ತ್ರಿವೇಣಿ

Author : ಮೀರಾ ಶಂಕರ್

Pages 534

₹ 550.00




Year of Publication: 2023
Published by: ತ್ರಿವೇಣಿ ಶಂಕರ್‌ ಸಾಹಿತ್ಯ ಪ್ರತಿಷ್ಠಾನ
Address: ನಂ. 1152, ಚಾಮರಾಜಪುರಂ, ಮೈಸೂರು
Phone: 94484 13188

Synopsys

ಲೇಖಕಿ ಮೀರಾ ಶಂಕರ್‌ ಅವರ ಸಂಪಾದಿತ ಕೃತಿ ʻತ್ರಿವೇಣಿ: ಮೂರು ಸಂಕಥನಗಳ ಸಮ್ಮಿಲನʼ. ʻತ್ರಿವೇಣಿʼ ಎಂಬ ಲೇಖನಿ ನಾಮದಿಂದಲೇ ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾದ ಕಾದಂಬರಿಕಾರ್ತಿ ಅನಸೂಯ ಶಂಕರ್‌. ಅವರ ನೆನಪಿಗಾಗಿ ಮಗಳು ಮೀರಾ ಶಂಕರ್‌, ತಾಯಿಯ ಮೂರು ಕೃತಿಗಳನ್ನು ಒಟ್ಟುಸೇರಿಸಿ ಒಂದೇ ಪುಸ್ತಕದಲ್ಲಿ ಓದುಗರ ಮುಂದಿಟ್ಟಿದ್ದಾರೆ. ಕೇವಲ 34 ವರ್ಷದ ಅಲ್ಪಾಯುಶಿ ಲೇಖಕಿ ತ್ರಿವೇಣಿ ಅವರು ತಮ್ಮನ್ನು ಸಾಹಿತ್ಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಕೇವಲ 13 ವರ್ಷಗಳು ಮಾತ್ರ. ಈ ಕೂದಲೆಳೆಯಷ್ಟರ ಕಡಿಮೆ ಸಮಯದಲ್ಲೇ ಅವರು 20ಕ್ಕೂ ಅಧಿಕ ಕಾದಂಬರಿಗಳು ಹಾಗೂ 40ಕ್ಕೂ ಅಧಿಕ ಸಣ್ಣ ಕಥೆಗಳನ್ನು ಬರೆದು ಮುಗಿಸಿದ್ದಾರೆ.

About the Author

ಮೀರಾ ಶಂಕರ್

ಮೀರಾ ಶಂಕರ್‌ ಅವರು ಮೂಲತಃ ಮೈಸೂರಿನವರು. ತಾಯಿ ಕನ್ನಡ ಸಾಹಿತ್ಯ ಲೋಕದಲ್ಲಿ ʻತ್ರಿವೇಣಿʼ ಲೇಖನಿ ನಾಮದಿಂದಲೇ ಪ್ರಸಿದ್ದರಾಗಿದ್ದ ಕಾದಂಬರಿಗಾರ್ತಿ ಅನಸೂಯ ಶಂಕರ್‌.‌ ತಂದೆ ಎಸ್.ಎನ್. ಶಂಕರ್.‌ ಮಹಾರಾಣಿ ಕಾಲೇಜಿನಿಂದ ಮನಃಶಾಸ್ತ್ರದಲ್ಲಿ ಪದವಿ ಪಡೆದು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆ ಒಂದು ಹವ್ಯಾಸವಾಗಿ ಒಲಿದಿತ್ತು. ಇವರು ಬರೆದ ಹಲವಾರು ಸಣ್ಣ ಕತೆಗಳು ಕನ್ನಡ ಮಾಸಪತ್ರಿಕೆಗಳಲ್ಲಿ ಹಾಗೂ ಅಮೇರಿಕಾದ ಪತ್ರಿಕೆಯಲ್ಲೂ ಪ್ರಕಟವಾಗಿವೆ. ತಾಯಿಯ ನೆನಪಿಗಾಗಿ ಅವರ ಕಾದಂಬರಿಗಳನ್ನು ʻತ್ರಿವೇಣಿ: ಮೂರು ಕಥಾಸಂಕಲನಗಳ ಸಮ್ಮಿಲನʼ ಶೀರ್ಷಿಕೆಯಲ್ಲಿ ಪುಸ್ತಕವನ್ನು ತಮ್ಮ ಶಂಕರ್‌ ಪ್ರತಿಷ್ಠಾನʼದ ಮೂಲಕ ಹೊರತರುತ್ತಿದ್ದಾರೆ. ಕೃತಿ: ತ್ರಿವೇಣಿ: ಮೂರು ಕಥಾಸಂಕಲನಗಳ ...

READ MORE

Related Books