ಆ 117 ದಿನಗಳು

Author : ಗಿರೀಶ್ ತಾಳಿಕಟ್ಟೆ

Pages 256

₹ 250.00




Year of Publication: 2022
Published by: ಕಾವ್ಯ ಕಲಾಪ್ರಕಾಶನ
Address: #1273, 7ನೇ ಅಡ್ಡರಸ್ತೆ, ಚಂದ್ರಾ ಲೇಔಟ್, ವಿಜಯನಗರ, ಬೆಂಗಳೂರು- 560040

Synopsys

ಮರೈಸ್-ಮರಲಿನ್ ದಂಪತಿಗಳ ಕಡಲ ದುರಂತದ ನಿಜಕಥೆ. ಮತೀಯತೆ, ಜಾತೀಯತೆಯಂತಹ ಮಾರಕ ಕಾಯಿಲೆಗಳಿಗೆ ತುತ್ತಾಗುತ್ತಿರುವ ಭಾರತದ ಹೊಸತಲೆಮಾರಿನ ಹುಡುಗ-ಹುಡುಗಿಯರು ಇಂತಹ ಕಥನಗಳನ್ನು ಓದಬೇಕು; ಹೊರಲೋಕದಲ್ಲಿ ಚೈತನ್ಯಶೀಲರಾದ ಮಂದಿ, ಸಂಪ್ರದಾಯದ ಪಂಕದಲ್ಲಿ ಸಿಕ್ಕಿಕೊಳ್ಳದೆ ಹೇಗೆಲ್ಲ ಬದುಕಿನ ಸಾಹಸಗಳನ್ನು ಮಾಡುವುದಕ್ಕೆ ತುಡಿಯುತ್ತಿದ್ದಾರೆಂದು ತಿಳಿಯಬೇಕು. ನಾಡನ್ನು ದ್ವೇಷದಿಂದ ಕಟ್ಟಲು ಸಾಧ್ಯವಿಲ್ಲ. ಜ್ಞಾನ ಸಾಹಸ ಪ್ರಯೋಗ ಕ್ರಿಯಾಶೀಲತೆಯಿಂದ ಮಾತ್ರ ಕಟ್ಟುವುದಕ್ಕೆ ಸಾಧ್ಯ ಎನ್ನುವುದನ್ನು ತಿಳಿಯಿರಿ ಎಂದು ರಹಮತ್ ತರೀಕೆರೆ ಪುಸ್ತಕದ ಹಿನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಗಿರೀಶ್ ತಾಳಿಕಟ್ಟೆ
(13 November 1984)

ಪತ್ರಕರ್ತ, ಬರಹಗಾರ ಗಿರೀಶ್ ತಾಳಿಕಟ್ಟೆ ಅವರು ಜನಿಸಿದ್ದು 1984 ನವೆಂಬರ್ 13. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ತಾಳಿಕಟ್ಟೆ ಇವರು ಹುಟ್ಟೂರು. ಪ್ರಸ್ತುತ ನಾನು ಗೌರಿ ಪತ್ರಿಕೆಯ ಸಹ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗಾಗಿ ಹೊರತರುತ್ತಿದ್ದ ಗೈಡ್ ಮಾಸಿಕದ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಹವ್ಯಾಸ ಹಾಗೂ ಆಸಕ್ತಿಯಿಂದ ಇವರು ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಟರ್ನಿಂಗ್ ಪಾಯಿಂಟ್ (ವ್ಯಕ್ತಿ ವಿಕಸನ ಬರಹಗಳು), ಕಾಡುವ ಕತೆಗಳು, ನನ್ನ ಕೈಗಂಟಿದ ನೆತ್ತರು (ಅನುವಾದ) ಮುಂತಾದವು ಇವರ ಪ್ರಮುಖ ಕೃತಿಗಳು. ...

READ MORE

Related Books