ಅಮ್ಮ ಬರುತ್ತಾಳೆ

Author : ಭಾರತೀ ಕಾಸರಗೋಡು

Pages 139

₹ 75.00
Published by: ಹೇಮಂತ ಸಾಹಿತ್ಯ ಪ್ರಕಾಶನ
Address: ನಂ.972, ಸಿ, 4ನೇ ಇ ಬ್ಲಾಕ್, 10ನೇ ಮುಖ್ಯರಸ್ತೆ, ರಾಜಾಜಿನಗರ, ಬೆಂಗಳೂರು-560060\n

Synopsys

‘ಅಮ್ಮ ಬರುತ್ತಾಳೆ’ ಕೃತಿಯು ಭಾರತೀ ಕಾಸರಗೋಡು ಅವರ ಸಣ್ಣ ಕಥಾಸಂಕಲನವಾಗಿದೆ. ಕತೆಗಳು ನಿತ್ಯ ಬದುಕಿನ ಜಂಜಾಟಗಳಿಂದಲೇ ಆರಂಭವಾಗುತ್ತದೆ. ಇಲ್ಲಿನ ಕತೆಗಳು ಮನದಾಳಕ್ಕಿಳಿದು ಬಹುಕಾಲ ಕಾಡುವ, ಮರೆಯಲಾಗದ ಕಥೆಗಳಾಗಿ ನಮ್ಮೊಂದಿಗೆ ಇದ್ದು, ಮುಂದೆ ನಾವು ಎದುರಿಸುವ ಯಾವುದೋ ಸಂದರ್ಭದಲ್ಲಿ “ನಮ್ಮ ಗುರುತಾಯಿತೆ ?” ಎನ್ನುವಂತೆ ಧುತ್ತೆಂದು ಎದುರಿಗೆ ಬಂದು ಕೇಳುತ್ತವೆ. “ಅಮ್ಮ ಬರುತ್ತಾಳೆ...' ಹಾಗೂ 'ನಾಳೆಯು ನನ್ನದೇ ಈ ಎರಡು ಕಥೆಗಳು ಓದಿ ಮರೆಯುವಂಥವು ಅಲ್ಲವೇ ಅಲ್ಲ! ಇಲ್ಲಿನ ಚಿಂತನೆಗಳಲ್ಲಿ ಸ್ತ್ರೀಯರ ಅಸಹಾಯಕತೆಗೆ ಮಿಡಿಯುವ ಮನಕ್ಕೊಂದು ಮೇಲುಗೈ ಪಡೆದಿದೆ. ಇಲ್ಲಿನ ಕಥೆಗಳಲ್ಲಿ ಎಲ್ಲೂ ಕೃತಕತೆಯಾಗಲೀ ಅನಗತ್ಯವೆನಿಸುವ ಅತಿರಂಜಕತೆಯಾಗಲೀ ನುಸುಳಿಲ್ಲ. ಪ್ರತಿಯೊಂದು ಕಥೆಯೂ ತನ್ನ ದಾರಿಯಲ್ಲಿ ತನ್ನ ಗಂಭೀರತೆಗೆ ತಕ್ಕಂತೆ ಹೆಜ್ಜೆಹಾಕುತ್ತ ತನ್ನತನವನ್ನಷ್ಟೇ ಉಳಿಸಿಕೊಂಡಿದೆ. ಬಾಳಿನಲ್ಲಿ ಧೈರ್ಯ ಕಳೆದುಕೊಂಡವರಿಗೆ ಇಲ್ಲಿನ ಕಥೆಗಳಲ್ಲಿ ಬರುವ ಕೆಲವು ಮಾತುಗಳು ತುಂಬ ಚೆನ್ನಾಗಿ ಪಾಠ ಹೇಳಬಲ್ಲವು.

About the Author

ಭಾರತೀ ಕಾಸರಗೋಡು

ಕನ್ನಡ ಬರಹಗಾರ್ತಿ ಭಾರತೀ ಕಾಸರಗೋಡು ಅವರು ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರ ಮೊದಲನೆಯ ಕೃತಿ ವೀಣೆಯ ನೆರಳಲ್ಲಿ, ಡಾ. ವಿ.ದೊರೆಸ್ವಾಮಿ ಅಯ್ಯಂಗಾರ್ ಅವರ ಜೀವನವನ್ನು ಕುರಿತದ್ದು. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಮತ್ತು ಅತ್ತಿಮಬ್ಬೆ ಬಹುಮಾನಗಳು ದಕ್ಕಿವೆ. ಬೆಂಗಳೂರಿನಲ್ಲಿ ವಾಸಿಸುತ್ತಿರುವ ಭಾರತಿಯವರ ಇತರ ಪ್ರಕಟಿತ ಪುಸ್ತಕಗಳು ಚಂದನ (ಪ್ರಬಂಧ ಸಂಕಲನ), ರಾಸದರ್ಶನ (ತಂದೆ ಶ್ರೀ ಸಮೇತನಹಳ್ಳಿ ರಾಮರಾಯರಿಗೆ ಅರ್ಪಿಸಿದ ಅಭಿನಂದನ ಗ್ರಂಥ), ಜೀವಿ: ಜೀವ--ಭಾವ (ವಿದ್ವಾಂಸ ಶ್ರೀ ಜಿ. ವೆಂಕಟಸುಬ್ಬಯ್ಯ ಅವರ ಸಂಕ್ಷಿಪ್ತ ಜೀವನ ಚರಿತ್ರೆ), ಮತ್ತು ಬಂಧಬಂಧುರ (ಸಂಪಾದಿತ ...

