ತಾರಕ

Author : ವಿನೋದ್ ಆರ್ ಬಿ

Pages 90

₹ 100.00




Year of Publication: 2020
Published by: ಯೋಗಿನಿ ಪ್ರಕಾಶನ
Address: #488 , 13 ನೇ ವಾರ್ಡ್, ಕೆಎಚ್ ಬಿ ಕಾಲೊನಿ ಹಿಂಭಾಗ, ಸಿರುಗುಪ್ಪ, ಜಿಲ್ಲೆ ಬಳ್ಳಾರಿ.
Phone: 8970356631

Synopsys

ತಾರಕ-ಲೇಖಕ ವಿನೋದ ಆರ್.ಬಿ. ಅವರ ಕಥಾ ಸಂಕಲನ. ನಾಲ್ಕು ನೀಳ್ಗತೆಗಳನ್ನು ಒಳಗೊಂಡಿದೆ. ಮನರಂಜನೆಗಿಂತ ಜೀವನ ರೂಪಿಸಿಕೊಳ್ಳುವತ್ತ ಓದುಗರನ್ನು ಸೆಳೆಯುವ ಹಾಗೂ ಪ್ರಧಾನ ಆಶಯದ ಕಥೆಗಳು ಇಲ್ಲಿವೆ. ಡಾ. ಸಿ. ಕೊಟ್ರೇಶ್ ಅವರು ಕೃತಿಗೆ ಮುನ್ನುಡಿ ಬರೆದು ‘ನೀಳ್ಗತೆಯ ಪ್ರಾಕಾರದಲ್ಲಿ ರಚಿತವಾದ ಇಲ್ಲಿಯ ಕಥೆಗಳು ಜೀವನ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ’ ಎಂದು ಪ್ರಶಂಸಿಸಿದ್ದರೆ, ಬೆನ್ನುಡಿ ಬರೆದ ಸಾಹಿತಿ ಸಿದ್ಧರಾಮ ಕಲ್ಮಠ ‘ಇಲ್ಲಿಯ ಕಥೆಗಳು ಸಾಮಾಜಿಕ ಮೌಲ್ಯಗಳನ್ನು ಆಶಿಸುತ್ತವೆ’ ಎಂದು ಶ್ಲಾಘಿಸಿದ್ದಾರೆ. 

About the Author

ವಿನೋದ್ ಆರ್ ಬಿ
(09 September 1999)

ಲೇಖಕ ವಿನೋದ ಆರ್.ಬಿ ಅವರು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕೆಂಚನಗುಡ್ಡ ತಾಂಡಾದವರು. ತಂದೆ ಬಾಬು ನಾಯ್ಕ್ , ತಾಯಿ : ಹೇಮಲತಾ, ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಸಿರುಗುಪ್ಪದಲ್ಲಿ ಪ್ರೌಢಶಿಕ್ಷಣ, ಪಿಯುಸಿ ಹಾಗೂ ಸದ್ಯ, ಬಳ್ಳಾರಿಯ ಕಾಲೇಜೊಂದರಲ್ಲಿ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿ. ಚುಟುಕು ಕವನಗಳು, ರಂಗಗೀತೆಗಳ ರಚನೆ ಇವರ ಹವ್ಯಾಸ. ತಾರಕ- ಇವರ ಮೊದಲ ಕಥಾ ಸಂಕಲನ.  ...

READ MORE

Related Books