ಅತಿ ಸಣ್ಣಕತೆಗಳು ನೀಡುವ ದೊಡ್ಡ ಅನುಭವ ವರ್ಣಿಸಲಸದಳ. ಹೀಗೆ ದೊಡ್ಡ ಅನುಭವ ನೀಡುವ ನೂರಾ ಅರವತ್ತು ಪುಟ್ಟ ಕಥೆಗಳ ಗುಚ್ಛ ಇದು. ಕೆಲವೇ ಪದಗಳಲ್ಲಿ ಓದುಗರನ್ನು ಪ್ರಭಾವಿಸುವ ಕತೆಗಳು ಸಮಯದ ಅಭಾವ ಎನ್ನುವವರಿಗೆ ಇಷ್ಟವಾಗಬಲ್ಲವು.
ಅಂತಹ ಒಂದು ಅತಿಸಣ್ಣ ಕತೆ ಹೀಗಿದೆ: ಮೇಲಿನ ಕೋಣೆಗೆ ಇರುವುದು ಹನ್ನೆರಡು ಮೆಟ್ಟಿಲುಗಳಲ್ಲ. ಹದಿಮೂರು ಮೆಟ್ಟಿಲುಗಳು ಅಂತ ಅದೆಷ್ಟು ಬಾರಿ ತಿದ್ದಿ ಹೇಳಿಕೊಟ್ಟರೂ ಅವನು ಹನ್ನೆರಡು ಅಂತಲೇ ಹೇಳುತ್ತಿದ್ದ. ಅವನ ಆಪ್ತಮಿತ್ರರಲ್ಲಿ ಒಬ್ಬರಾದ ಹಿಂದಿನ ಬೀದಿಯ ಡಿಸೋಜ ತೀರಿಕೊಂಡಾಗ ಎಚ್ಚರವಾಗಿಯೇ ತನ್ನ ವೀಲ್ ಛೇರಿನಲ್ಲಿ ಕುಳಿತು ಆಡುತ್ತಿದ್ದ. ಅಂದಿನಿಂದ ಮೇಲಿನ ಕೋಣೆಗೆ ಹನ್ನೊಂದು ಮೆಟ್ಟಿಲುಗಳು ಎನ್ನತೊಡಗಿದ...
ರಂಗಭೂಮಿ ಹಿನ್ನಲೆಯುಳ್ಳ ಬರಹಗಾರ್ತಿ ಆಶಾ ರಘು ಅವರು ಜನಿಸಿದ್ದು 1979 ಜೂನ್ 18ರಂದು. ಬೆಂಗಳೂರಿನವರೇ ಆದ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಉಪನ್ಯಾಸಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿರುವ ಇವರು ಪ್ರಸ್ತುತ ಸಂಪೂರ್ಣವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆವರ್ತ, ಬೊಗಸೆಯಲ್ಲಿ ಕಥೆಗಳು, ಅಪರೂಪದ ಪುರಾಣ ಕಥೆಗಳು, ಚೂಡಾಮಣಿ ಹಾಗೂ ಬಂಗಾರದ ಪಂಜರ ಇವರ ಪ್ರಮುಖ ಕೃತಿಗಳು. ಇವರ ಆವರ್ತ ಕೃತಿಗೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ...
READ MORE