ಬೆಸ್ತರ ಕರಿಯ

Author : ಗೊರೂರು ರಾಮಸ್ವಾಮಿ ಅಯ್ಯಂಗಾರ್

Pages 115

₹ 126.00




Year of Publication: 2022
Published by: ಐಬಿಎಚ್ ಪ್ರಕಾಶನ
Address: #18/1, 2ನೇ ಮುಖ್ಯ ರಸ್ತೆ, ಎನ್. ಆರ್ ಕಾಲೋನಿ, ಬೆಂಗಳೂರು- 560004
Phone: 9845070613

Synopsys

`ಬೆಸ್ತರ ಕರಿಯ’ ಕೃತಿಯು ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಚಿತ್ರಗಳು ಮತ್ತು ಕಥಾಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ಸಾಮಾನ್ಯ ಜನರನ್ನು ತಮ್ಮ ರಚನೆಯ ವಸ್ತುವನ್ನಾಗಿ ಆರಿಸಿಕೊಂಡರೂ ಅವರಲ್ಲಿಯೂ ಉತ್ತಮ ಗುಣಗಳನ್ನು ಕಂಡು ಹೇಳುವ ಶಕ್ತಿಯುವಳ್ಳವರು ಗೋರೂರು ರಾಮಸ್ವಾಮಿ ಅವರು. ಈ ಕೃತಿಯು ಮೊದಲನೇ ಮುದ್ರಣವನ್ನು 1947, ಎರಡನೇ ಮುದ್ರಣ 1952, ಮೂರನೇ ಮುದ್ರಣವನ್ನು 1970, ಪ್ರಸ್ತುತ ನಾಲ್ಕನೇ ಮುದ್ರಣವನ್ನು ಕಂಡಿದೆ. ಇಲ್ಲಿನ ಕತೆಗಳು ಪ್ರತಿಯೊಬ್ಬಬ ವ್ಯಕ್ತಿಯ ಜೀವನವನ್ನು ತಿಳಿಸುತ್ತದೆ. ನಾಗರಿಕರು ಶುಷ್ಕವೆಂದು ಭಾವಿಸುವ ಜನಪದ ಜೀವನದಲ್ಲಿ ಎಂತಹ ಸ್ವಾರಸ್ಯವಿದೆ, ಚೆಲುವಿದೆ ಎಂಬುದನ್ನು, ಸಾಮಾನ್ಯ ಜನ ಎಂತಹ ರಸಿಕರೆಂಬುದನ್ನು ಗೊರೂರರು ತಮ್ಮ ಬರಹಗಳಲ್ಲಿ ಎತ್ತಿ ತೋರಿಸಿದ್ದಾರೆ. ದೈನಂದಿನ ಬದುಕಿನ ಸಾಮಾನ್ಯ ಘಟನೆಗಳಲ್ಲಿ ಮತ್ತು ಸಂಗತಿಗಳಲ್ಲಿ ಹುದುಗಿರುವ ವಿಶೇಷತೆಯನ್ನು ಬಣ್ಣಿಸಿದ್ದಾರೆ. ಅವರು ಎಲ್ಲವನ್ನೂ, ಎಲ್ಲರನ್ನೂ ಅವಲೋಕಿಸುವುದು ಹಾಸ್ಯ ಕಣ್ಣಿನಿಂದ ಎಂಬುದನ್ನು ಇಲ್ಲಿ ಕಾಣಬಹುದು.

About the Author

ಗೊರೂರು ರಾಮಸ್ವಾಮಿ ಅಯ್ಯಂಗಾರ್
(04 July 1904 - 28 September 1991)

ಗಾಂಧಿವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕನ್ನಡದ ಜನಪ್ರಿಯ ಸಾಹಿತಿಗಳಲ್ಲಿ ಒಬ್ಬರಾಗಿದ್ದರು. ಗೊರೂರು ಗ್ರಾಮದಲ್ಲಿ 1904ರ ಜುಲೈ 4ರಂದು ಜನಿಸಿದರು. ತಂದೆ ಶ್ರೀನಿವಾಸ ಅಯ್ಯಂಗಾರ್ ತಾಯಿ ಲಕ್ಷ್ಮಮ್ಮ. ಗೊರೂರಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮುಗಿಸಿದ ಮೇಲೆ ಹಾಸನದಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆಯುತ್ತಿದ್ದಾಗಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು. ಅನಂತರ ಗುಜರಾತ್ ಗಾಂಧಿ ಆಶ್ರಮದಲ್ಲಿದ್ದ ವಿದ್ಯಾ ಪೀಠದಲ್ಲಿ ಓದು ಮುಂದುವರೆಸಿದರು. ಅನಂತರ ಪತ್ರಿಕಾರಂಗ ಪ್ರವೇಶಿಸಿದರು. ಮದರಾಸಿನ `ಲೋಕಮಿತ್ರ’ ಆಂಧ್ರ ಪತ್ರಿಕೆ `ಭಾರತಿ’ ಪತ್ರಿಕೆಗಳಲ್ಲಿ ಉಪಸಂಪಾದಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದರು. 1952ರಲ್ಲಿ ವಿಧಾನಸಭೆಗೆ ನಾಮಕರಣಗೊಂಡಿದ್ದ ಅವರು ಅದಕ್ಕೂ ...

READ MORE

Related Books