ಸ್ತೋಮ

Author : ಚನ್ನಪ್ಪ ಅಂಗಡಿ

Pages 111

₹ 100.00




Year of Publication: 2019
Published by: ನಿವೇದಿತಾ ಪ್ರಕಾಶನ
Address: 9ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆ, ಶಾಸ್ತ್ರೀನಗರ, ಬನಶಂಕರಿ ೨ನೇ ಹಂತ, ಬೆಂಗಳೂರು-28
Phone: 9448327783

Synopsys

ಚನ್ನಪ್ಪ ಅಂಗಡಿ ಅವರ ಸ್ತೋಮ ಕಥಾ ಸಂಕಲನ ಓದುಗರನ್ನು ಸೆಳೆಯುವುದು ಅವರು ಆಯ್ದುಕೊಂಡ ಕಥಾ ವಸ್ತುವಿನ ಕಾರಣಕ್ಕೆ. ಸಾಮಾನ್ಯವಾಗಿ ಕುಟುಂಬ, ಸಂಬಂಧ, ಕಂಡುಂಡ ವಿಷಯಗಳನ್ನು ಕಥಾ ವಸ್ತುಗಳಾಗಿಸಿಕೊಂಡು ಹಲವಾರು ಕಥಾ ಸಂಕಲನಗಳು ಈಗಾಗಲೇ ಬಂದಿವೆ. ಚನ್ನಪ್ಪ ಅವರು ತಮ್ಮ ಕತೆಗಳಲ್ಲಿ ಮಣ್ಣು, ನೀರು ಹಾಗೂ ಬದುಕಿನ ಕುರಿತು ಕತೆಗಳನ್ನು ರಚಿಸಿದ್ದಾರೆ. 

ಜೋಗಿ ಅವರು ಮುನ್ನುಡಿಯಲ್ಲಿ ’ಭೂಮಿ ಮತ್ತು ಬದುಕಿನ ನಡುವಿನ ಸಂಬಂಧವನ್ನು ಹುಡುಕುತ್ತಲೇ ಅವರು ಆಧುನಿಕತೆ ಮತ್ತು ಪ್ರಾಚೀನ ರಹಸ್ಯಗಳ ಸುಳಿವನ್ನೂ ಹುಡುಕಲು ಹೊರಡುತ್ತಾರೆ. ಇದನ್ನು ಅವರು ಕಥನವನ್ನಾಗಿ ನಿರೂಪಿಸುವಲ್ಲಿ ತೋರಿಸುವ ಜಾಣ್ಮೆ ಕೌಶಲ ಈ ಕತೆಗಳನ್ನು ಹೊಸದಾಗಿಸಿವೆ. ಆರಂಭದಲ್ಲೇ ಬರುವ 'ಹಲೋ' ಎಂಬ ಕತೆಯ ವಸ್ತುವೇ ಕತೆಯ ಶಕ್ತಿ, ಇಲ್ಲಿ ಕತೆಯೆಂಬುದಿಲ್ಲ. ಕತೆಯೆಂಬುದಿದೆ ಎಂಬ ಮಾಯಾಲೋಕವ ಸೃಷಿಸಬಲ್ಲ ಚನ್ನಪ್ಪ, ಕತೆ ತಾನಾಗಿ ಏನನ್ನೂ ಹೇಳದೇ, ಅದಾಗಿಯೇ ಎಲ್ಲವನ್ನೂ ಧ್ವನಿಸುವಂತೆ ಮಾಡಬಲ್ಲರು. ಕೇವಲ ಮಾತುಗಳಲ್ಲಿ ಮಾತ್ರ ಅಸ್ತಿತ್ವ ಉಳಿಸಿಕೊಂಡಿರುವವರ ಜಗತ್ತಿನ ಹಾಗೆಯೇ, ಸತ್ಯ ಬಿಡದ ಸೂದ್, ಸುಳ್ಳಾಡದ ತಂದೆಯವರ ನಡುವೆ ಭೂತ ಭವಿಷ್ಯಗಳ ನಡುವಿನ ಸುಳಿಯಲ್ಲಿ ಸಿಲುಕಿರುವ ಕಥಾನಾಯಕನ ತುಮುಲವೂ ಇದೆ. ಈ ಭೂಮಿಯ ಬೆರಗುಗಳನ್ನು ವಿಜ್ಞಾನ ಮತ್ತು ಜನಪದ ಗ್ರಹಿಕೆ ಹೇಗೆ ಅರ್ಥಮಾಡಿಕೊಳ್ಳುತ್ತದೆ ಮತ್ತು ಅವೆರಡರ ನಡುವಿರುವ ವ್ಯತ್ಯಾಸಗಳೇನು ಅನ್ನುವುದನ್ನೂ ಹೇಳದೆಯೇ ಹೇಳುತ್ತದೆ’ ಎನ್ನುತ್ತಾರೆ. 

