ದಾದಾಪೀರ್ ಜೈಮನ್ ಅವರ ಸಣ್ಣ ಕಥೆಗಳ ಸಂಕಲನ ‘ನೀಲಕುರುಂಜಿ’. ಸಾಹಿತಿ ಕೇಶವ ಮಳಗಿ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ. ವಿವಿಧ ಸಮುದಾಯಗಳಿಗೆ ಸೇರಿದ ಹೊಸ ತಲೆಮಾರಿನ ತಾರುಣ್ಯವು ಸೃಷ್ಟಿಸುತ್ತಿರುವ ಇಂದಿನ ಕನ್ನಡ ಸಾಹಿತ್ಯವು ನವಿರು ಬಿಸಿಲಿನ ಬೆಳಗಿನಂತೆ ಗೋಚರಿಸುತ್ತಿದೆ. ಇದೀಗ, ಮುಕ್ತ ಛಂದಸ್ಸಿನ ಕಾಲ ಒಣ ಬೌದ್ಧಿಕತೆ ಹುಟ್ಟುಹಾಕುವ ಸಿದ್ಧಾಂತಗಳ ಭಾರ, ಕೃತಕ ತಾರ್ಕಿಕ ಅಂತ್ಯಗಳನ್ನು ಬಯಸುವ ಸಾಹಿತ್ಯದಿಂದ ನಿಧಾನಕ್ಕೆ ಕಳಚಿಕೊಳ್ಳುತ್ತಿರುವ ಕಾಲವೂ ಇದಾಗಿದೆ. ಹಾಗೆಂದು ಬರಹಗಾರರಲ್ಲಿ ಋಆಜಕೀಯ ನಂಬಿಕೆ, ಬದ್ಧತೆ, ಬದಲಾವಣೆಯ ಕನಸು, ಕಾತರ, ಭವಿಷ್ಯದ ಕುರಿತು ಅಘಾದ ಭರವಸೆ ಕಾಣ್ಷಿಗಳೇನೂ ಬದುಕಿನಿಂದ ದೂರ ಸರಿದಿಲ್ಲ. ಈ ಹೊಸ ಕಥನ ಮಾರ್ಗದ ಭರವಸೆಯ ಲೇಖಕರು ದಾದಾಪೀರ್ ಜೈಮನ್ ಅವರು ಎಂಬುದಾಗಿ ಕೇಶನ ಮಳಗಿಯವರು ಹೇಳಿದ್ದಾರೆ.
ಕವಿ, ಕತೆಗಾರ ಸೇರಿದಂತೆ ಮುಂತಾದ ಅನೇಕ ಸಾಹಿತ್ಯ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು ದಾದಾಪೀರ್ ಜೈಮನ್. ಅವರ ಹಲವಾರು ಕವಿತೆಗಳು ಪ್ರಜಾವಾಣಿ ಮುಂತಾದ ಕನ್ನಡ ದಿನ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಅವರ ‘ಜಾಲಗಾರ’ ಕತೆಗೆ ಸಂಗಾತ ಕತಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಹಾಗೂ ಮುಂತಾದ ರಾಜ್ಯ ಮಟ್ಟದ ಕತಾ ಸ್ಪರ್ಧೆಯಲ್ಲಿ ಬಹುಮಾನಗಳು ಸಂದಿವೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಅವರು ಸಾಹಿತ್ಯ ಓದು-ಬರೆಹದಲ್ಲಿ ಸಕ್ರಿಯರು. ...
READ MOREಕೇಂದ್ರ ಸಾಹಿತ್ಯ ಅಕಾಡೆಮಿ, ಯುವಪುರಸ್ಕಾರ (2021)