ಲೇಖಕ, ಪತ್ರಕರ್ತ ಗೋಪಾಲಕೃಷ್ಣ ಕುಂಟಿನಿ ಅವರ ಸಣ್ಣ ಕಥೆಗಳ ಸಂಕಲನ ‘ವೃತ್ತಾಂತ ಶ್ರವಣವು’.
ಹಿರಿಯ ಪತ್ರಕರ್ತರಾದ ಗೋಪಾಲಕೃಷ್ಣ ಕುಂಟಿನಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿಯವರು. ಕತೆಗಾರರಾಗಿರುವ ಗೋಪಾಲಕೃಷ್ಣ ಅವರು ‘ಅಪ್ಪನ ನೀಲಿಕಣ್ಣು’, ‘ಪೂರ್ಣ ತೆರೆಯದ ಪುಟಗಳು’ ಎಂಬ ಕತೆಗಳ ಸಂಕಲನ ಪ್ರಕಟಿಸಿದ್ದಾರೆ. ’ಆಮೇಲೆ ಇವನು’ ಮತ್ತು ’ವೃತ್ತಾಂತ ಶ್ರವಣವು’ ಅವರ ಪ್ರಕಟಿತ ಕೃತಿಗಳು. ಪತ್ರಕರ್ತ ಗೆಳೆಯ ಜೋಗಿ (ಗಿರೀಶರಾವ್ ಹತ್ವಾರ) ಅವರೊಂದಿಗೆ ಸೇರಿ ಆರಂಭಿಸಿದ ’ಕಥಾಕೂಟ’ವು ಕತೆಗಳ ರಚನೆ-ಚರ್ಚೆಗೆ ಅನುವು ಮಾಡಿಕೊಟ್ಟಿದೆ. ...
READ MORE