ಜುಮ್ಮಾ

Author : ಸೃಜನ್ (ಪಿ. ಶ್ರೀಕಾಂತ್)

Pages 96

₹ 68.00
Year of Publication: 2017
Published by: ನವಕರ್ನಾಟಕ ಪ್ರಕಾಶನ
Address: ನವಕರ್ನಾಟಕ ಪ್ರಕಾಶನ

Synopsys

2012ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತೆಲುಗು ಮೂಲದ ಕಥಾ ಸಂಕಲನದ ಕನ್ನಡ ಅನುವಾದ ಈ ಪುಸ್ತಕ. ಟಿ.ವಿ. ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ವೇಂಪಲ್ಲಿ ಶರೀಫ್‍ರವರ ಕಥಾ ಸಂಕಲನವನ್ನು ಸೃಜನ್‍ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಒಟ್ಟು ಹದಿನೆಂಟು ಕಥೆಗಳನ್ನು ಹೊಂದಿರುವ ಈ ಕಥಾ ಸಂಕಲನವು ಹಳ್ಳಿಯ ಜನ ಮತ್ತು ಜನರ ಜೀವನದ ಕಷ್ಟ ಸುಖಗಳ ಕುರಿತು ವಿವರಿಸುತ್ತವೆ. ಕಟ್ಟಾ ಸಂಪ್ರದಾಯವಾದಿಗಳು, ಅಂತಹ ಸಂಪ್ರದಾಯದ ವಿರೋಧಿಗಳು, ಹಳ್ಳಿಗಾಡಿನ ಆಚಾರ – ವಿಚಾರಗಳು, ಪ್ರಶ್ನಿಸುವ ಹಿರಿಯರು, ಶ್ರಮಿಕ ವರ್ಗ, ಧನಿಕ ವರ್ಗ ಹೀಗೆ ಯಾರನ್ನೂ ಬಿಡದೆ ಹೆಣೆದ ಕಥೆಗಳು ಹಳ್ಳಿಗಾಡಿನ ಜನರ ಭವಣೆಗಳ ಕುರಿತು ಹಳ್ಳಿಗಾಡಿನ ಜನರ ಸಂಘರ್ಷಗಳ ಕುರಿತು ವಿಸ್ತೃತವಾದ ಚಿತ್ರಣವನ್ನು ನಮಗೆ ನೀಡುತ್ತವೆ. ಶೋಷಿತ ವ್ಯಕ್ತಿಗಳ ಭಾವನೆಗಳ ಜೊತೆ ಆಟವಾಡುವಂತಹ ಶೋಷಕ ವರ್ಗ, ಬಡತನದ ಬೇಗುದಿಯಲ್ಲಿ ಬೇಯುವ ಕೆಳ ವರ್ಗದ ಜನ, ಬಡತನದ ಕಾರಣದಿಂದ ಕನಸುಗಳನ್ನು ಮರೆಮಾಚಿ ಬೆಳೆಯುವ ಕೂಸುಗಳು ಹೀಗೆ ಮುಂತಾದ ಮನಮುಟ್ಟುವ ಮತ್ತು ಮನ ಕಲಕುವ ವಿಚಾರಗಳು ಈ ಪುಸ್ತಕದಲ್ಲಿ ಅಡಗಿವೆ.

About the Author

ಸೃಜನ್ (ಪಿ. ಶ್ರೀಕಾಂತ್)

ಸೃಜನ್ ಎಂದೇ ಹೆಸರಾದ ಪಿ. ಶ್ರೀಕಾಂತ್ ಹುಟ್ಟಿದ್ದು ಆಂಧ್ರಪ್ರದೇಶದ ಕಡಪ ಜಿಲ್ಲೆಯ ಕಮಲಾಪುರಂನಲ್ಲಿ. ಓದಿದ್ದು ಕೊಪ್ಪಳ, ಸಂಡೂರು ಮತ್ತು ಬಳ್ಳಾರಿಯಲ್ಲಿ. ಬಿಇ ಸಿವಿಲ್ ಪದವೀಧರರಾದ ಸೃಜನ್ ಸುಮಾರು 15 ವರ್ಷಗಳ ಕಾಲ ಎಂಜಿನಿಯರ್ ಆಗಿ ಜಿಂದಾಲ್ ಉಕ್ಕಿನ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಎಳೆತನದಿಂದಲೂ ಕಲೆ,ಸಿನಿಮಾ ಮತ್ತು ಸಾಹಿತ್ಯದ ಕುರಿತು ಒಲವು. 1988ರಿಂದಲೂ ವ್ಯಂಗ್ಯಚಿತ್ರ ರಚನೆಯಲ್ಲಿ ತೊಡಗಿಸಿಕೊಂಡ ಇವರು, ಕಾಸರಗೋಡು,ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ಇವರ ವ್ಯಂಗ್ಯಚಿತ್ರಗಳ ಪ್ರದರ್ಶನ ಕಂಡಿವೆ. ಮುಂಬೈನ ’ಜಿಂದಾಲ್ ಆರ್ಟ ಫೌಂಡೇಶನ್’ ನಡೆಸಿದ ಕಲಾಸ್ಪರ್ಧೆಯಲ್ಲಿ ’ ಅಪನಾ ಆರ್ಟಿಸ್ಟ್’ ಪುರಸ್ಕಾರಕ್ಕೆ ಭಾಜನರಾದ ಸೃಜನ್ ಅವರ 18 ಕಲಾಕೃತಿಗಳಿಗೆ ಶಾಶ್ವತ ಡಿಸ್‌ಪ್ಲೆ ...

READ MORE

Related Books