ಆವನಾವನು ಕಾಯ್ವ

Author : ಸರಿತಾ ನವಲಿ

Pages 116

₹ 100.00




Year of Publication: 2019
Published by: ಇಂದಿರೇಶ ಪ್ರಕಾಶನ
Address: ಗಂಗಾವತಿ, ಕೊಪ್ಪಳ ಜಿಲ್ಲಿ - 583 227
Phone: 99866 21880

Synopsys

ಮಾನವ ಸಂಬಂಧಗಳು ಸೂಕ್ಷತೆಯನ್ನು ಕಳೆದುಕೊಂಡು ಯಾಂತ್ರಿಕವಾಗುತ್ತಿರುವ ಮತ್ತು ಸ್ವಾರ್ಥಪರತೆಯೇ ಹೆಚ್ಚಾಗುತ್ತಿರುವ ಬಗ್ಗೆ ಈ ಕೃತಿಯಲ್ಲಿ ಕಥೆಗಳ ಮೂಲಕ ಲೇಕಕರು ಮಾರ್ಮಿಕವಾಗಿ ತಿಳಿಸಿದ್ದಾರೆ.. ವಿಭಿನ್ನ ಕತಾ ಹಂದರದ ಈ ಕೃತಿಯಲ್ಲಿ ಒಟ್ಟು ಒಂಬತ್ತು ಕತೆಗಳಿವೆ. ಆರು ಕಥೆಗಳು ಬೃಂದಾವನ ವಾಣಿಯ ‘ಕಥಾ ಸಮಯ’ ಅಂಕಣದಲ್ಲಿ ಪ್ರಕಟವಾಗಿವೆ. ಕೃತಿಗೆ ಮುನ್ನಡಿ ಬರೆದಿರುವ ಡಾ.ವಸುಂಧರ ಭೂಪತಿ ಅವರು “'ಒಲುಮೆಯಿಂದ ಒಲುಮೆಗೆ' ವಸಂತ ಮತ್ತು ಚಾರುಲತಾರ ಪ್ರೀತಿ ಗುಪ್ತಗಾಮಿನಿಯಾಗಿ ಹರಿದ ಬಗೆಯನ್ನು ಚಿತ್ರಿಸಿದರೆ, ಅವರಿಬ್ಬರು' ಕಥೆ ಸಲಿಂಗಕಾಮವನ್ನು ಸಮಾಜ ನೋಡುವ ದೃಷ್ಟಿಕೋನ ಇನ್ನೂ ಬದಲಾಗದ್ದನ್ನು ತಿಳಿಸುತ್ತದೆ. 'ದಾರಿ ನೂರಿವೆ ನಡೆವಾತಗೆ' ಗ್ರಾಮೀಣ ಜನರ ಸಾಮಾಜಿಕ, ರಾಜಕೀಯ ಪರಿಸ್ಥಿತಿ ಬಿಂಬಿಸಿದರೆ, 'ಒಳಹರಿಗೆ'ಯಲ್ಲಿ ಆಧುನಿಕ ವೈದ್ಯಕೀಯ ತಂತ್ರಜ್ಞಾನದ ಕೊಡುಗೆಯಾದ ಬಾಡಿಗೆ ತಾಯ್ತನದ ತಲ್ಲಣ ತುಮುಲಗಳು ಮನಮುಟ್ಟುವಂತೆ ಭಾವನೆಗಳ ತಾಕಲಾಟಗಳನ್ನು ಪ್ರತಿಬಿಂಬಿಸಿದ್ದಾರೆ. ಸರಿತಾ ನವಲಿಯವರ ಶೈಲಿ ಸರಳವಾಗಿದ್ದು, ಕತೆಗಳು ಸುಲಭವಾಗಿ ಓದಿಸಿ ಕೊಂಡು ಹೋಗುತ್ತವೆ. ತಮ್ಮ ಅನುಭವಲೋಕದ ವಿಸ್ತಾರದೊಂದಿಗೆ ಕತೆಗಳಲ್ಲಿ ಮಹಿಳಾ ಸಂವೇದನೆಯನ್ನು ಕಟ್ಟಿಕೊಟ್ಟ ಬಗೆ ವಿಶಿಷ್ಟ ಹಾಗೂ ಅನನ್ಯ” ಎಂದು ಪ್ರಶಂಸಿಸಿದ್ದಾರೆ.

About the Author

ಸರಿತಾ ನವಲಿ

ಕತೆಗಾರ್ತಿ ಸರಿತಾ ನವಲಿ ಮೂಲತಃ ಹೈದ್ರಾಬಾದ್ ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿಯ ನವಲಿ ಗ್ರಾಮದವರು. ತಮ್ಮ ಶಾಲಾ ಶಿಕ್ಷಣವನ್ನು ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಪೂರೈಸಿ ಕಾಲೇಜು ಮತ್ತು ಸ್ನಾತಕೋತ್ತರ ಪದವಿಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪಡೆದರು.  2004ರಲ್ಲಿ ಭಾರತದಿಂದ ಅಮೆರಿಕಾ ರಾಜ್ಯದ ಫೀನಿಕ್ಸ್‌ಗೆ ತೆರಳಿ ನಂತರ 2005ರಿಂದ ತಮ್ಮ ಪತಿ ಮತ್ತು ಮಗನೊಂದಿಗೆ ನ್ಯೂ ಜೆರ್ಸಿಯಲ್ಲಿ ನೆಲೆಸಿದ್ದಾರೆ. ನ್ಯೂ ಜೆರ್ಸಿಯಲ್ಲಿ 2014 ರಲ್ಲಿ 'ಬೃಂದಾವನ ಕನ್ನಡ ಕೂಟ’ದ  ದೈಮಾಸಿಕ ಪತ್ರಿಕೆ `ಬೃಂದಾವನ ವಾಣಿ'ಯ ಸಂಪಾದಕಿಯಾಗಿದ್ದರು. ಹಲವಾರು ಕತೆ, ಕವಿತೆಗಳು ಕನ್ನಡದ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕನ್ನಡ ನೃತ್ಯ ರೂಪಕಗಳ ಪರಿಕಲ್ಪನೆ-ಸಂಭಾಷಣೆ, ನಿರೂಪಣೆ, ನಾಟಕ ಅನುವಾದ, ನಟನೆ ...

READ MORE

Related Books