ಅಸ್ಪೃಶ್ಯ ವಸಂತ

Author : ನಗರಗೆರೆ ರಮೇಶ್

Pages 304

₹ 200.00
Year of Publication: 2010
Published by: ಲಂಕೇಶ್ ಪ್ರಕಾಶನ
Address: ನಂ.9, ಪೂರ್ವ ಆಂಜನೇಯ ಗುಡಿ ರಸ್ತೆ, ಬಸವನಗುಡಿ, ಬೆಂಗಳೂರು 560 004
Phone: 08026676427

Synopsys

ಲೇಖಕ ನಗರಗೆರೆ ರಮೇಶ್ ಅವರ ‘ಅಸ್ಪೃಶ್ಯ ವಸಂತ’ ಕೃತಿಯು ನೆನಪುಗಳು ಸದಾ ಹಸಿರು ಎಂಬ ಉಪಶೀರ್ಷೀಕೆಯನ್ನು ಹೊಂದಿದೆ. ತೆಲುಗು ಮೂಲದ ಈ ಕೃತಿಯನ್ನು ಲೇಖಕ ಜಿ.ಕಲ್ಯಾಣರಾವು ಬರೆದಿದ್ದು ಕನ್ನಡಕ್ಕೆ ನಗರಗೆರೆ ರಮೇಶ್ ಅವರು ಅನುವಾದ ಮಾಡಿದ್ದಾರೆ. ಡಾ.ಬಂಜಗೆರೆ ಜಯಪ್ರಕಾಶ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದು, ‘ದಲಿತ ಮೂಲದಿಂದ ಬಂದ ಬರಹಗಾರರನ್ನು ಜನಪದ ಕಲಾ ಪ್ರಕಾರಗಳ ಶೈಲಿ ಮತ್ತು ಸ್ತವ ಬಹುವಾಗಿ ಪ್ರಭಾವಿಸುತ್ತದೆ. ಸಮಕಾಲೀನ ತಲೆಮಾರಿನ ಬರಹಗಾರರ ಬಾಲ್ಯ , ಅವರ ತಾಯಿ-ತಂದೆಯರ ಬದುಕು ಇವೆಲ್ಲಾ ಜನಪದ ಸಂಸ್ಕೃತಿಯ ದಟ್ಟ ಆವರಣದೊಳಗೇ ರೂಪುಗೊಂಡಿರುತ್ತದೆಯಾದ್ದರಿಂದ ಈ ಬಗೆಯ ಪ್ರಭಾವ ಸಹಜ. ಈ ಶೈಲಿ ಮತ್ತು ಸತ್ವವನ್ನು ಅತ್ಯಂತ ಗೌರವದಿಂದ ಕಾಣುತ್ತಾ, ಜನಪದರ ಬದುಕಿನ ವಿಶ್ವಾಸ, ಆಚರಣೆಗಳನ್ನು ಅವರ ಕಲಾ ಪ್ರಾಜ್ಞತೆಯನ್ನು ಗೌರವಿಸುತ್ತಾ, ಎಲ್ಲಾ ಆದಿಮ ಸಮುದಾಯಗಳ ಸ್ವಂತ ಸ್ವತ್ತಾಗಿರುವ ಮೌಖಿಕ ಕಥನ ನಿರೂಪಣಾ ಕೌಶಲವನ್ನು ಹದವರಿತು ಬಳಸಿಕೊಳ್ಳಬಲ್ಲ ಬರಹಗಾರರು ಅತ್ಯಂತ ಮಹತ್ವದಾದುದನ್ನು ನೀಡಬಲ್ಲವರಾಗಿರುತ್ತಾರೆ’ ಎಂಬುದಾಗಿ ಹೇಳಿದ್ದಾರೆ.

About the Author

ನಗರಗೆರೆ ರಮೇಶ್
(15 December 1948)

ಗೌರಿಬಿದನೂರು ನ್ಯಾಷನಲ್ ಕಾಲೇಜು ಹಾಗೂ ಬೆಂಗಳೂರಿನ ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್‌ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದ ಅವರು ಸದ್ಯ ನಿವೃತ್ತರಾಗಿ ಬೆಂಗಳೂರು ನಿವಾಸಿಯಾಗಿದ್ದಾರೆ. ಪ್ರಗತಿಪರ ಚಿಂತನೆ ಹಾಗೂ ಚಟುವಟಿಕೆಗಳಲ್ಲಿ ಆಸಕ್ತರಾಗಿರುವ ನಗರಗೆರೆ ರಮೇಶ ಅವರು ಅನುವಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ...

READ MORE

Related Books