ಕಟ್ಟಿಕೊಂಡ ಬುಟ್ಟಿ

Author : ಗೀತಾ ಬಿ.ಯು

Pages 152

₹ 90.00




Year of Publication: 2015
Published by: ಹೇಮಂತ ಸಾಹಿತ್ಯ
Address: ನಂ.53/1, ಕಾಟನ್ ಪೇಟೆ ಮುಖ್ಯ ರಸ್ತೆ, ಬೆಂಗಳೂರು- 560053
Phone: 08026702010

Synopsys

‘ಕಟ್ಟಿಕೊಂಡ ಬುಟ್ಟಿ’ ಲೇಖಕಿ ಗೀತಾ ಬಿ.ಯು ಅವರ ಕಥಾ ಸಂಕಲನ. ಈ ಕೃತಿಯಲ್ಲಿ ಮುಗ್ಧರು, ಕಟ್ಟಿಕೊಂಡ ಬುತ್ತಿ, ಹೀಗೊಂದು ಪ್ರೇಮ ಕಥೆ, ರೋಬೋ ನನ್ನ ಮಗನ ತಮ್ಮ, ಸಂಬಂಧಗಳು ಪ್ರೀತಿ ದುಡ್ಡು ಇತ್ಯಾದಿ, ಇನ್ನೊಂದು ಮುಖ, ಕಥೆಯಾದಳು ಲೇಖಕಿ, ನಾನು ಇಲ್ಲವೇ, ಚೆಂದವಿರಲಿ ಬದುಕು, ಮೂರಡಿ ಕಾಂಪೌಂಡು, ಪುಟ್ಟ ಹಕ್ಕಿಯ ಗೂಡು, ಪುಟ್ಟ ಹಕ್ಕಿಯ ಮರಿ, ಆಯ್ಕೆಗಳೇ ಇಲ್ಲ, ಮೇಕ್ ಅಪ್ ಕಳಚಿದಾಗ, ನೀ ಯಾರಿಗಾದೆಯೋ ಮತ್ತು ಸೂತಕ ಕಳೆಯಿತು ಎಂಬ 16 ಕಥೆಗಳಿವೆ.

About the Author

ಗೀತಾ ಬಿ.ಯು

ತಮ್ಮ ಕತೆ-ಕಾದಂಬರಿಗಳ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ಗೀತಾ ಬಿ.ಯು. ಇದುವರೆಗೆ 12 ಕಾದಂಬರಿಗಳನ್ನು ಬರೆದು ಪ್ರಕಟಿಸಿದ್ದಾರೆ. ಬೆಂಗಳೂರಿನವರಾಗಿರುವ ಗೀತಾ  ಅವರ ಕತೆ-ಕಾದಂಬರಿಗಳು ಕನ್ನಡದ ಮಾಸ ಹಾಗೂ ವಾರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ’ಅವರನ್ನು ಬಿಟ್ಟು ಇವರನ್ನು ಬಿಟ್ಟು ಇವರು ಯಾರು’  ಹಾಗೂ ’ಮಿಥ್ಯ’ ಕಾದಂಬರಿಗಳು ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಸೋಲು ಗೆಲುವಿನ ಹಾದಿಯಲ್ಲಿ, ಹೊಂಗೆಯ ನೆರಳು, ಕೈ ಹಿಡಿದು ನಡೆಸನ್ನೆನ್ನನು, ಆರದಿರಲಿ ಬೆಳಕು, ವಾರಸುದಾರ, ಅದೇ ಏಕಾಂತ, ಜೊತೆ-ಜೊತೆಯಲಿ ಮುಂತಾದವು ಇವರ ಇನ್ನಿತರ ಕಥಾ ಸಂಕಲನ ಹಾಗೂ ಕಾದಂಬರಿಗಳು. ಆಂಗ್ಲ ಮಾಧ್ಯಮದಲ್ಲಿ ಓದಿರುವ ಗೀತಾ ಅವರು ...

READ MORE

Related Books