ಭಟ್ಟರ ಬೊಂಡಾದ ಬಾಂಡ್ಲಿಯಲ್ಲಿ ಬಿಲಾಲಿ ಬಿಲ್ಲಿ ಅಭ್ಯಂಜನ

Author : ಕೆ. ಅರುಣ್‌ ಪ್ರಸಾದ್‌

Pages 194

₹ 200.00
Year of Publication: 2021
Published by: ಓದುಗ ವಿಮರ್ಶಕ ಬಳಗ
Address: ಆನಂದಪುರಂ, ಸಾಗರ-577412

Synopsys

'ಭಟ್ಟರ ಬೊಂಡಾದ ಬಾಂಡ್ಲಿಯಲ್ಲಿ ಬಿಲಾಲಿ ಬಿಲ್ಲಿ ಅಭ್ಯಂಜನ’ ಕೆ.ಅರುಣ್‌ ಪ್ರಸಾದ್‌ ಅವರ ಕಥಾಸಂಕಲನವಾಗಿದೆ. ಇಲ್ಲಿನ ಕಥೆಗಳ ಕೇಂದ್ರ ಗ್ರಾಮ ಭಾರತವೇ. ಈ 'ಗ್ರಾಮ ಭಾರತ' ಎನ್ನುವುದು ಅನೇಕರಿಗೆ ಶಾಂತಿಯ ತೌರೂರು, ನೆಮ್ಮದಿಯ ನೆಲೆ, ಶಾಂತಿಯೇ ಮೈವೆತ್ತ ಭೂಸ್ವರ್ಗವಾಗಿ ಕಾಣಿಸುತ್ತದೆ. ಇನ್ನು ಕೆಲವರಿಗೆ ಮೂಢನಂಬಿಕೆ, ಸಂಪ್ರದಾಯವಾದ, ಜಾತಿವಾದ, ಶೋಷಣೆ... ಹೀಗೆ ಕಾಣಿಸುತ್ತದೆ.

ಇವೆರಡೂ ಅಲ್ಲದ; ಆದರೆ ಇವೆರಡನ್ನೂ ಒಳಗೊಂಡಿರುವಂತಾದ್ದೇ ನಿಜವಾದ ಗ್ರಾಮ ಭಾರತ ಆ ಭಾರತವನ್ನು ಅರುಣ್ ಪ್ರಸಾದ್ ಅವರು ಲಾಲಿತ್ಯಪೂರ್ಣ ಭಾಷೆಯಲ್ಲಿ ಕೆಲವೊಮ್ಮೆ ಖುಷಿಯಿಂದ, ಕೆಲವೊಮ್ಮೆ ಉದ್ವೇಗದಿಂದ, ಕೆಲವೊಮ್ಮೆ ಗಮ್ಮತ್ತಿನಿಂ ಓದಿಕೊಳ್ಳುವ ಹಾಗೆ ಕತೆಗಳಾಗಿ ಕಟ್ಟಿ ಕೊಟ್ಟಿದ್ದಾರೆ.

ಅರವಿಂದ ಚೊಕ್ಕಾಡಿ ಸಾಹಿತಿಗಳು ಇತ್ತೀಚಿನ ದಿನಗಳಲ್ಲಿ ತಮ್ಮ ಬರಹಗಳ ಮೂಲಕ ನಾಡಿನ ಗಮನ ಸೆಳೆಯುತ್ತಿರುವ ಅರುಣ್ ಪ್ರಸಾದ್ ಅವರ ಈ ಕಥಾಸಂಕಲನ ನನ್ನನ್ನು ಬಿಟ್ಟು ಬಿಡದಂತೆ ಕಾಡಿದ್ದು ಅದರಲ್ಲಿನ ಜೀವನ ಪ್ರೀತಿಗಾಗಿ, ಇಲ್ಲಿರುವ ಕತೆಗಳಲ್ಲಿ ಸಾಮಾನ್ಯ ಜನರೇ ನಾಯಕರು. ಅವರ ಪ್ರೀತಿ, ಮೋಸ, ವಂಚನೆ, ತಂಟೆ, ತಕರಾರು, ಅಮಾಯಕತೆಯ ರೂಪಗಳನ್ನು ಅರುಣ್ ಪ್ರಸಾದ್ ಎಷ್ಟು ಆಪ್ತವಾಗಿ ಹೇಳುತ್ತಾರೆಂದರೆ, ಆ ಕತೆಗಳಲ್ಲಿ ನಾವೂ ಒಂದು ಪಾತ್ರವಾಗಿ ಬೆರೆತು ಹೋಗಿ ಬಿಡುತ್ತೇವೆ ಎನ್ನುತ್ತಾರೆ ಆರ್ ಟಿ ವಿಠಲಮೂರ್ತಿ .

About the Author

ಕೆ. ಅರುಣ್‌ ಪ್ರಸಾದ್‌

ಕೆ.ಅರುಣ್‌ ಪ್ರಸಾದ್‌ ಮೂಲತಃ ಶಿವಮೊಗ್ಗ ಜಿಲ್ಲೆ ಆನಂದಪುರಂನ ಯಡೆಹಳ್ಳಿಯವರು. ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಸಕ್ರಿಯ ರಾಜಕಾರಣದಲ್ಲಿದ್ದು ಹೆಸರು ಮಾಡಿದವರು. ಅತ್ಯುತ್ತಮ ಓದುಗರಾಗಿ, ಸಾಮಾಜಿಕ ಜಾಲತಾಣಗಳಲ್ಲಿ, ಪತ್ರಿಕೆಗಳ ಅಂಕಣಗಳಲ್ಲಿ ಬರಹಗಾರರಾಗಿ ಜನಪ್ರೀತಿಗಳಿಸಿರುವ ಕೆ.ಅರುಣ್‌ ಪ್ರಸಾದ್ ಅಪರೂಪದ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡು ಈ ಕಾದಂಬರಿ ಬರೆದಿದ್ದಾರೆ. ಕೃತಿಗಳು: ಬೆಸ್ತರರ ರಾಣಿ ಚಂಪಕ ...

READ MORE

Related Books