ನಿತ್ಯ ಜೀವನದ ಸತ್ಯ ಕಥೆಗಳು

Author : ದಿವ್ಯಾ ಶ್ರೀಧರ ರಾವ್

₹ 120.00
Year of Publication: 2022
Published by: ಆರ್ಯ ಪ್ರಕಾಶನ

Synopsys

ಲೇಖಕಿ, ಕತೆಗಾರ್ತಿ ದಿವ್ಯಾ ಶ್ರೀಧರ ರಾವ್ ಅವರ ಕಥಾಸಂಕಲನ ‘ನಿತ್ಯ ಜೀವನದ ಸತ್ಯ ಕಥೆಗಳು’. ವಿಶ್ರಾಂತ ಕನ್ನಡ ಪ್ರಾಧ್ಯಾಪಕರು ಈ ಕೃತಿಯಲ್ಲಿ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಇಲ್ಲಿನ ಎಲ್ಲಾ ಕಥೆಗಳು ಮಹಿಳಾ ಕೇಂದ್ರಿತವಾಗಿವೆ. ಮಹಿಳೆಯರ ಬಗೆ ಬಗೆಯ ಸಮಸ್ಯೆಗಳಿಗೆ ಕಥೆಗಳು ಆಸರೆಯಾಗಿವೆ. ಕಥಾಗಾರ್ತಿ ಮಹಿಳೆಯಾದುದರಿಂದ ಮಹಿಳೆಯರ ಸಮಸ್ಯೆಗಳನ್ನು ಚಿತ್ರಿಸುವಲ್ಲಿ ಯಶಸ್ವೀಯಾಗಿದ್ದಾರೆ. ಸುಮಾರು ಹದಿನಾಲ್ಕು ಕಥೆಗಳಿವೆ. ಹದಿನಾಲ್ಕರಲ್ಲಿ ಹೆಚ್ಚಿನ ಕಥೆಗಳ ಸುತ್ತ ಪ್ರೀತಿಯ ಸಂಕಟವಿದೆ. ಕೆಲವು ಕಡೆ ಪ್ರೀತಿಯ ಸುವಾಸನೆ ಇದೆ. ಪ್ರೀತಿಯ ಬೇರೆ ಬೇರೆ ಮುಖಗಳ ಚಿತ್ರಣಗಳಿವೆ. ಒಬ್ಬಳಲ್ಲಿ ಮೂಡಿದ ಪ್ರೀತಿ ಬೇರೆ ಬೇರೆ ಕಾರಣಗಳಿಂದ ಮುಂದುವರಿಸಲಾಗದಾಗ ಆಗುವ ವೇದನೆಯೂ ಭಾವಪೂರ್ಣವಾಗಿ ಕೆಲವು ಕಥೆಗಳಲ್ಲಿ ಮೂಡಿದೆ ಎಂದಿದ್ದಾರೆ.

About the Author

ದಿವ್ಯಾ ಶ್ರೀಧರ ರಾವ್

ಯಕ್ಷಗಾನ ಪ್ರಸಂಗಕರ್ತೆ, ಲೇಖಕಿ ದಿವ್ಯಾ ಶ್ರೀಧರ ರಾವ್‌ ಅವರು ಮೂಲತಃ ಕುಂದಾಪುರದವರು. 1986 ಜೂನ್ 21 ರಂದು ತೀರ್ಥಹಳ್ಳಿಯಲ್ಲಿ ಹುಟ್ಟಿದ್ದು. ತದನಂತರ ವಿದ್ಯಭ್ಯಾಸ ಕುಂದಾಪುರದಲ್ಲಿ ತನ್ನ ಬಾಲ್ಯವನ್ನು ಕಳೆದಿದ್ದು. ಹೈಸ್ಕೂಲಿಗೆ ಮಂಗಳೂರಿನ ಮೂಲ್ಕಿಯ ಮೊರಾರ್ಜಿ ವಸತಿ ಶಾಲೆ ಸೇರಿ ಮತ್ತೆ ಕಾಲೇಜಿಗೆ ಬೆಂಗಳೂರಿನ ವಾಸವಿ ಕಾಲೇಜಿಗೆ ಸೇರಿ ಬಿಬಿಎಂ ಪದವಿಯನ್ನು 2007 ರಲ್ಲಿ ಮುಗಿಸಿದರು. ಕಾಲೇಜು ದಿನಗಳಲ್ಲಿ ಭಾಷಣ ಹಾಗೂ ಪ್ರಭಂಧಗಳಲ್ಲಿ ಹಲವು ಬಹುಮಾನಗಳನ್ನು ಪಡೆದಿದ್ದರೂ ಬರವಣಿಗೆ ಕಡೆ ಹೆಚ್ಚಿನ ಗಮನವಿರಲಿಲ್ಲ. ತಂದೆಯ ಹೆಸರು ಶ್ರೀಧರ್ ರಾವ್ ಹಾಗೂ ತಾಯಿ ಪದ್ಮಾವತಿ ಎಸ್ ರಾವ್. ಗಂಡನ ಹೆಸರು ಅಶ್ವಿನ್ ...

READ MORE

Related Books