ದ್ಯಾವನೂರು ಹಾಗೂ ಒಡಲಾಳ

Author : ದೇವನೂರ ಮಹಾದೇವ

Pages 112

₹ 96.00




Year of Publication: 2015
Published by: ಪುಸ್ತಕ ಪ್ರಕಾಶನ
Address: 91, 9ನೇ ಮುಖ್ಯ ರಸ್ತೆ ಸರಸ್ವತಿಪುರಂ, ಮೈಸೂರು - 570 009
Phone: 0821-2545 774

Synopsys

‘ದ್ಯಾವನೂರು ಹಾಗೂ ಒಡಲಾಳ’ ಕನ್ನಡದ ಬಹುಮುಖ್ಯ ಲೇಖಕ ದೇವನೂರು ಮಹಾದೇವರ ಕಥಾ ಸಂಕಲನ. ಖಂಡವಿದೆಕೋ ಮಾಂಸವಿದೆಕೋ ಎನ್ನುತ್ತ ತಮ್ಮ ಕಥೆಗಳನ್ನು ಕನ್ನಡಿಗರಿಗೆ ಕೊಟ್ಟವರು ದೇವನೂರ ಮಹಾದೇವ. ಅಲ್ಲಿಂದ ಕೆಲಕಾಲ ಕಳೆದ ಮೇಲೆ 'ಒಡಲಾಳ' ಎಂಬೊಂದು ಕಥೆ ಬರೆದರು. ಓದುಗರಿಗೆ ಗಂಗು ಹಿಡಿಸುವ ಕಥೆ. ಸಾಕವ್ವ ಅವಳ ಮಕ್ಕಳು ಮೊಮ್ಮಕ್ಕಳು ಕನ್ನಡ ಪ್ರಜ್ಞೆಯೊಳಗೆ ಬಂದು ಕುಳಿತರು.

ಸಾಕವ್ವ ಹೇಳುವ ಯಮದವರ ಕತೆಗಾಗಿ ಜಾನಪದ ಪಂಡಿತರು, ಪುಟಗೌರಿ ನವಿಲಿನ ಚಿತ್ರಕ್ಕಾಗಿ ಕಲೆಗಾರರು, ದುಷ್ಟಿಕಮೀಷನರಿಗಾಗಿ ಸಾಹಿತ್ಯ ವಿಮರ್ಶಕರು, ಕತ್ತಲ ಲೋಕದಲ್ಲಿ ಪಳಾರನೆ ಗಡಿಯಾರದ ಮಿಂಚು ಮಿಂಚಿಸುವ ಗುರುಸಿದ್ದನಿಗಾಗಿ ಬಂಡಾಯಗಾರರು ಹುಡುಕಾಟ ಮುಂದುವರೆಸಿದ್ದಾರೆ. ಒಡಲಾಳದ ಶಿವು ಈಗ ಈ ಕತೆಯನ್ನು ಓದುತ್ತಿರಬಹುದು. ಆ ಕತೆಯಲ್ಲಿ ತನ್ನ ಮಾದರಿಯನ್ನು ಕಂಡುಕೊಳ್ಳುತ್ತಿರಬಹುದು. ಒಡಲಾಳದಂತಹ ಕೃತಿಗಳು ಮಾತ್ರವೇ ಒಂದು ಸಂಸ್ಕೃತಿಯಲ್ಲಿ ಕ್ರಿಯಾವರ್ತಗಳನ್ನು ಹುಟ್ಟಿಹಾಕಬಲ್ಲವು ಎಂಬುದನ್ನು ತಮ್ಮ ಗಮನಕ್ಕೆ ತರುವುದಕ್ಕೆ ಈ ಮಾತು ಹೇಳಿದೆ ಎನ್ನುತ್ತಾರೆ ವಿಮರ್ಶಕ ಕೆ.ವಿ.ನಾರಾಯಣ. ಕೃತಿಯನ್ನು ಅರಿಯಲು ಲೋಕದ ಮಾನದಂಡಗಳನ್ನು ಹುಡುಕುವ ನಮಗೆ “ಅಯ್ಯಾ ಹಾಗಲ್ಲ ಈ ಕೃತಿಯ ಮೂಲಕ ಲೋಕವನ್ನು ಅಲಿಯಲು ಸಾದ್ಯವೇ ನೋಡು' ಎಂದು ಇಂಥ ಕೃತಿಗಳು ಕೇಳುತ್ತವೆ.

About the Author

ದೇವನೂರ ಮಹಾದೇವ
(10 June 1948)

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ದೇವನೂರು ಗ್ರಾಮದಲ್ಲಿ ಜನಿಸಿದ ಮಹಾದೇವ (ಶಾಲಾ ದಾಖಲಾತಿಗಳ ಪ್ರಕಾರ 1948ರ ಜೂನ್ 10) ಅವರ ತಂದೆ ನಂಜಯ್ಯ ಮತ್ತು ತಾಯಿ ನಂಜಮ್ಮ. ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿಯೇ ಬರವಣಿಗೆ ಆರಂಭಿಸಿದ ಮಹಾದೇವ ಅವರ ಮೊದಲಕತೆ “ಕತ್ತಲ ತಿರುವು” (1967) ಪ್ರಕಟವಾದದ್ದು ಕನ್ನಡಪ್ರಭ ದಿನಪತ್ರಿಕೆಯಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ  ಸ್ನಾತಕೋತ್ತರ ಪದವಿ (ಎಂ.ಎ 1973-74) ಪಡೆದ ಮಹಾದೇವ ಅವರು ವಿಶ್ವವಿದ್ಯಾಲಯದಲ್ಲಿ ಇದ್ದ ದಿನಗಳಲ್ಲಿಯೇ ಕಥಾಸಂಕಲನ ’ದ್ಯಾವನೂರು’ (1973) ಪ್ರಕಟಿಸಿದ್ದರು. ಒಡಲಾಳ (1979), ಕುಸುಮಬಾಲೆ (1984), ಸಮಗ್ರ (1992), ಎದೆಗೆ ಬಿದ್ದ ಅಕ್ಷರ (2012) ಕೃತಿಗಳನ್ನು ...

READ MORE

Related Books