ಪ್ರೇತಾತ್ಮಗಳು

Author : ಬಿ. ಜನಾರ್ದನ ಭಟ್



Published by: ಶ್ರೀರಾಮ ಪ್ರಕಾಶನ
Address: ಮಂಡ್ಯ
Phone: 9448930113

Synopsys

60 ರ ದಶಕದಲ್ಲಿ ಏಕಾಂಗಿಯಾಗಿ ಲೇಖಕರಾದ ಕಾಸರಗೋಡು ನಾರಾಯಣ ಭಟ್ಟರು ಮಂಗಳೂರಿನ "ವೀರಭೂಮಿ" ಮಾಸಪತ್ರಿಕೆಯೊಂದಕ್ಕೆ ಸರಣಿಯಾಗಿ ಬರೆದಿರುವ ಕಥೆಗಳ ಬೃಹತ್ ಸಂಗ್ರಹ ಇದು. ಕಾನಾಭ ಅವರ ವಿಶಾಲವಾದ ಕಲ್ಪನೆ, ಅದಕ್ಕೆ ರೋಚಕ ನಿರೂಪಣೆ ನೀಡಿರುವ ಬಗೆ ಅಚ್ಚರಿತಂದು ಒಂದಾದನಂತರ ಒಂದು ಕಥೆಯನ್ನು ಓದುತ್ತಲೇ ಇರುವಂತೆ ಮಾಡುತ್ತದೆ.

ಅಂದಿನ ಬರಹದ ಶೈಲಿ ಮನವನ್ನು ಮುದಗೊಳಿಸಿದರೆ, ಕಥೆಗಳ ಹಿನ್ನಲೆಯೂ ವಿಭಿನ್ನ ಸೇಡುತೀರಿಸುವ, ಆಸೆಪೂರೈಸದೇ ಉಳಿವ ಪ್ರೇತಾತ್ಮಗಳು ಒಂದೆಡೆಯಾದರೆ, ತಮ್ಮಗತ ಜನ್ಮದ ಪಾಪಗಳಿಗೆ ಪ್ರಾಯಶ್ಚಿತ್ತ ವಾಗಿ ಇಂದಿನವರಿಗೆ ಬುದ್ದಿಹೇಳಿ ತಮ್ಮವರಿಗೆ ಸರಿದಾರಿ ತೋರಿಸುವ ಪ್ರೇತಾತ್ಮಗಳು, ದಕ್ಷಿಣ ಕನ್ನಡದ ಪದ್ದತಿಗಳ ಸಂಕ್ಷಿಪ್ತ ನೋಟ.. ಅರವತ್ತು ವರುಷಗಳ ಹಿಂದೆ ಓದುಗರರನ್ನು ಬೆಚ್ಚವಂತೆ ಮಾಡಿದ ರೋಚಕ ಸಾಹಿತ್ಯ ಪ್ರಕಾರ ಇಂದಿನವರಿಗೂ ಸಿಗುವಂತೆ ಮಾಡಿದ್ದು ಸ್ತುತ್ಯಾರ್ಹ ಪ್ರಯತ್ನ ಸಂಗ್ರಹ ಮಾಡಿ ಪುಸ್ತಕವಾಗಿಸಿರುವ ಲೇಖಕ ಜನಾರ್ದನ ಭಟ್ ಅವರದು.

ಈ ಕೃತಿಯ ಕುರಿತು ಸಂಗ್ರಹಕಾರರ ಮಾತುಗಳು ಕೆಳಗಿದೆ... ‘ಈ ಕೃತಿಯಲ್ಲಿ ದಟ್ಟ ಜೀವನಾನುಭವವಿದೆ; ಪ್ರಾದೇಶಿಕತೆಯಿದೆ; 1950-70ರ ಕಾಲಾವಧಿಯ ಬದುಕಿನ ಚಿತ್ರಗಳಿವೆ. ದೆವ್ವಗಳ ಪ್ರವೇಶ ಇವುಗಳಲ್ಲಿ ಒಂದು ತಂತ್ರವಷ್ಟೆ. ತನಗೆ ದೆವ್ವಗಳ ಅಸ್ತಿತ್ವದಲ್ಲಿ ನಂಬಿಕೆಯಿಲ್ಲವೆಂದು‌ ಕಾ.ನಾ.ಭ. ಹೇಳಿದ್ದಾರೆ. ಆದರೆ ಭೂತ ಪ್ರೇತಗಳು ಅವರ ಕತೆಗಳಲ್ಲಿ ಬರುತ್ತವೆ ಅನ್ನುವುದು ಖಂಡಿತ! ಓದುಗರಿಗೆ ನಿರಾಸೆಯಾಗದು ಮಾತ್ರವಲ್ಲ, ಕನ್ನಡದಲ್ಲಿ‌ ಇಷ್ಟು ಒಳ್ಳೆಯ ಪುಸ್ತಕವಿದ್ದೂ ತಮ್ಮ ಗಮನಕ್ಕೆ ಬಂದಿಲ್ಲವಲ್ಲ ಎಂದು ಅಚ್ಚರಿಯಾದೀತು.ಈ ಪುಸ್ತಕದ ಸಂಪಾದನೆಯ ಕಥೆ ನನ್ನ ತೃಪ್ತಿ ಕೊಟ್ಟ ಕೆಲಸಗಳಲ್ಲಿ ಒಂದು’ ಎಂದಿದ್ದಾರೆ.

