ಮುಂಬಯಿ, ನವದೆಹಲಿಗಳಂಥ ಪಟ್ಟಣಗಳಲ್ಲಿ ಜೀವಿಸುತ್ತಿದ್ದರೂ, ಹಳ್ಳಿಯ ಬದುಕಿನ ಕುರಿತು ಆಕರ್ಷಣೆ ತಳೆದಿದ್ದ ಕಾಡು, ಗುಡ್ಡ, ಜಲಪಾತ, ತೆಂಗು-ಕಂಗಿನ ತೋಟ, ಗದ್ದೆ , ಬೇಸಾಯಗಳ ಕುರಿತು ವಿಶೇಷ ಒಲವನ್ನು ಹೊಂದಿದ್ದ ವಿದ್ಯಾವಂತ ತರುಣ ಶಂಕರನೆಂಬಾತ, ಬಂಗಾಡಿ ಎಂಬ ಹಳ್ಳಿಯಲ್ಲಿ ನೆಲೆಸಿ, ಭಾರೀ ಕಷ್ಟಪಟ್ಟು, ಕಾಡು ಭೂಮಿಯನ್ನು ಹಸನುಮಾಡಿ, ತಾನು ಗಳಿಸಿದ್ದ ವೈಜ್ಞಾನಿಕ ಜ್ಞಾನವನ್ನು ಪ್ರಯೋಗಿಸಿ ಕೃಷಿಯಲ್ಲಿ ತೊಡಗಿ, ಪ್ರಕೃತಿಯ ವಿಕೋಪದ ನಡುವೆಯೂ ಭೂಮಿಯನ್ನು ಹಸನಾಗಿಸಿದ ಸಾಹಸಮಯ ಕಥಾನಕವನ್ನೊಳಗೊಂಡ ಕಾದಂಬರಿ ’ಚಿಗುರಿದ ಕನಸು’
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MORE