ಅದೃಶ್ಯ ಲೋಕದ ಮಾಯೆ

Author : ಕುಮಾರ ಬೇಂದ್ರೆ

Pages 132

₹ 75.00




Year of Publication: 2007
Published by: ಮೇಘ ಪಬ್ಲಿಕೇಷನ್
Address: ನಂ.419, ಡೋರ್ ನಂ. 119, 4ನೇ ತಿರುವು, ರಾಜಗೋಪಾಲ್ ನಗರ, ಬೆಂಗಳೂರು- 560050

Synopsys

‘ಅದೃಶ್ಯ ಲೋಕದ ಮಾಯೆ’ ಲೇಖಕ ಕುಮಾರ ಬೇಂದ್ರೆಯವರ ಕಥಾಸಂಕಲನ. 'ಅದೃಶ್ಯ ಲೋಕದ ಮಾಯೆ'. ಈ ಕತೆ ಜರುಗುವುದು ಅಜ್ಜಿಯ ಅಸ್ತಿ ವಿಸರ್ಜನೆಗಾಗಿ ಶ್ರೀರಂಗಪಟ್ಟಣದ ಬಳಿಯಿರುವ ಸಂಗಮಕ್ಕೆ ಬಂದ ಕುಟುಂಬದ ಸುತ್ತ. ಇಲ್ಲಿ ಈ ಕುಟುಂಬದ ಮೇಲೆ ಸಾವು ತನ್ನ ಬಲೆಯನ್ನು ಬೀಸಿದ ಭಾಸವಾಗಿ ವಿಚಿತ್ರ ತಲ್ಲಣವೊಂದು ಹುಟ್ಟಿಕೊಳ್ಳುತ್ತದೆ. ಈ ಘಟನಾವಳಿಗಳ ಮೂಲಕ, ಕಣ್ಣು ಮುಚ್ಚಾಲೆಯಾಡುವ ಸಾವು ಮತ್ತು ಅದರ ಸುತ್ತ ಇರುವ ಗೂಢತೆ, ಯಾವಾಗಲಾದರೂ ಆಗಬಹುದಾದ ದುಃಖ ಇತ್ಯಾದಿಗಳು ಗಾಢವಾಗುತ್ತ ಹೋಗುತ್ತವೆ.

ಈ ಹೊಯ್ದಾಟ ತೊಳಲಾಟಗಳಲ್ಲಿ ಯಾವ ಕ್ಷಣಕ್ಕಾದರೂ ಸಾವು ಕುಟುಂಬದ ಮೇಲೆ ಎರಗಬಹುದೆನ್ನುವ ಭಯದಲ್ಲಿ ಊರಿಗೆ ಮರಳಿದ ಕುಟುಂಬಕ್ಕೆ, ಮನೆಯ ಅತ್ತಿಗೆಯನ್ನು ಸಾವು ಸೆಳೆದೊಯ್ದಿರುವುದು ಗೊತ್ತಾಗುತ್ತದೆ. ಇಂಥ ಸಶಕ್ತ ಹಂದರದ 'ಅದೃಶ್ಯ ಲೋಕದ ಮಾಯೆ' ತನ್ನ ನಿರೂಪಣೆಯುದ್ದಕ್ಕೂ ಎಲ್ಲೂ ಸಡಿಲಾಗದೇ ಸರಳವಾಗದೇ। ಉಳಿಯುತ್ತದೆ. ಇಲ್ಲಿ ಸೃಷ್ಟಿಯಾದ ಒಟ್ಟೂ ಆವರಣವು ಮನಸ್ಸನ್ನು ಕಾಡುವಷ್ಟು ಪ್ರಬಲವಾಗಿದೆಯೆಂಬುದರ ಬಗ್ಗೆ ಸಂಶಯವಿಲ್ಲ.

ಉಳಿದ ಕತೆಗಳಾದ 'ಬಿರುಕು' 'ನಿಗೂಢ ಕಾಡಿನೊಳಗೆ 'ಕೆಂಡದ ಮಳೆ' 'ಗುಲ್‌ಮೊಹರ್‌ನ ಕಂಪು' ಇತ್ಯಾದಿಗಳನ್ನು ನೋಡಿದಾಗ ಕುಮಾರ ಬೇಂದ್ರೆ ಸಾಗಬೇಕಾದ ಮತ್ತು ಸಾಗಬಹುದಾದ ದಾರಿಯ ಬಗ್ಗೆ ತುಸು ಸ್ಪಷ್ಟತೆ ಮೂಡುತ್ತದೆ. 'ಅದೃಶ್ಯ ಲೋಕದ ಮಾಯೆ', 'ಚಹರೆ' ಯಂಥ ಬರಹಗಳಲ್ಲಿ ಕುಮಾರ ಬೇಂದ್ರೆಯವರ ಕಥಾಶಕ್ತಿಯ ಪರಿಚಯವಾಗುತ್ತದೆ. 

About the Author

ಕುಮಾರ ಬೇಂದ್ರೆ
(24 October 1977)

ಕುಮಾರ ಬೇಂದ್ರೆ ಜನನ 24-10-1977, ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಬೆಳ್ಳಟ್ಟಿಯಲ್ಲಿ ಪಡೆದರು. ಹುಬ್ಬಳ್ಳಿಯ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಿಂದ ಚಿತ್ರಕಲಾ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದಿದ್ದಾರೆ. ಇವರು ಹುಬ್ಬಳ್ಳಿ ನಿವಾಸಿಯಾಗಿದ್ದು 'ಉದಯವಾಣಿ' ಪತ್ರಿಕೆಯಲ್ಲಿ ಉಪಸಂಪಾದಕ ವೃತ್ತಿ, ಪತ್ನಿ ಅನುಪಮ, ಪುತ್ರರು ಚೇತನ, ಚಂದನ, ಎರಡು ದಶಕದಿಂದ ಸಾಹಿತ್ಯ ಕೃಷಿಯಲ್ಲಿ ಸಕ್ರಿಯರಾಗಿದ್ದಾರೆ. ಕುಮಾರ ಬೇಂದ್ರೆ ಅವರ ಪ್ರಕಟಿತ ಕೃತಿಗಳು ಮಾದಪ್ಪನ ಸಾವು (೨೦೦೫) ಅದೃಶ್ಯ ಲೋಕದ ಮಾಯೆ (೨೦೦೭) ನಿರ್ವಾಣ (೨೦೧೧) ಗಾಂಧಿ ವೃತ್ತದ ದಂಗೆ (೨೦೧೨) ...

READ MORE

Related Books