ಯಾಬ್ಲಿ

Author : ಎಚ್‌.ಆರ್‌. ರಮೇಶ

Pages 152

₹ 160.00
Year of Publication: 2023
Published by: ಅಂಕಿತ ಪುಸ್ತಕ
Address: #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

`ಯಾಬ್ಲಿ’ ಎಚ್.ಆರ್. ರಮೇಶ ಅವರ ಕಥಾಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಬದುಕಿನ ಅನೇಕ ಸಂಗತಿ ಮತ್ತು ಅನುಭವಗಳಿಗೆ ಮುಖಾಮುಖಿಯಾಗಿ ಅದನ್ನೆಲ್ಲ ಕತೆಯಲ್ಲಿ ಹಿಡಿದಿಡುವುದು ಅಸಾಧ್ಯದ ಮಾತು. ಹಿಡಿದಿಡಲು ಪ್ರಯತ್ನಪಟ್ಟರೂ ಸಿಕ್ಕುವುದು ಒಂದು ಚುಕ್ಕಿಯಷ್ಟು ಮಾತ್ರ. ಆ ಅಷ್ಟಾದರೂ ಕತೆಯಲ್ಲಿ / ಕಲೆಯಲ್ಲಿ ಯಥಾವತ್ತಾಗಿ ಮೂಡುವುದಾ, ನೋ ವೇ! ವಾಸ್ತವವೆನ್ನುವುದು ಯಾವ ಕಾರಣಕ್ಕೂ ಭಾಷೆಯಲ್ಲಿ ಇದ್ದ ಹಾಗೆ ಮೂಡುವುದೇ ಇಲ್ಲ. ಅದು ಬೇರೆ ಬಗೆಯಲ್ಲೇ ಇರುತ್ತದೆ. ಏನನ್ನೋ ಹೇಳಲು ಹೋಗಿ ಮತ್ತೊಂದನ್ನು ಹೇಳುವುದು. ಇದು ಅಚ್ಚರಿ. ಹೇಳಬೇಕಾದ ಕತೆಗಳು ಆವಿಯಾಗಿ ಯಾವುದೋ ಮೂಲೆಯಿಂದ ನಮಗೆ ಗೊತ್ತಿಲ್ಲದ ಕತೆಗಳು, ಕತೆಗಳು ಅಲ್ಲ ಎನ್ನಬಹುದಾದವುಗಳು ಹೊರ ಮೂಡುವುವು. ಒಮ್ಮೊಮ್ಮೆ ಮರೆಯಾದ ಕತೆಗಳೇ ನಿಜವಾದ ಕತೆಗಳು ಎಂದು ಎನ್ನಿಸುತ್ತದೆ. ಕತೆಯ ಹಾದಿ ಅನಂತ. ಅದು ಕ್ರಮಿಸುವಾಗ ಲೋಕಜ್ಞಾನ, ನಮ್ಮ ಸಂವೇದನೆ, ಕಲ್ಪನೆಗಳನ್ನು ಸೇರಿಕೊಳ್ಳುತ್ತವೆ. ಇದು ವಾಸ್ತವ. ಹಾಗಾಗಿ ಕತೆಗಿಂತ ವಾಸ್ತವವಿಲ್ಲ; ವಾಸ್ತವಕ್ಕಿಂತ ಕತೆಯಿಲ್ಲ!

About the Author

ಎಚ್‌.ಆರ್‌. ರಮೇಶ

ಹೊಸ ತಲೆಮಾರಿನ ಪ್ರತಿಭಾವಂತ ಕವಿ ಎಚ್.ಆರ್. ರಮೇಶ್ ಮೂಲತಃ ಚಿತ್ರದುರ್ಗದ ಬಳಿಯ ಹರಿಯಬ್ಬೆಯವರು. ಈಗ ಮಡಿಕೇರಿಯಲ್ಲಿ ಇಂಗ್ಲಿಷ್ ಪ್ರಾದ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ರಮೇಶ್ ಕೆಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ಹೊಸ ತಲೆಮಾರಿನ ವಿಮರ್ಶಕರಾಗಿಯೂ ಗುರುತಿಸಿಕೊಂಡಿರುವ ಇವರು ಸಮಕಾಲೀನ ಲೇಖಕರ ಕೃತಿಗಳ ಕುರಿತು ವಿಮರ್ಶೆಗಳನ್ನು ಬರೆಯುತ್ತಾರೆ, ಕಥೆ, ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಝೆನ್ನದಿ ಇವರ ಪ್ರಮುಖ ಕವಿತಾ ಸಂಕಲನ. ಮತ್ತೊಂದು ಕೃತಿ ‘ಅದರ ನಂತರ’ ಪ್ರಕಟವಾಗಿದೆ.  ...

READ MORE

Related Books