ಬೆಟ್ಟದ ಹೆಜ್ಜೆಗಳು

Author : ದಿನೇಶ್ ಹೊಳ್ಳ

Pages 62

₹ 60.00




Published by: ಗಾಯತ್ರಿ ಪ್ರಕಾಶನ
Address: ಬೆಂಗಳೂರು

Synopsys

‘ಬೆಟ್ಟದ ಹೆಜ್ಜೆಗಳು’ ಕೃತಿಯು ದಿನೇಶ್ ಹೊಳ್ಳ ಅವರ ಕತಾಸಂಕಲನವಾಗಿದೆ. ಗಾಳಿಪಟ ವಿನ್ಯಾಸಕಾರನಾಗಿ, ಚಾರಣಿಗನಾಗಿರುವ  ದಿನೇಶ್ ಹೊಳ್ಳ ಅವರ ಕಥೆಗಳು ನೆಲದ ಮೇಲಿನ ಪ್ರೀತಿಯಿಂದ ಹೊರಹೊಮ್ಮಿವೆ. ಕಥೆ, ಮಿನಿಗಥೆ, ಹನಿಗಥೆ ಸೇರಿದಂತೆ 8 ಕಥೆಗಳ ಈ ಸಂಕಲನ ತನ್ನ ವೈವಿಧ್ಯತೆಯಿಂದಾಗಿ ಗಮನ ಸೆಳೆಯುತ್ತದೆ. ಎಲ್ಲ ಕಥೆಗಳು ಈಗಾಗಲೇ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಸಂಕಲನದ ಮೊದಲ ಕಥೆ `ಹುಲಿಬಲಿ‘ಗೆ ಸಿದ್ದೇಶ್ ಎಂಬ ಬಾಲಕ ಪ್ರೇರಣೆಯಾಗಿದ್ದಾನೆ. ಅವನ ಅಗಾಧ ಪರಿಸರ ಜ್ಞಾನ, ಪ್ಯಾಟಿ ಧಣಿಗಳು ಬಂದು ವನ್ಯಜೀವಿಗಳನ್ನು ಬೇಟೆಯಾಡುವುದರ ಬಗ್ಗೆ ಅವನಿಗಿರುವ ಕೋಪಕ್ಕೆ ಚಾರಣಿಗ ಕಥೆಗಾರರ ಕಲ್ಪನೆಯೂ ಸೇರಿ ಸೊಗಸಾದ ಕಥೆಯಾಗಿಸಿದೆ. ಹೌದು … `ಬೆಟ್ಟಕ್ಕೆ ಮೆಟ್ಟಿಲಾದ ಅಂತ್ಯವಿರದ ಏಣಿಯಲ್ಲಿ ಹೆಜ್ಜೆಗಳು ವಿರಮಿಸುವುದಿಲ್ಲ…‘ ಕಥೆಗಾರರಿಗೆ ಅಂತಹುದೇ ಮಹತ್ವಾಕಾಂಕ್ಷೆ, ಅದಮ್ಯ ಉತ್ಸಾಹ ಇರುವುದರಿಂದ ಲವಲವಿಕೆ ಕಥೆಗಳ ಸ್ಥಾಯಿಗುಣವಾಗಿದೆ. ಆದರೆ ಕಟು ವಾಸ್ತವದ ವಿಪರ್ಯಾಸ, ವ್ಯಂಗ್ಯಗಳನ್ನೂ ಒಟ್ಟಿಗೆ ಧ್ವನಿಸುವುದರಿಂದ ಇವು ಈ ನೆಲದ ಕಥೆಗಳಾಗಿವೆ. ಕಥೆಗೆ ಪೂರಕವಾದ ರೇಖಾ ಚಿತ್ರಗಳನ್ನು ಕಥೆಗಾರರೇ ರಚಿಸಿದ್ದಾರೆ.

About the Author

ದಿನೇಶ್ ಹೊಳ್ಳ

ದಿನೇಶ್ ಹೊಳ್ಳ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೊಡಂಕಾಪಿನವರು. ಪರಿಸರ ಪ್ರೇಮಿ. ಗಾಳಿಪಟ ರಚನೆಕಾರ, ಸಾಹಿತಿ, ರೇಖಾಚಿತ್ರಕಾರ, ವಿಮರ್ಶಕ, ಛಾಯಾಚಿತ್ರಕಾರ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೊಡಂಕಾಪುವಿನ ಇನ್ಪೆಂಟ್ ಜೀಸಸ್ ಸ್ಕೂಲ್ ನಲ್ಲಿ ಹಾಗೂ ದೀಪಿಕಾ ಹೈಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣವನ್ನು ಪಡೆದಿರುತ್ತಾರೆ. ಪಿಯುಸಿ ಶಿಕ್ಷಣದ ಬಳಿಕ ಸುಂಕದ ಕಟ್ಟೆಯ ಎಸ್.ಎಂ.ಎಸ್ ಪಾಲಿಟೆಕ್ನಿಕ್ ನಲ್ಲಿ ತಾಂತ್ರಿಕ ಶಿಕ್ಷಣ ಪೂರೈಸಿದ್ದಾರೆ. 1989ರಲ್ಲಿ “ಮೇಷಾ ಗ್ರಾಫಿಕ್ಸ್” ಸಂಸ್ಥೆಯನ್ನು ಆರಂಭಿಸಿ, ಕಳೆದ 32 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಕೃತಿಗಳು : ಬೆಟ್ಟದ ಹೆಜ್ಜೆಗಳು ...

READ MORE

Related Books