ಕೃತಿಯ ಪರಿವಿಡಿಯಲ್ಲಿ ಎದುರು ಮಹಡಿಯ ತರುಣ, ಚಾರುಲತಾಳನ್ನು ಐಆರು ಕೊಲೆ ಮಾಡಿದರು?, ಸಹನೆಗೆ ಸಾವು ಸಮನಿಸಿದಾಗ, ಪ್ರೇಕ್ಷಕಿ, ಹಂಬಲದ ಹುಯಿಲು, ನಿಶಾಗರ್ಬದಲ್ಲಿ, ಪ್ರೊಫೆಸರ್‍ ಹುಚ್ಚನೇಕಾದ?, ಎರಡು ದುರ್ಮರಣಗಳು, ಮೂಳೆ ಗೂಡು, ಸತ್ತವಳ ಸಂಧಾನ, ಹಿಮಸ್ಪರ್ಶ, ಜುಗಾರು ಮನೆಯಲ್ಲಿ ಒಂದಿರುಳು, ದೇಹ ಸತ್ತಿತು….ಮನಸ್ಸು?, ಶವಪೆಟ್ಟಿಗೆಯ ಚಿನ್ನ, ಕೊಪ್ಪಲತೋಡಿನ ಚನಿಯ, ಪೆಟ್ಟಿ ಆಫೀಸರ್ ಅಸ್ವಸ್ಥನಿದ್ದಾಗ ಎಂಬ ಶೀರ್ಷಿಕೆಯ ಕಥೆಗಳಿವೆ.

About the Author

ಬಿ. ಜನಾರ್ದನ ಭಟ್

ಸಾಹಿತಿ ಡಾ. ಬಿ.ಜನಾರ್ದನ ಭಟ್ ಅವರದು ಬಹುಮುಖ ಪ್ರತಿಭೆ. ಅವರು ಕಾದಂಬರಿಕಾರರಾಗಿ, ಕಥೆಗಾರರಾಗಿ, ವಿಮರ್ಶಕರಾಗಿ, ಅಂಕಣಕಾರರಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರ ಸಾಹಿತ್ಯಾನುಸಂಧಾನ ಬಹುಸೂಕ್ಷ್ಮವಾದುದು. ಬಹುಭಾಷಿಕ, ಬಹುಶ್ರುತ ವಿದ್ವಾಂಸರೂ ಸೃಜನಶೀಲ ಲೇಖಕರೂ ಆಗಿರುವ ಭಟ್ ಅವರದು ಸ್ಪೋಪಜ್ಞತೆಯ ಹಾದಿ. ತಮ್ಮ ಕೃತಿಗಳಲ್ಲಿ ಹೆಚ್ಚಿನ ಸ್ವಂತಿಕೆಯ ಛಾಪನ್ನು ಒತ್ತುತ್ತಾ ಬಂದಿರುವ ಡಾ. ಜನಾರ್ದನ ಭಟ್ ಅವರು ಸಮಕಾಲೀನ ಕನ್ನಡದ ಹೆಸರಾಂತ ಲೇಖಕರಲ್ಲಿ ಒಬ್ಬರು. ಭಟ್ ಅವರ ಹೆಚ್ಚಿನ ಕೃತಿಗಳು ಆಳ ಮತ್ತು ಸಂಕೀರ್ಣತೆಯನ್ನು ಹೊಂದಿರುವುದು ವಿಶೇಷ. ವಿದ್ವತ್ತು ಮತ್ತು ಸೃಜನಶೀಲತೆ ಎರಡನ್ನೂ ಮೈಗೂಡಿಸಿಕೊಂಡಿರುವ ಬೆಳ್ಮಣ ನ ಡಾ. ಬಿ.ಜನಾರ್ದನ ...

READ MORE

Related Books