ನಿರಾಭರಣ ಸುಂದರಿ

Author : ದ.ರಾ. ಬೇಂದ್ರೆ (ಅಂಬಿಕಾತನಯದತ್ತ)

Pages 88

₹ 55.00




Year of Publication: 2015
Published by: ಶ್ರೀಮಾತಾ ಪ್ರಕಾಶನ
Address: ವಿಶ್ವಶ್ರಮ ಚೇತನ, ಹುಬ್ಬಳ್ಳಿ-580 003

Synopsys

ಕವಿ ಬೇಂದ್ರೆ ಸಾಹಿತ್ಯಾಸಕ್ತರಿಗೆ ಚಿರಪರಿಚಿತ. ಬೇಂದ್ರೆಯವರು ಕತೆಗಾರರೂ ಆಗಿದ್ದರು. ಕೆಲವು ಪ್ರಬಂಧಗಳನ್ನೂ ರಚಿಸಿದ್ದಾರೆ. ನಿರಾಭರಣ ಸುಂದರಿ ಸಂಕಲನದಲ್ಲಿ ಬೇಂದ್ರೆಯವರು ರಚಿಸಿದ ಕತೆಗಳು ಮತ್ತು ಹರಟೆಗಳಿವೆ. ಫ್ಯಾಂಟಸಿ ರೂಪದ ಕತೆ ರಚಿಸಿರುವ ಬೇಂದ್ರೆಯವರು ಕನ್ನಡ ಕಥಾಲೋಕಕ್ಕೆ ವಿಭಿನ್ನ ಕೊಡುಗೆ ನೀಡಿ‌ದ್ದಾರೆ. ಇದು ಬೇಂದ್ರೆಯವರ ಏಕೈಕ ಕಥಾಸಂಕಲನ. ನಿರಾಭರಣ ಸುಂದರಿ ಮೊದಲ ಬಾರಿಗೆ ಪ್ರಕಟವಾದಾಗ ಅದರಲ್ಲಿ ಹರಟೆಗಳನ್ನೂ ಸೇರಿಸಲಾಗಿತ್ತು. ಇತ್ತೀಚಿನ ಮು‌ದ್ರಣದಲ್ಲಿ ಕೇವಲ ಕತೆಗಳನ್ನು ಮಾತ್ರ ನೀಡಲಾಗಿದೆ.

About the Author

ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
(31 January 1896 - 26 October 1981)

ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ (1913) ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (1918) ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. (1935) ಪದವಿ ಪೂರ್ಣಗೊಳಿಸಿದರು. ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಹುಬ್ಬಳ್ಳಿಯ ನ್ಯೂ ...

READ MORE

Related Books