ಕಥಾಂತರಂಗ ವಿಜಯಾ ಸುಬ್ಬರಾಜ್ ಅವರ ಸಮಗ್ರ ಕತೆಗಳ ಸಂಕಲನ. ಲೇಖಕಿಯ ಕನಸುಗಳು, ಅನಿಸಿಕೆಗಳು, ಆಸೆಗಳು ಕವಲು ಕವಲಾಗಿ ಇಲ್ಲಿಯ ಕತೆಗಳಲ್ಲಿ ಹರಿದು ಬರುತ್ತವೆ. ಇಲ್ಲಿಯ ಕತೆಗಳಲ್ಲಿ ಭಯವಿದೆ; ನೋವಿದೆ. ಹೆಣ್ಣಿನ ದೌರ್ಬಲ್ಯ ಸಹಿತ ಬದುಕಿನ ಬಯಕೆ ಇದೆ, ನಾಟಕೀಯತೆಯೂ ಕೂಡ ಸ್ವಗತದ ರೀತಿಯಲ್ಲಿ ಸೇರಿಕೊಂಡಿದೆ. ಇವರ ಕತೆಗಳಲ್ಲಿ ಸೂಕ್ಷ್ಮವಾದ ಮತ್ತು ಹೆಣ್ಣು ಗಂಡನ್ನು ಬಯಸುವ, ನಿರಾಶೆಯಿಂದ ತೊಳಲುವ, ಮುಖ್ಯವಾಗಿ ತಾಯಿತನದ ಆಶಯಗಳು ಕೃತಿಯ ಪ್ರತಿ ಕಥೆಯಲ್ಲೂ ಹಾಸು ಹೊಕ್ಕಾಗಿದೆ. ’ಗಂಟುಗಳ” ಗಮನಿಸಬೇಕಾದ ಕೃತಿ, ಯುವತಿಯೊಬ್ಬಳಿಗೆ ಬದುಕು ಇಂದಿನ ಪರಿಸರದಲ್ಲಿ ಅದರ ಅಸ್ಪಷ್ಟ ಆಶಯಗಳಲ್ಲಿ ಹಲವು ಬಗೆಯ ಗೋಜಲಿನಲ್ಲಿ ಅರ್ಥವಾಗದ (ಕತೆಯ ಉದ್ದೇಶವೇ ಅದು) ಒಂದು ಮಾಲೆಯಾಗಿ ಕಣ್ಣೆದುರಿಗೆ ತೂಗುತ್ತದೆ. ಈ ಕತೆಯ ವಿಶೇಷವೇ ಇಂಥ ವಸ್ತುವಿನಲ್ಲಿದೆ.
ವಿಜಯಾ ಸುಬ್ಬರಾಜ್ ಅವರು ಬೆಂಗಳೂರಿನಲ್ಲಿ 1940 ಏಪ್ರಿಲ್ 20ರಂದು ಜನಿಸಿದರು. ತಾಯಿ ಲಕ್ಷ್ಮಿ, ತಂದೆ ಸೀತಾರಾಂ. ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರದ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ಬಿಯುಸಿಟಿಎ ನ ಉಪಾಧ್ಯಕ್ಷೆ, ಕನ್ನಡ ನುಡಿ ನಿಯತಕಾಲಿಕೆಯ ಸಂಪಾದಕಿ, ನಂಜನಗೂಡು ತಿರುಮಲಾಂಬ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ವಿಜಯಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ, ಅತ್ತಿಮಬ್ಬೆ ...
READ MORE