READ MORE

Reviews

(ಹೊಸತು, ಏಪ್ರಿಲ್ 2012, ಪುಸ್ತಕದ ಪರಿಚಯ)

ಕಥೆಗಳು ಅರಳುವುದು, ನಿತ್ಯದ ಬದುಕಿನ ಆಸುಪಾಸಿನಲ್ಲೇ ಅನುಭವಗಳನ್ನು ಬಿಟ್ಟು ಕಥೆಗಳಿರುವುದಿಲ್ಲ. ನಮ್ಮ ವ್ಯವಸ್ಥೆ ಎಲ್ಲ ರೀತಿಯ ಕಥೆಗಳನ್ನು ಹುಟ್ಟುಹಾಕಿ ತನ್ನ ಪಾಡಿಗೆ ತಾನಿರುತ್ತದೆ. ಕೌಟುಂಬಿಕ ಹಿನ್ನೆಲೆಯಲ್ಲಿ ನಡೆವ ಘಟನೆಗಳನ್ನಾಧರಿಸಿ ಅವನ್ನು ಭಾರತಿ ಕಾಸರಗೋಡು ಮನೋಜ್ಞವಾಗಿ ನಿರೂಪಿಸುತ್ತಾರೆ. ಇವು ಮನದಾಳಕ್ಕಿಳಿದು ಬಹುಕಾಲ ಕಾಡುವ, ಮರೆಯಲಾಗದ ಕಥೆಗಳಾಗಿ ನಮ್ಮೊಂದಿಗೆ ಇದ್ದು, ಮುಂದೆ ನಾವು ಎದುರಿಸುವ ಯಾವುದೋ ಸಂದರ್ಭದಲ್ಲಿ “ನಮ್ಮ ಗುರುತಾಯಿತೆ ?” ಎನ್ನುವಂತೆ ಧುತ್ತೆಂದು ಎದುರಿಗೆ ಬಂದು ಕೇಳುತ್ತವೆ. “ಅಮ್ಮ ಬರುತ್ತಾಳೆ...' ಹಾಗೂ 'ನಾಳೆಯು ನನ್ನದೇ ಈ ಎರಡು ಕಥೆಗಳು ಓದಿ ಮರೆಯುವಂಥವು ಅಲ್ಲವೇ ಅಲ್ಲ! ಇಲ್ಲಿನ ಚಿಂತನೆಗಳಲ್ಲಿ ಸ್ತ್ರೀಯರ ಅಸಹಾಯಕತೆಗೆ ಮಿಡಿಯುವ ಮನಕ್ಕೊಂದು ಮೇಲುಗೈ ಪಡೆದಿದೆ. ಇಲ್ಲಿನ ಕಥೆಗಳಲ್ಲಿ ಎಲ್ಲೂ ಕೃತಕತೆಯಾಗಲೀ ಅನಗತ್ಯವೆನಿಸುವ ಅತಿರಂಜಕತೆಯಾಗಲೀ ನುಸುಳಿಲ್ಲ. ಪ್ರತಿಯೊಂದು ಕಥೆಯೂ ತನ್ನ ದಾರಿಯಲ್ಲಿ ತನ್ನ ಗಂಭೀರತೆಗೆ ತಕ್ಕಂತೆ ಹೆಜ್ಜೆಹಾಕುತ್ತ ತನ್ನತನವನ್ನಷ್ಟೇ ಉಳಿಸಿಕೊಂಡಿದೆ. ಬಾಳಿನಲ್ಲಿ ಧೈರ್ಯ ಕಳೆದುಕೊಂಡವರಿಗೆ ಇಲ್ಲಿನ ಕಥೆಗಳಲ್ಲಿ ಬರುವ ಕೆಲವು ಮಾತುಗಳು ತುಂಬ ಚೆನ್ನಾಗಿ ಪಾಠ ಹೇಳಬಲ್ಲವು.

 

Related Books