ಕೂರ್ಗ್ ರೆಜಿಮೆಂಟ್

Author : ಮೇಜರ್. ಡಾ. ಕುಶ್ವಂತ್ ಕೋಳಿಬೈಲು

Pages 88

₹ 100.00




Year of Publication: 2020
Published by: ಮೈತ್ರಿ ಪ್ರಕಾಶನ
Address: ಮೈತ್ರಿ ಪ್ರಕಾಶನ, 504, 2ನೇ ಕ್ರಾಸ್, 2ನೇ ಬ್ಲಾಕ್, ಬಿ ಎಸ್ ಕೆ ಮೊದಲ ಹಂತ, ಬೆಂಗಳೂರು-560050
Phone: 8317396164

Synopsys

ಕೂರ್ಗ ರೆಜಿಮೆಂಟ್ -ಎಂಬುದು ಮೇ. ಡಾ. ಕುಶ್ವಂತ ಕೋಳಿಬೈಲು ಅವರ ಸಣ್ಣ ಕಥೆಗಳ ಸಂಕಲನ. ಈ ಕೃತಿಯು 12 ಶೀರ್ಷಿಕೆಗಳನ್ನು ಒಳಗೊಂಡಿದ್ದು ಕೂರ್ಗ್ ರೆಜಿಮೆಂಟ್, ಬೊಳ್ಮಮ್ಮ, ಗಣಿ  ಬೋಪಣ್ಣ, ಅವ್ವ, ಒಂದು ಬೊಗಸೆ ಮಣ್ಣು, ಹುಲಿ ಮದುವೆ, ಮುತ್ತಿನಹಾರ, ಬಾಲ, ಡಾ. ಮುತ್ತಮ್ಮ, ಬೊಳ್ಳು, ಸ್ವರ್ಗಕ್ಕೆ ಏಣೀ, ಇಝತ್ ಓ. ಇಕ್ಬಾಲ್ ಕಥಾನಕಗಳು ಇಲ್ಲಿವೆ. ಪುಸ್ತಕದ ಅಡಿಬರಹ ಬಂದೂಕು ಹಿಡಿದವರ ನಾಡಿಮಿಡಿತ ಅಂತಿದೆ ಹಾಗಂತ ಈ ಕತೆಗಳಲ್ಲಿ ಹೊಡಿ ಬಡಿ ಇಲ್ಲ ಬದಲು ನಮ್ಮ ಸೈನಿಕರು ನಿವೃತ್ತಿ ಹೊಂದಿದ ನಂತರ ಅನುಭವಿಸುವ ಬವಣೆಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಶೀರ್ಪಿಕೆಯ ಕತೆ ಕೂರ್ಗ್ ರೆಜಿಮೆಂಟ್ ಹೇಳಬೇಕಾದುದನ್ನು ಧ್ವನಿಪೂರ್ಣವಾಗಿ ಹೇಳುತ್ತದೆ. ಕಾವೇರಿ ಮದುವೆಯಾಗಿ ಕೆಲವು ತಿಂಗಳುಗಳಲ್ಲಿ ಸೈನ್ಯದಲ್ಲಿದ್ದ ಪತಿಯನ್ನು ಕಳೆದುಕೊಳ್ಳುತ್ತಾಳೆ ಎನ್ನುವ ವಿಚಾರದ ಚಿತ್ರಣವು ಇಲ್ಲಿದೆ. ಲೇಖಕರು ಹತ್ತಿರದಿಂದ ನೋಡಿದ ತಮ್ಮ ಕೊಡಗು ನಾಡಿನ ಚಿತ್ರಣ ಅದ್ಭುತವಾಗಿ ಕಟ್ಟಿ ಕೊಟ್ಟಿದ್ದಾರೆ. 

About the Author

ಮೇಜರ್. ಡಾ. ಕುಶ್ವಂತ್ ಕೋಳಿಬೈಲು

ವೃತ್ತಿಯಿಂದ ವೈದ್ಯರಾದ ಮೇ ಡಾ. ಕುಶ್ವಂತ ಕೋಳಿಬೈಲು ಅವರು ಹುಟ್ಟಿದ್ದು ಕೊಡಗಿನ ಭಾಗಮಂಡಲದಲ್ಲಿ. ಮಂಗಳೂರಿನ ಫಾದರ್ ಮುಲ್ಲರ್ಸ್ ಕಾಲೇಜಿನಿಂದ ವೈದ್ಯಕೀಯ ಪದವಿ.ನಂತರ ಸೈನ್ಯ ಸೇರಿ ಆರ್ಮಿಮೆಡಿಕಲ್ ಕೋರ್ ವಿಭಾಗದಲ್ಲಿ ಭರ್ತಿ.ನಿವೃತ್ತಿಯ ನಂತರ ಪುಣೆಯಲ್ಲಿ ಪಿಡಿಯಾಟ್ರಿಶಿಯನ್ ಆಗಿ ಕೆಲಸ. ಈಗ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿದ್ದು,  ಸಾಹಿತ್ಯ ಮೆಚ್ಚಿನ ಹವ್ಯಾಸ. ಪತ್ರಿಕೆಗಳಿಗೆ ನಿಯಮಿತವಾಗಿ ಅಂಕಣ ಬರೆಯುತ್ತಿದ್ದಾರೆ. ಕೃತಿಗಳು: .ಕೂರ್ಗ್ ರೆಜಿಮೆಂಟ್ (ಪ್ರಬಂಧಗಳ ಸಂಕಲನ), ಮುತ್ತಿನ ಹಾರ (ಕವನಗಳ ಸಂಕಲನ), ಕಾವೇರಿ ತೀರದ ಕಥೆಗಳು (ಕಥಾ ಸಂಕಲನ)  ...

READ MORE

Conversation

Reviews

Related Books