ಮನಸು ಮಾತಾಡಿದಾಗ

Author : ಶಿವಕುಮಾರ ನಾಗವಾರ

Pages 164

₹ 90.00




Year of Publication: 2008
Published by: ಕಿಕ್ಕೇರಿ ಪಬ್ಲಿಕೇಷನ್ಸ್ 
Address: # 618, 9ನೇ ಡಿ ಮುಖ್ಯರಸ್ತೆ, ಆರ್.ಪಿ.ಸಿ ಲೇಔಟ್‌, ಹಂಪಿನಗರ, ಬೆಂಗಳೂರು-560040.

Synopsys

'ಮನಸು ಮಾತಾಡಿದಾಗ' ಲೇಖಕ ಶಿವಕುಮಾರ ನಾಗವಾರ ಬೀದರ ಅವರು ಬರೆದ ಕಥೆಗಳ ಸಂಕಲನ. ಕೃತಿಯ ಕುರಿತು ಸಾಹಿತಿ ಈರಪ್ಪ ಎಂ. ಕಂಬಳಿ ಅವರು ಬೆನ್ನುಡಿ ಬರೆದು 'ಹಣದಿ' ಮತ್ತು 'ಏಳೂರ ಸರಪಂಚ' ಕಥಾ ಸಂಕಲನಗಳ ಮೂಲಕ ತೀವ್ರ ಸಂಚಲನ ಉಂಟು ಮಾಡಿದ್ದ ಗೆಳೆಯ ಪ್ರೊ. ಶಿವಕುಮಾರ ನಾಗವಾರ, ಈಗ 'ಮನಸು ಮಾತಾಡಿದಾಗ' ಸಂಕಲ ಕೈಗಿತ್ತಿದ್ದಾರೆ. ಸರಳ ಸಜ್ಜನಿಕೆಯ ವ್ಯಕ್ತಿತ್ವ ಮಾತ್ರವಲ್ಲ, ಆರೋಗ್ಯಕರ ಮನಸ್ಸುಳ್ಳ ಕತೆಗಾರನಾಗಿರುವ ಕಾರಣಕ್ಕೇನೂ ಇಲ್ಲಿನ ಕತೆಗಳಲ್ಲಿ ಬರುವ ಪ್ರಸಂಗಗಳು - ಪಾತ್ರಗಳು ವಸ್ತುನಿಷ್ಠವಾಗಿ ದಾಖಲಾಗುತ್ತ ಒಂದು ಹೆಗ್ಗಳಿಕೆಯಾಗಿದೆ. ವಿಶಾಲ ಕರ್ನಾಟಕದಲ್ಲಿ - ಕಲ್ಯಾಣ ನಾಡೆಂದು ಬೀಗುವ, ಈಶಾನ್ಯ ಗಡಿ ಜಿಲ್ಲೆ ಬೀದರ ನೆಲದ ವಿವಿಧ ಜನಾಂಗ - ಭಾಷೆ - ಸಂಸ್ಕೃತಿಗಳು ವಿಶಿಷ್ಠ ಸಂಪನ್ಮೂಲ ಸಂಗತಿಗಳಾಗಿ ಗಮನ ಸೆಳೆಯಬಲ್ಲವು. ಇವರ ಒಟ್ಟಾರೆ ಕತೆಗಳು, ಅಧ್ಯಯನ ಯೋಗ್ಯವಾಗಿದ್ದು ಆ ನೆಲದ ಬಗೆಗೆ ಸಂಶೋಧನೆಗೆ ತೊಡಗುವವರು ಕೂಡ ಅಭ್ಯಸಿಸುವುದು ಅನುಭವಿಸುವುದು ಅನಿರ್ವಹ ಎನ್ನುವಷ್ಟರ ಮಟ್ಟಿಗೆ ಅಲ್ಲಿನ ಜನಜೀವನದ ದಟ್ಟ ಆಕರಗಳಾಗಿವೆ. ಹೋದ ವರ್ಷವಷ್ಟೇ ಸುವರ್ಣ ಕರ್ನಾಟಕ ಆಚರಿಸಿಕೊಂಡ ನಾಡು ಕರ್ನಾಟಕ ಎಂಬ ಪ್ರಾದೇಶಿಕ ಗಡಿರೇಖೆಯನ್ನು ಅಳಿಸಿ ಹಾಕಿದಂತೆ ಶಿವಕುಮಾರ ನಾಗವಾರರ ಕತೆಗಳನ್ನು ನಾಡಿನ ವಿಮರ್ಶಕ ವಲಯ ನಿರ್ಭಿಡೆಯಿಂದ ಸ್ವೀಕರಿಸುವಂತಾಗಬೇಕು. ಆ ತಾಕತ್ತು ಇವರ ಕತೆಗಳಿಗಿದೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಶಿವಕುಮಾರ ನಾಗವಾರ

ಲೇಖಕ ಶಿವಕುಮಾರ ನಾಗವಾರ ಮೂಲತಃ ಬೀದರ ತಾಲೂಕಿನ ಮರಕುಂದಾ ಗ್ರಾಮದ ಮಡಿವಾಳಯ್ಯ ಮತ್ತು ಕಾಶಮ್ಮ ದಂಪತಿಗಳಿಗೆ ದಿನಾಂಕ 12-8-1956ರಲ್ಲಿ ಜನಿಸಿದ್ದಾರೆ. ಎಂ.ಎ. ಡಿ.ಫಾರ್ಮ ಸ್ನಾತಕೋತ್ತರ ಪದವಿ ಪಡೆದು ಬೀದರದ ಕಾಶಿನಾಥರಾವ ಬೆಲೂರೆ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.  ಇವರು 'ಹಣದಿ', 'ಏಳೂರ ಸರಪಂಚ', 'ಮನಸ್ಸು ಮಾತಾಡಿದಾಗ' (ಕಥಾಸಂಕಲನಗಳು) 'ಚೆನ್ನಬಸವಣ್ಣನವರು' (ಚರಿತ್ರೆ) ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ ಹಲವು ಕತೆಗಳು ರಾಜ್ಯ ಮಟ್ಟದ ಕಥಾಸ್ಪರ್ಧೆಯಲ್ಲಿ ಬಹುಮಾನಗಳನ್ನು ಪಡೆದು ಹೆಸರುವಾಸಿಯಾಗಿವೆ.  ಅವುಗಳೆಂದರೆ, 1987 ರಲ್ಲಿ ತರಂಗ ಕಥಾ ಸ್ಪರ್ಧೆಯಲ್ಲಿ ಇವರ 'ಬನ್ಯಾ' ಕತೆ, '1994ರಲ್ಲಿ ...

READ MORE

Related Books