರ ಮಟ್ಟಿಗೆ ಅವರ ಕಥಾಬದ್ಧತೆ ಇಲ್ಲಿ ಗೋಚರಿಸುತ್ತದೆ. ಪ್ರತಿ ಕಥೆಯೂ, ನಮಗೆ, ನಮ್ಮ ಸಮಾಜಕ್ಕೆ ಹಿಡಿದ ಕನ್ನಡಿಯಾಗಿ ಅಭಿವ್ಯಕ್ತಗೊಂಡಿವೆ. ರಾಜೇಂದ್ರರ ಸಂವೇದನೆಯಷ್ಟೇ ಸುಲಲಿತವಾಗಿ, ಅವರ ಕಲ್ಪನಾಶೀಲತೆಯೂ ಇಲ್ಲ ಹೊರಹೊಮ್ಮಿರುವುದಕ್ಕೆ ಅವರ ಅನುಭವ, ಕಥೆ ಹೇಳುವ ಕಲೆಯಲ್ಲಿ ಪಡೆದ ಸಿದ್ಧಿ ಮತ್ತು ಪ್ರಾಮಾಣಿಕತೆಗಳು ಕಾರಣ. ಬದುಕಲ್ಲಿ ಬರುವ ತಿರುವುಗಳು ನಮ್ಮನ್ನು ಸದಾ ಕ್ರಿಯಾಶೀಲರನ್ನಾಗಿಡುವಂತೆ, ಈ ಕಥೆಗಳ ತಿರುವುಗಳೂ ಕೂಡ ಪುಸ್ತಕದಲ್ಲಿ ಹಿಡಿದಿಟ್ಟುಕೊಂಡಿರುವುದು ಕಥೆಗಾರನ ಗೆಲುವು.- ದೀಪಕ್ ಜಿ.

About the Author

ರಾಜೇಂದ್ರ. ಬಿ.ಶೆಟ್ಟಿ

ಲೇಖಕ ರಾಜೇಂದ್ರ. ಬಿ.ಶೆಟ್ಟಿ ಅವರು ಉಡುಪಿ ಜಿಲ್ಲೆಯ ಹೆಜಮಾಡಿಯವರು. ಸುರತ್ಕಲ್ಲಿನ ಕೆ. ಆರ್. ಈ. ಸಿ. ಯಲ್ಲಿ( ಈಗಿನ ಎನ್ ಐ ಟಿ ಕೆ ) ಇಂಜಿನಿಯರಿಂಗ್ ಪದವೀಧರರು. ಸುಮಾರು ನಲುವತ್ತು ವರ್ಷ ಬೇರೆ ಬೇರೆ ಊರುಗಳಲ್ಲಿ( ಮುಂಬೈ, ಬೆಂಗಳೂರು, ಜಯಪುರ ಮತ್ತು ಅಸನ್ ಗಾಂವ್ )ಕೆಲಸ ಮಾಡಿ ಈಗ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಶಾಲಾ ದಿನಗಳಲ್ಲಿ ಕಥೆ ಬರೆಯಲು ಆರಂಭಿಸಿದ್ದು,ಕಾಲೇಜು ದಿನಗಳಲ್ಲಿ ಅವು ಮುಂಬೈ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ಕೃತಿಗಳು:  ' ನನ್ನದೂ ಒಂದಿಷ್ಟು...'( 2018), ' ಕಥನ ಕುತೂಹಲ '(2021) ಪ್ರಕಟಗೊಂಡಿದೆ. ...

READ MORE

Related Books