ಕನ್ನಡಿ ಕಣ್ಣು

Author : ಮಂಜುನಾಥ ಎಂ. ಅದ್ದೆ

Pages 64

₹ 15.00
Year of Publication: 1995
Published by: ಸಂಘರ್ಷ ಪ್ರಕಾಶನ
Address: 44, 2ನೇ ಮಹಡಿ, ಪೈಪ್ ಲೈನ್ ರಸ್ತೆ, ಜೆ.ಸಿ.ನಗರ, ಕುರುಬರಹಳ್ಳಿ, ಬೆಂಗಳೂರು

Synopsys

ಲೇಖಕ, ಪತ್ರಕರ್ತ ಮಂಜುನಾಥ ಎಂ. ಅದ್ದೆಯವರ ಕವನ ಸಂಕಲನ ‘ಕನ್ನಡಿ ಕಣ್ಣು’, ಜಾತಿ ಗೆರೆಗಳನ್ನು ದಾಟಿ ಯೋಚಿಸಬಲ್ಲ ಸಂವೇದನಾಶೀಲ ವ್ಯಕ್ತಿ ಮಾತ್ರ ಸಂವೇದನಾಶೀಲ ಕವಿ, ಲೇಖಕ, ನಾಯಕನೆನಿಸಿಕೊಳ್ಳಬಲ್ಲ. ಈ ಮೂರು ಗುಣಗಳು ಮಂಜುನಾಥ್ ಅದ್ದೆಯವರ ಕೃತಿಯಲ್ಲಿ, ನಡೆಯಲ್ಲಿ, ನುಡಿಯಲ್ಲಿ ಇರುವ ಕಾರಣ ಅವರ ಕೃತಿಗಳು ಓದುಗರಿಗೆ ಆಪ್ತವಾಗಬಲ್ಲವು.

ಸಮುದಾಯಗಳ ನೋವಿಗೆ ತುಡಿವ ಅದ್ದೆಯವರ ಕವಿತೆಗಳಲ್ಲಿ ಜೀವಕಾರುಣ್ಯವನ್ನು ಕಾಣಬಹುದು.

About the Author

ಮಂಜುನಾಥ ಎಂ. ಅದ್ದೆ
(22 July 1973)

ಪತ್ರಿಕೋದ್ಯಮ, ಸಾಹಿತ್ಯ, ಹೋರಾಟ- ಈ ಮೂರೂ ದೋಣಿಗಳಲ್ಲಿ ಪಯಣಿಸುತ್ತಿರುವ ಮಂಜುನಾಥ ಅದ್ದೆ ಅವರದ್ದು ಪ್ರತಿಭಾವಂತ ವ್ಯಕ್ತಿತ್ವ. ಬೆಂಗಳೂರು ಉತ್ತರ ತಾಲ್ಲೂಕಿನ ಅದ್ದೆ ಗ್ರಾಮದವರಾದ ಮಂಜುನಾಥ್ ಮೂಲತಃ ಕೃಷಿಕ ಕುಟುಂಬಕ್ಕ ಸೇರಿದವರು. 1973ರ ನಡುಭಾಗದಲ್ಲಿ ಹುಟ್ಟಿದ ಮಂಜುನಾಥ್ ಅವರ ತಂದೆ ಮುನಿಹನುಮಯ್ಯ, ತಾಯಿ-ಲಕ್ಷ್ಮಮ್ಮ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದಲ್ಲಿ ಎಂ.ಎ.ಸ್ನಾತಕೋತ್ತರ ಪದವಿ ಪಡೆದ ನಂತರ ಬದುಕಿನ ಮಾರ್ಗದ ಬಗ್ಗೆ ಅವರಿಗೆ ಗೊಂದಲಗಳೇ ಇರಲಿಲ್ಲ. ದೊಡ್ಡಬಳ್ಳಾಪುರದ ಶ್ರೀಕೊಂಗಾಡಿಯಪ್ಪ ಕಾಲೇಜಿನಲ್ಲಿ ಎರಡು ವರ್ಷಗಳ ಕಾಲ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದರು. ಈ ಹೊತ್ತಿಗಾಗಲೇ ಸಮಾಜಮುಖಿ ಚಳವಳಿ, ಹೋರಾಟಗಳಲ್ಲಿ ತೊಡಗಿಕೊಂಡಿದ್ದ ಮಂಜುನಾಥ್ ಅದ್ದೆ ಹಲವು ಸಂಸ್ಥೆಗಳನ್ನು ಹುಟ್ಟುಹಾಕಿದ್ದರು. ತನ್ನೊಳಗಿನ ...

READ MORE

Related Books