ಸ್ತ್ರೀವಾದಿ ಜನಪದ ಕಥೆಗಳು

Author : ಜೀನಹಳ್ಳಿ ಸಿದ್ಧಲಿಂಗಪ್ಪ

Pages 120

₹ 75.00
Year of Publication: 2001
Published by: ಪ್ರೇಮ ಪ್ರಕಾಶನ
Address: ಜೀನಹಳ್ಳಿ ಅಂಚೆ, ನ್ಯಾಮತಿ ಮಾರ್ಗ, ದಾವಣಗೆರೆ ಜಿಲ್ಲೆ-577223

Synopsys

‘ಸ್ತ್ರೀವಾದಿ ಜನಪದ ಕಥೆಗಳು’ ಜೀನಹಳ್ಳಿ ಸಿದ್ಧಲಿಂಗಪ್ಪ ಅವರ ಸಂಪಾದನೆಯ ಕಥಾಸಂಕಲನವಾಗಿದೆ. ಮನುಷ್ಯೇತರ ಪಾತ್ರಗಳು ನಿರ್ವಹಿಸಿದರೂ ಅಲ್ಲಿನ ಮೂಲಚಿಂತನೆಗೆ ಗ್ರಾಸ ಮಾನವ ಬದುಕಿನ ಒಳಿತು-ಕೆಡುಕುಗಳೇ ಆಗಿರುತ್ತವೆ. ಜಾನಪದ ಕಥೆಗಳಲ್ಲೂ ಸ್ತ್ರೀಪರವಾಗಿ ನಿಂತು ಯೋಚಿಸುವ ಕೆಲವು ಕಥೆಗಳನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.

About the Author

ಜೀನಹಳ್ಳಿ ಸಿದ್ಧಲಿಂಗಪ್ಪ
(17 May 1958)

ಲೇಖಕ ಜೀನಹಳ್ಳಿ ಸಿದ್ಧಲಿಂಗಪ್ಪ ದಾವಣಗೆರೆ ಜಿಲ್ಲೆಯ, ನ್ಯಾಮತಿ ತಾಲೂಕಿನ ಜೀನಹಳ್ಳಿಯವರು. ತಂದೆ- ಎಂ. ತೀರ್ಥಪ್ಪ, ತಾಯಿ- ನಿಂಗಮ್ಮ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಜೀನಹಳ್ಳಿಯಲ್ಲಿ ಹಾಗೂ ಪಿ.ಯು.ಸಿಯನ್ನು ನ್ಯಾಮತಿಯಲ್ಲಿ, ಬಿ.ಎ.ಪದವಿಯನ್ನು ಶಿವಮೊಗ್ಗದಲ್ಲಿ ಪೂರ್ಣಗೊಳಿಸಿದರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎ ಪದವಿ ಪಡೆದರು. ಶಿಕಾರಿಪುರ, ಬೆಮಿಲ್ ಖೇಡ(ಹುಮನಾಬಾದ ತಾಲೂಕು) ಅಜ್ಜಂಪುರ ಕಾಲೇಜುಗಳಲ್ಲಿ ಗುತ್ತಿಗೆ ಕನ್ನಡ ಉಪನ್ಯಾಸಕರಾಗಿ(1980-1983) ಕಾರ್ಯನಿರ್ವಹಿಸಿದರು. 1983 ರಲ್ಲಿ ಸರಕಾರಿ ಕೆಲಸಕ್ಕೆ ಸೇರಿ ಬೆಂಗಳೂರು, ಮೈಸೂರಿನ ಶಿಕ್ಷಣ ಇಲಾಖೆಯ ಕಛೇರಿಗಳಲ್ಲಿ ಅಧೀಕ್ಷಕರು, ಪತ್ರಾಂಕಿತ ವ್ಯವಸ್ಥಾಪಕರು, ಪತ್ರಾಂಕಿತ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಜನಪದ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ...

READ MORE

Reviews

ಹೊಸತು-2002-ಏಪ್ರಿಲ್‌

ಜಾನಪದ ಕಥೆಗಳು ಗ್ರಾಮ್ಯ ಭಾಷೆಯಲ್ಲಿ ಕೇಳಿದರೇನೆ ಅದಕ್ಕೆ ಸ್ವಾರಸ್ಯ-ಸೊಗಸು ಎಲ್ಲಿಲ್ಲದ ಗತ್ತು ಬಂದುಬಿಡುತ್ತದೆ. ಎಲ್ಲಕಥೆಗಳಲ್ಲೂ ಒಂದು ''ದಾಟಲಾರದ ಗೆರೆ' ಇರುತ್ತದೆ. ಮನುಷ್ಯ ಹೇಳಬೇಕಾದುದನ್ನು ಪ್ರಾಣಿ-ಪಕ್ಷಿ-ಮರ - ಇನ್ನೂ ಏನೇನೋ, ಮನುಷ್ಯತರ ಪಾತ್ರಗಳು ನಿರ್ವಹಿಸಿದರೂ ಅಲ್ಲಿನ ಮೂಲಚಿಂತನೆಗೆ ಗ್ರಾಸ ಮಾನವ ಬದುಕಿನ ಒಳಿತು-ಕೆಡುಕುಗಳೇ ಆಗಿರುತ್ತವೆ. ಜಾನಪದ ಕಥೆಗಳಲ್ಲೂ ಸ್ತ್ರೀಪರವಾಗಿ ನಿಂತು ಯೋಚಿಸುವ ಕೆಲವು ಕಥೆಗಳನ್ನು ಮಹಿಳೆಯರಿಂದಲೇ ಹೇಳಿಸಲಾಗಿದೆ.

Related Books