ಇತಿಹಾಸ (ಕಥಾ ಸಂಕಲನ)

Author : ಎಸ್. ದಿವಾಕರ್‌

Pages 92

₹ 125.00




Year of Publication: 2021
Published by: ಪ್ರಿಸಮ್ ಬುಕ್ಸ್ ಪ್ರೈ. ಲಿ.,
Address: #1865, 32ನೇ ಅಡ್ಡರಸ್ತೆ, 10ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು-560070

Synopsys

ಖ್ಯಾತ ಲೇಖಕ-ವಿಮರ್ಶಕ ಎಸ್. ದಿವಾಕರ ಅವರು ರಚಿಸಿದ ಕಥಾ ಸಂಕಲನ-ಇತಿಹಾಸ. ಈ ಸಂಕಲನ ಮೊದಲು 1981ರಲ್ಲಿ, ನಂತರ 2007ರಲ್ಲಿ ಹೀಗೆ ಎರಡು ಆವೃತ್ತಿಯಾಗಿ ಪ್ರಕಟಗೊಂಡಿತ್ತು. ಕೃತಿಯಲ್ಲಿ ಒಟ್ಟು 9 ಕಥೆಗಳಿವೆ. ಖ್ಯಾತ ಸಾಹಿತಿ ಡಾ. ಶಾಂತಿನಾಥ ದೇಸಾಯಿ ಅವರ ಮುನ್ನುಡಿ ಇದೆ. ಕತೆಗಳು ಫ್ಯಾಂಟಸಿ, ಮಾಯಾವಾಸ್ತವ ಅಥವಾ ಮ್ಯಾಜಿಕಲ್ ರಿಯಲಿಸಂ ತಂತ್ರವನ್ನು ಒಳಗೊಂಡಿವೆ.

About the Author

ಎಸ್. ದಿವಾಕರ್‌
(28 November 1944)

ಎಸ್. ದಿವಾಕರ್ ಅವರು 28 ನವೆಂಬರ್ 1944 ರಲ್ಲಿ ಜನಿಸಿದರು.  ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಸೋಮತ್ತನಹಳ್ಳಿಯಲ್ಲಿ. ಸಣ್ಣಕಥೆ, ಕಾವ್ಯ, ಪ್ರಬಂಧ, ವಿಮರ್ಶೆ, ಅಂಕಣ ಬರಹ, ಭಾಷಾಂತರ, ಸಂಪಾದನೆ ಇವೆಲ್ಲದರಲ್ಲಿ ಸ್ವೋಪಜ್ಞತೆ ಮತ್ತು ವಿಶಿಷ್ಟತೆ ಮೆರೆದಿರುವ ಎಸ್. ದಿವಾಕರ್‌, ಸವಿಸ್ತಾರ ಓದಿನ ಜಾಗೃತ ಮನಸ್ಸಿನ ಲೇಖಕರು. ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಅಮೆರಿಕನ್ ಕಾನ್ಸುಲೇಟ್ ಕಚೇರಿಯಲ್ಲಿ ಕನ್ನಡ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಪ್ರಕಟಿತ ಕೃತಿಗಳಾದ  ಇತಿಹಾಸ, ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ ಆಯ್ದ ಕತೆಗಳು (ಕಥಾ ಸಂಕಲನಗಳು), ಆತ್ಮಚರಿತ್ರೆಯ ಕೊನೆಯ ಪುಟ (ಕವನ ಸಂಕಲನ), ನಾಪತ್ತೆಯಾದ ಗ್ರಾಮಾಫೋನು, ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ ...

READ MORE

Related Books