ಮೆರವಣಿಗೆ (ಸಣ್ಣಕತೆ)

Author : ಅಂತಃಕರಣ

Pages 88

₹ 70.00
Year of Publication: 2014
Published by: ಬೆನಕ ಬುಕ್ಸ್ ಬ್ಯಾಂಕ್
Address: ಯಳಗಲ್ಲು, ಕೋಡೂರು- ಅಂಚೆ, ಹೊಸನಗರ ತಾಲೂಕು, ಶಿವಮೊಗ್ಗ ಜಿಲ್ಲೆ-577418
Phone: 8861065161

Synopsys

'ಮೆರವಣಿಗೆ' ವಿದ್ಯಾಸಾಗರ ಬಾಲ ಪುರಸ್ಕಾರ ವಿಜೇತ ಕಿಶೋರ ಸಾಹಿತಿ ಅಂತಃಕರಣನ ಕಲಾ ಸಂಕಲನ. ಈ ಕೃತಿಯಲ್ಲಿ ಅಂತಃಕರಣ ಬರೆದಿರುವ 33 ಕತೆಗಳು ಸಂಕಲನಗೊಂಡಿವೆ. ಬಾಲ್ಯದಿಂದಲೇ ಸಾಹಿತ್ಯದತ್ತ ಮುಖಮಾಡಿರುವ ಅಂತಃಕರಣ ಕತೆ ಬರೆಯುವುದರಲ್ಲಿ ಮಾಗಿರುವುದಕ್ಕೆ ಈ ಮೆರವಣಿಗೆ ಸಾಕ್ಷಿನುಡಿಯುತ್ತದೆ. ಅತ್ಯಂತ ಸರಳ ಭಾಷೆಯಲ್ಲಿ ತನ್ನ ಅನುಭವಾತ್ಮಕ ಕಥನಗಳಿಗೆ ಅಂತಃಕರಣ ಜೀವನೀಡಿದ್ದಾರೆ. 

About the Author

ಅಂತಃಕರಣ

ಅಂತಃಕರಣ  ತನ್ನ 4ನೇ ಕ್ಲಾಸಿನಿಂದ 'ಎಚ್ಚರಿಕೆ', 'ಜೀವನ್ಮುಖಿ' ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ  ಪತ್ರಿಕೆ 'ವಿಶ್ವಕನ್ನಡಿಗ'ದಲ್ಲಿ  ವಾರಕ್ಕೆ 2 ಅಂಕಣ ಬರೆಯುತ್ತಿರುವ ಅಂಕಣಕಾರ. ಇದುವರೆಗೆ ಕ್ರೀಡಾಂಕಣಗಳೂ ಸೇರಿದಂತೆ 500 ಅಂಕಣಪ್ರಬಂಧ, 95 ಕವಿತೆ, 78 ಕತೆ, 4 ಕಾದಂಬರಿ ಮತ್ತು 1 ನಾಟಕಗಳನ್ನು ರಚಿಸಿರುವ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆಯುವ ಲೇಖಕ. 9ನೇ ತರಗತಿಯೊಳಗೆ 4 ಸಮಗ್ರ ಬರಹಗಳ ಕೃತಿಗಳು ಸೇರಿದಂತೆ ಒಟ್ಟು 30 ಕೃತಿಗಳನ್ನು ರಚಿಸಿರುವ ಪುಟ್ಟ ಸಾಹಿತಿ. ಪ್ರಸ್ತುತ ಶಿವಮೊಗ್ಗದ ಲೊಯಲಾ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ. ಕನ್ನಡ ಪ್ರವೇಶ, ಕಾವ ಸಾಹಿತ್ಯ ಪರೀಕ್ಷೆಗಳಲ್ಲಿ ಮತ್ತು ...

READ MORE

Related Books