ಆಯಿತಾರ ಅಮಾಸೆ

Author : ಮಹಾಂತಪ್ಪ ನಂದೂರ

Pages 100

₹ 75.00




Published by: ಬಸವ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರಿಗಳು
Address: ಮುಖ್ಯ ಬೀದಿ, ಕಲಬುರಗಿ-585101
Phone: 9449825431

Synopsys

‘ಆಯಿತಾರ ಅಮಾಸೆ’ ಕೃತಿಯು ಮಹಾಂತಪ್ಪ ನಂದೂರ ಅವರ ಕತಾಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಅಮವಾಸ್ಯೆ ಕತ್ತಲೆಯಂತೆ ಹೆದರಿಸುವ ಮೂಢನಂಬಿಕೆಗಳನ್ನು ಕರಗಿಸಿ ಹುಣ್ಣಿಮೆಯ ಬೆಳಕನ್ನು ಹಳ್ಳಿಗರಲ್ಲಿ ಮೂಡಿಸಬೇಕೆಂಬ ಉದ್ದೇಶದಿಂದ ಮಹಾಂತಪ್ಪನವರು ಈ ಕಥೆ ಕಟ್ಟಿದ್ದಾರೆ. ಅನಾರೋಗ್ಯ ತಾಯಿಯ ಮಮತೆ, ಮುಗ್ಧ ಮಗು ಮತ್ತು ಪತ್ನಿಯ ಪ್ರೀತಿಯ ಬಂಧನವನ್ನು ಬಿಡಿಸಿಕೊಳ್ಳಲಾರದೆ ಭಾರವಾದ ಮನಸ್ಸಿನಿಂದ ರೈಲೇರಿ ಬೆಂಗಳೂರಿಗೆ ಪ್ರಯಾಣ ಬೆಳೆಸುವ ಸಿದ್ದಪ್ಪನಿಗೆ, ಸಹಪ್ರಯಾಣಿಗರಾಗಿ ಸಿಗುವ ವಾರ ಪತ್ರಿಕೆಯ ಸಂಪಾದಕ ಪ್ರಸನ್ನಕುಮಾರ್, ಸಿದ್ದಪ್ಪನ ಕವನ ಸಂಕಲನಕ್ಕೆ ಸಿಕ್ಕ ಪ್ರಶಸ್ತಿಯ ಸುದ್ದಿ ತಿಳಿಸಿ ಮನಸ್ಸಿನ ಭಾರವನ್ನು ಹಗುರಗೊಳಿಸುವುದು `ಪಯಣ‘ ಕಥೆಯ ಸಾರ. ಉದಯೋನ್ಮುಖ ಸಾಹಿತಿಯಾದ ಸಿದ್ದಪ್ಪನ ರೈಲು ಪ್ರಯಾಣದ ಅನುಭವವನ್ನು ಪರಿಚಯಿಸುವ ಆಶಯದ ಈ ಕಥೆ ಓದುಗನಿಗೆ ವಿಶೇಷವೆನಿಸದು. ಹೊಲೆಯ ಧರುಮನು ಗಳಿಸಿದ ವಿದ್ಯೆ, ಬುದ್ದಿ, ನೌಕರಿಯು ಅಸ್ಪೃಶ್ಯತೆಯ ಪರಿಸರದಿಂದ ಪಾರಾಗಲು ಹೇಗೆ ಪೂರಕವಾಯಿತೆಂಬುದನ್ನು ತಿಳಿಸುವ ಕಥೆ `ಕುಸ್ತಿ‘. ಧ್ವನಿ ಪೂರ್ಣವಾದ ಕುಸ್ತಿ ಆಟದಲ್ಲಿ ದೇಹ ಬಲಕ್ಕಿಂತ ವಿದ್ಯೆಯಿಂದ ಗಳಿಸಿದ ಸ್ಥಾನಮಾನಕ್ಕೆ ಜಯ ಲಭಿಸುತ್ತದೆ. ತಳ ವರ್ಗದವರು ವಿದ್ಯೆಬುದ್ದಿಗಳಿಂದ ಅತ್ಯುನ್ನತರಾದಾಗ ಮಾತ್ರ ಮೇಲ್ವರ್ಗದವರ ಮನದಲ್ಲಿ ಮಡುಗಟ್ಟಿರುವ ಅಸ್ಪೃಶ್ಯತಾ ಭಾವನೆಯನ್ನು ದೂರಮಾಡಲು ಸಾಧ್ಯವೆಂಬ ಉಪದೇಶವೇ `ಕುಸ್ತಿ‘ ಕಥೆಯ ಆಶಯವಾಗಿದೆ.

 

About the Author

ಮಹಾಂತಪ್ಪ ನಂದೂರ

ಕವಿ ಮಹಾಂತಪ್ಪ ನಂದೂರ ಅವರು ಕಲಬುರಗಿ ತಾಲೂಕಿನ ’ಪಟ್ಟಣ ’ದಲ್ಲಿ(1965) ಜನಿಸಿದರು. ಗ್ರಾಮೀಣ ಹಿನ್ನೆಲೆಯ ಇವರಿಗೆ ಆಧುನಿಕ ಜಗತ್ತು ಸೃಷ್ಟಿಸುವ ತಲ್ಲಣಗಳು ಬಹುವಾಗಿ ಕಾಡುವ ವಿಷಯ. ‘ಉದಕದೊಳಗಣ ಬೆಂಕಿ, ದೂರದ ಪದ, ಜೀವ ಕೊಳಲು’ ಅವರ ಕವನ ಸಂಕಲನಗಳು. ‘ಕಲ್ಯಾಣವೆಂಬ ಪ್ರಣತಿ’ - ಸುನೀತ ಸಂಗ್ರಹ, ಆಯಿತಾರ ಅಮಾಸಿ - ಕಥಾ ಸಂಕಲನ, ಆನಂದ ನಿನಾದ - ವಿಮರ್ಶಾ ಲೇಖನ ಸಂಗ್ರಹ ಅವರ ಮತ್ತಿತರ ಕೃತಿಗಳು. ‘ಕಲ್ಯಾಣವೆಂಬ ಪ್ರಣತಿ’ ಸುನೀತ ಸಂಗ್ರಹ ಕೃತಿಗೆ ಡಾ. ಡಿ. ಎಸ್. ಕರ್ಕಿ ಕಾವ್ಯ ಪುರಸ್ಕಾರ ಹಾಗೂ ಅಮ್ಮ ಪ್ರಶಸ್ತಿ, ಅವರ ‘ಅರಿವೆ ...

READ MORE

Related Books