ರೆಕ್ಕೆಗಳು

Author : ದಾಕ್ಷಾಯಣಿ ಯಡಹಳ್ಳಿ

Pages 128

₹ 110.00
Year of Publication: 2021
Published by: ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ
Address: ಮುಖ್ಯರಸ್ತೆ, ಸರಸ್ವತಿ ಗೋದಾಮು, ಸೂಪರ್ ಮಾರ್ಕೆಟ್, ಕಲಬುರಗಿ-585101

Synopsys

ಲೇಖಕಿ ಡಾ. ದಾಕ್ಷಾಯಣಿ ಯಡಹಳ್ಳಿ ಅವರ ಕಥಾ ಸಂಕಲನ-ರೆಕ್ಕೆಗಳು. ಪಯಣವೆತ್ತ, ಗಣಿಕೆ, ಖೋಟಾ ಸಿಕ್ಕ, ಗೋಡೆಗಳು, ನಿಂತ ನೀರು,ನಿರ್ಣಯ,ರೆಕ್ಕೆಗಳು, ಯಾರಿಗೆ ಯಾರುಂಟು ಸೇರಿದಂತೆ ಒಟ್ಟು 11 ಕಥೆಗಳಿವೆ. ಮುಂಬೈ ಬದುಕಿನ ಅವಸರದ ಒತ್ತಡ, ಜೀವನ ವಿಧಾನವೇ ಸಮಸ್ಯೆ -ತಾಪತ್ರಯವಾಗುವುದನ್ನು ಇಲ್ಲಿಯ ಕಥೆಗಳು ವಸ್ತುವಾಗಿಸಿಕೊಂಡಿವೆ. ಮಹಿಳಾಪರ ಕಾಳಜಿ ಕಳಕಳಿಯು ಸಹ ಬಹುತೇಕ ಕಥೆಗಳ ಕೇಂದ್ರವಾಗಿದೆ. ಮಹಿಳಾ ಶೋಷಣೆಯ ವಿರಾಟ ದರ್ಶನ ನೀಡುತ್ತವೆ. ಉತ್ತರ ಕರ್ನಾಟಕ ಭಾಷೆಯನ್ನು ಸಮರ್ಥವಾಗಿ ದುಡಿಸಿಕೊಂಡಿದ್ದಾರೆ

About the Author

ದಾಕ್ಷಾಯಣಿ ಯಡಹಳ್ಳಿ

ಲೇಖಕಿ ಡಾ.ದಾಕ್ಷಾಯಣಿ ಯಡಹಳ್ಳಿ ಅವರು ಸದ್ಯ ಮುಂಬೈ ನಿವಾಸಿ. ಹೊರನಾಡ ಕನ್ನಡಿಗರಾಗಿ ಕನ್ನಡತನವನ್ನು ಉಳಿಸಿಕೊಂಡು ಕನ್ನಡ ಸೇವೆಯಲ್ಲಿ ನಿರತರಾಗಿದ್ದಾರೆ.  ಕನ್ನಡ ಹಾಗೂ ಇಂಗ್ಲಿಷ್ ನಲ್ಲಿ ಎಂ.ಎ. ಪದವೀಧರರು. ಶಾಲಾ ಮುಖ್ಯೋಪಾಧ್ಯಾಯರಾಗಿ ನಿವೃತ್ತರು. ಕಥೆಗಳು, ಏಕಾಂತ ನಾಟಕಗಳನ್ನು ರಚಿಸಿದ್ದಾರೆ. ಇವರ ಸಾಹಿತ್ಯ ಸೇವೆಗೆ ಹಲವು ಪ್ರಶಸ್ತಿಗಳು ಲಭಿಸಿವೆ. ಕೃತಿಗಳು: ರೆಕ್ಕೆಗಳು (ಕಥಾ ಸಂಕಲನ) ...

READ MORE

Related Books