ಪಾ.ವೆಂ. ಆಚಾರ್ಯರ ಸಮಗ್ರ ಸಂಪುಟದಡಿ ಪ್ರಕಟಿಸಿದ ಕೃತಿ-ಹಿಂದೂ ಮುಸ್ಲಿಂ ಮತ್ತು ಇತರ ಕತೆಗಳು. ಲೇಖಕರು ಪಾ.ವೆಂ. ಆಚಾರ್ಯ. ಡಾ. ಶ್ರೀನಿವಾಸ ಹಾವನೂರು ಅವರು ಪ್ರಧಾನ ಸಂಪಾದಕರು.
ಕರುಳಿನ ಮರುಳು, ಅಪರ ಜೀವನ, ಪಿಶಾಚಿಯ ತವರು ಮನೆ, ಕಣ್-ಸನ್ನೆ, ಹಿಂದೂ ಮುಸ್ಲಿಂ, ಒಂದು ಅ-ನೀತಿ ಕಥೆ, ವಾಕಿಂಗ್ ಸ್ಟಿಕ್ ನ ಪ್ರಕರಣ ಸೇರಿದಂತೆ ಒಟ್ಟು 12 ಕತೆಗಳು ಇಲ್ಲಿ ಸಂಕಲನಗೊಂಡಿವೆ. ಈ ಕಥೆಗಳಲ್ಲಿ ದೂರದೃಷ್ಟಿ ಇದೆ. ವಾಸ್ತವಕ್ಕೆ ತೀರಾ ಹತ್ತಿರದ ಕಥಾ ವಸ್ತುವಿದೆ. ಸಾಮಾಜಿಕ ವಿದ್ಯಮಾನಗಳ ಗಂಭೀರ ಚರ್ಚೆ-ಚಿಂತನೆಯೂ ಇದೆ. ವಿಶಾಲ ಲೋಕಾನುಭವವೂ ಇದೆ. ಪ್ರಕೃತಿ ಸಹಜತೆಯ ತತ್ವವಿದೆ. ಈ ಕಥೆಗಳು ಓದುರಗರ ಗಮನ ಸೆಳೆಯುತ್ತವೆ.
ಲಾಂಗೂಲಾಚಾರ್ಯ ಎಂದು ಖ್ಯಾತರಾಗಿದ್ದ ಪಾಡಿಗಾರು ವೆಂಕಟರಮಣ ಆಚಾರ್‍ಯರು ಜನಿಸಿದ್ದು 1933ರಲ್ಲಿ. ಉಡುಪಿಯವರಾದ ಪಾ.ವೆಂ. ಅವರ ತಂದೆ ಲಕ್ಷ್ಮೀರಮಣಾಚಾರ್ಯ, ತಾಯಿ ಸೀತಮ್ಮ. ಶಿಕ್ಷಣವನ್ನು ಉಡುಪಿಯಲ್ಲಿ ಪಡೆದ ಅವರು ಶಾಲೆಯಲ್ಲಿ ಕಲಿತಿದ್ದು ಕೇವಲ ಮ್ಯಾಟ್ರಿಕ್ ವರೆಗೆ ಮಾತ್ರ. ಮನೆಯ ಆರ್ಥಿಕ ಸ್ಥಿತಿ ಹೆಚ್ಚಿನ ವ್ಯಾಸಂಗಕ್ಕೆ ಅನುವು ಮಾಡಿಕೊಡಲಿಲ್ಲ. ಕೆಲ ಕಾಲ ಅಂಗಡಿ ಹಾಗೂ ಹೊಟೇಲುಗಳಲ್ಲಿ ಗುಮಾಸ್ತರಾಗಿ ಮತ್ತು ಕೆಲವೆಡೆ ಶಿಕ್ಷಕರಾಗಿ ವೃತ್ತಿ ಜೀವನ ನಡೆಸಿದರು. 1937 ರಲ್ಲಿ ಆರಂಭವಾದ ಉಡುಪಿಯ 'ಅಂತರಂಗ' ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿ ಪತ್ರಿಕೋದ್ಯಮಕ್ಕೆ ಬಂದ ಪಾವೆಂ ಅವರು 1941ರಲ್ಲಿ 'ಲೋಕ ಶಿಕ್ಷಣ ಟ್ರಸ್ಟ್' ಸೇರಿದರು. ...
READ MORE