ಸರಳವಾದ ಕತೆಗಳೂ ಹೊಸ ಹೊಳಹಿನ ಪ್ರಸಂಗಗಳೂ ಇರುವಂಥ ಈ ಸಂಕಲನದ ಶಕ್ತಿಯೆಂದರೆ ಚನ್ನಪ್ಪ ಅಂಗಡಿಯವರ ನಿರೂಪಣಾ ಕ್ರಮ.  ಕಾಲಗಳ ತಲ್ಲಣಗಳನ್ನು ಗ್ರಹಿಸಬಲ್ಲ ಶಕ್ತಿ ಹೊಂದಿರುವವರು. ಅವರ ನಿರಾಳತೆಯೇ ಅವರ ವೈಶಿಷ್ಟ ಎಲ್ಲೂ ಉದ್ವಿಗ್ನಗೊಳ್ಳದೇ, ಅವಸರಿಸದೇ, ತಾನು ಹೇಳಬೇಕಾದ್ದನ್ನು ಹೇಳಿಯ ಸಿದ್ಧ ಎಂಬ ನಿಷ್ಟುರ ನಿಲುವಿನೊಂದಿಗೆ ಅವರು ಕತೆಗಳೊಡನೆ ಮಾತನಾಡತೊಡಗುತ್ತಾರೆ. 

About the Author

ಚನ್ನಪ್ಪ ಅಂಗಡಿ
(15 April 1970)

ಚನ್ನಪ್ಪ ಅಂಗಡಿ ಅವರು  ಎಮ್ ಎಸ್ ಸಿ (ಕೃಷಿ)  ಸಹಾಯಕ ಕೃಷಿ ನಿರ್ದೇಶಕರಾಗಿದ್ದಾರೆ.   ಇವರು ಜನಿಸಿದ್ದು15.04.1970, ಬಮ್ಮನಹಳ್ಳಿ ಹಾವೇರಿ ಜಿಲ್ಲೆಯಲ್ಲಿ.   ಮಂದ ಬೆಳಕಿನ ಸಾಂತ್ವನ, ಭೂಮಿ ತಿರುಗುವ ಶಬ್ದ (ಕವನಸಂಕಲನ), ಮಣ್ಣಿನೊಳಗಣ ಮರ್ಮ, ಕಿಬ್ಬದಿಯ ಕೀಲುಳುಕಿ (ಕಥಾಸಂಕಲನ), ಎದೆಯ ಒಕ್ಕಲಿಗ (ವೈಚಾರಿಕ), ಕೃಷಿ ಕಾರಣ ಸಂಪಾದನೆ : ಮಡಿಲು, ಕಾಯಕಯೋಗಿ, ಕದಂಬ, ಬಿತ್ತೋಣ ಹತ್ತಿ ಬೆಳೆಯೋಣ, ಗಿಡಗಂಟೆಗಳ ಕೊರಳು ಕೃತಿಗಳನ್ನು ರಚಿಸಿದ್ದಾರೆ. ಭೂಚೇತನ ಪ್ರಶಸ್ತಿ , ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಕಾವ್ಯ), ಮುದ್ದಣ ರತ್ನಾಕರವರ್ಣಿ ಅನಾಮಿಕ (ಕಸಾಪ) ಪ್ರಶಸ್ತಿ, ವಿಭಾ ಸಾಹಿತ್ಯ ಪ್ರಶಸ್ತಿ, ...

READ MORE

Related Books